ವಾಷಿಂಗ್ಟನ್ : 'ಅಪ್ಘಾನಿಸ್ತಾನ'ದಲ್ಲಿ ಅಮೆರಿಕ ಕಳೆದ 13ವರ್ಷಗಳಿಂದ ನಡೆಸುತ್ತಿದ್ದ ತನ್ನ ಯುದ್ಧ ಕಾರ್ಯಾಚರಣೆಯನ್ನು ಡಿ.29ರಂದು ಅಧಿಕೃತವಾಗಿ ಸ್ಥಗಿತಗೊಳಿಸಿದ್ದು, ಸೇನಾಪಡೆಯನ್ನು ವಾಪಸ್ ಕರೆಸಿಕೊಂಡಿದೆ.
ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಅಪ್ಘಾನಿಸ್ತಾನ ಇನ್ನೂ ಅಪಾಯಕಾರಿ ದೇಶವಾಗಿದೆ ಎಂದು ಹೇಳಿದ್ದಾರೆ. ಕಳೆದ 13 ವರ್ಷಗಳಿಂದ ಅಮೆರಿಕಾ ಸೇನಾಪಡೆ ಕಾರ್ಯಾಚರಣೆ ನಡೆಸುತ್ತಿದ್ದರೂ ಅಪ್ಘಾನಿಸ್ತಾನ ಇನ್ನೂ ಅಪಾಯಕಾರಿ ದೇಶವಾಗಿಯೇ ಮುಂದುವರೆದಿದೆಎಂದರು.
ಉಗ್ರರ ವಿರುದ್ಧ ಹೋರಾಡುವುದಕ್ಕೆ ಅಪ್ಘಾನ್ ಸೇನೆಗೆ ಅಮೆರಿಕಾ ತರಬೇತಿ ಸಲಹೆ ನೀಡಲಿದೆ ಎಂದು ಬರಾಕ್ ಒಬಾಮ ತಿಳಿಸಿದ್ದಾರೆ. 13,000 ಸೇನಾ ತುಕಡಿಗಳಲ್ಲಿ ಅಮೆರಿಕಾದ ಸುಮಾರು 10,800 ಸಿಬ್ಬಂದಿಗಳು ಇರಲಿದ್ದು ಸಹಾಯಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಯು.ಎಸ್ ಮೇಲೆ ದಾಳಿ ನಡೆದ ನಂತರ 2001ರ ಅಕ್ಟೋಬರ್ ನಲ್ಲಿ ಅಪ್ಘಾನಿಸ್ತಾನದ ಉಗ್ರರ ವಿರುದ್ಧ ಯುದ್ಧ ಘೋಷಿಸಿತ್ತು.