Untitled Document
Sign Up | Login    
Dynamic website and Portals
  
May 4, 2015

ಒಬಾಮಾ ಭಾರತ ಭೇಟಿ ವಿಚಾರ: ಖರ್ಚು-ವೆಚ್ಚದ ವಿವರ ನೀಡಲು ಕೇಂದ್ರ ನಕಾರ

ಒಬಾಮಾ ಭಾರತ ಭೇಟಿ ವಿಚಾರ: ಖರ್ಚು-ವೆಚ್ಚದ ವಿವರ ನೀಡಲು ಕೇಂದ್ರ ನಕಾರ

ನವದೆಹಲಿ : ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂರ್ಭದಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ವಿವರ ನೀಡಿ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಜಾಮಾಡಿದೆ.

ಈ ಮಾಹಿತಿ ತುಂಬಾ ಸೂಕ್ಷ್ಮವಾದದ್ದು. ಇಂತಹ ಮಾಹಿತಿ ಹೊರಬಿದ್ದರೆ ಉಭಯ ದೇಶಗಳ ಸಂಬಂಧಕ್ಕೆ ಧಕ್ಕೆ ಉಂಟಾಗಲಿದೆ ಎಂದು ಕಾರಣ ನೀಡಿದೆ.

ಜನವರಿ ತಿಂಗಳಿನಲ್ಲಿ ಬರಾಕ್ ಒಬಾಮಾ ಭಾರತಕ್ಕೆ ಅತಿಥಿಯಾಗಿ ಆಹ್ವಾನಿಸಿ ಕರೆಸಿಕೊಂಡಿದ್ದು, ಆ ಸಂದರ್ಭದಲ್ಲಿ ಭಾರತ ಸರ್ಕಾರ ಒಟ್ಟು ಎಷ್ಟು ಖರ್ಚು ಮಾಡಿದೆ ಎಂಬ ವಿವರ ನೀಡಿ ಎಂದು ಮುಂಬೈ ಮೂಲದ ಸಾಮಾಜಿಕ ಕಾರ್ಯಕರ್ತ ಅನಿಲ್ ಗಾಲ್ ಗಾಲಿ ಎಂಬುವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಒಬಾಮಾ ಜೊತೆ ಬಂದಿದ್ದ ಗಣ್ಯರಿಗೆ, ಭದ್ರತಾ ಸಿಬ್ಬಂದಿಗಳಿಗೆ ನೀಡಿರುವ ವಸತಿ ಸೌಲಭ್ಯ, ಒಬಾಮಾ ಬಂದಾಗ ಅವರಿಗೆ ನೀಡಿದ್ದ ಭದ್ರತೆ ವ್ಯವಸ್ಥೆ ಕುರಿತು ವಿವರ ನೀಡಿ ಎಂದು ಕೋರಿದ್ದರು.

ಅರ್ಜಿಗೆ ಪ್ರತಿಕ್ರಿಯೆ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಾಯಕ ವರಿಷ್ಠಾಧಿಕಾರಿ ರೋಹಿತ್ ರಾತೀಶ್, ಪ್ರತಿವರ್ಷ ಭಾರತ ಸರ್ಕಾರ ವಿವಿಧ ದೇಶಗಳ ಗಣ್ಯರನ್ನು ಆಹ್ವಾನಿಸುತ್ತದೆ. ಭೇಟಿ ನೀಡುವ ಪ್ರತಿ ಗಣ್ಯರ ವಿಧವೂ ಬೇರೆ ಬೇರೆಯಾಗಿರುತ್ತದೆ. ಆದರೆ ಪ್ರತಿಸಲವೂ ಭಾರತಕ್ಕೆ ಭೇಟಿ ನೀಡುವ ಗಣ್ಯರ ಆಗಮನ ತುಂಬಾ ವಿಶಿಷ್ಟವಾದದ್ದು. ಈ ನಿಟ್ಟಿನಲ್ಲಿ ಗಣ್ಯರ ಆಧಾರದ ಮೇಲೆ ಭಾರತ ಸರ್ಕಾರ ಖರ್ಚು, ವೆಚ್ಚ ನೋಡಿಕೊಳ್ಳುತ್ತದೆ. ಸರ್ಕಾರಕ್ಕೂ ಇದು ತುಂಬಾ ಸೂಕ್ಷ್ಮವಾದ ವಿಷಯವಾಗಿದೆ. ಹಾಗಾಗಿ ತಾವು ಕೇಳಿರುವ ಮಾಹಿತಿ ಬಹಿರಂಗವಾದರೆ ಉಭಯ ದೇಶಗಳ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited