Untitled Document
Sign Up | Login    
Dynamic website and Portals
  
October 31, 2014

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಕರೆಗೆ 50 ರಾಷ್ಟ್ರಗಳ ಬೆಂಬಲ

ಯೋಗ(ಸಂಗ್ರಹ ಚಿತ್ರ) ಯೋಗ(ಸಂಗ್ರಹ ಚಿತ್ರ)

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಯು.ಎನ್.ಜಿ.ಎ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕರೆಗೆ ವಿಶ್ವದ ಅನೇಕ ದೇಶಗಳ ಬೆಂಬಲ ವ್ಯಕ್ತವಾಗಿದೆ.

ಈಗಾಗಲೇ ಜಪಾನ್, ಅಮೆರಿಕಾ, ಕೆನಡಾ, ಚೀನಾ ಸೇರಿದಂತೆ ವಿಶ್ವದ ಸುಮಾರು 50 ದೇಶಗಳು ಜೂ.21ರಂದು ವಿಶ್ವ ಯೋಗ ದಿನವನ್ನಾಗಿ ಆಚರಣೆ ಮಾಡುವ ಪ್ರಧಾನಿ ಮೋದಿ ಅವರ ಕರೆಗೆ ಓಗೊಟ್ಟಿವೆ.

ಭಾರತೀಯ ಪುರಾತನ ಪದ್ಧತಿಗಳಲ್ಲಿ ಒಂದಾದ 'ಯೋಗ ಪದ್ಧತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲು, ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸಬೇಕೆಂದು ಪ್ರಧಾನಿ ಮೋದಿ ಯು.ಎನ್.ಜಿ.ಎ ಸಭೆಯಲ್ಲಿ ಕರೆ ನೀಡಿದ್ದರು. ಈ ಸಂಬಂಧ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಲು 50 ರಾಷ್ಟ್ರಗಳು ಭಾರತದೊಂದಿಗೆ ಕೈಜೋಡಿಸಿವೆ.

ಭಾರತದ ನೆರೆ ರಾಷ್ಟ್ರಗಳಾದ ಚೀನಾ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶಗಳಲ್ಲದೆ, ಇಂಡೋನೇಷಿಯಾ, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ, ನೈಜೀರಿಯಾ ಬ್ರೆಜಿಲ್, ಅರ್ಜೆಂಟೀನಾ ರಾಷ್ಟ್ರಗಳೂ ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಬೆಂಬಲ ವ್ಯಕ್ತಪಡಿಸಿರುವುದು ವಿಶೇಷವಾಗಿದೆ. ಸೆಪ್ಟೆಂಬರ್ ನಲ್ಲಿ ಅಮೆರಿಕಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ, ಉತ್ತಮ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸುವ ನಿಟ್ಟಿನಲ್ಲಿ ಯೋಗ ಪದ್ಧತಿಯ ಅಗತ್ಯತೆಯನ್ನು ನರೇಂದ್ರ ಮೋದಿ ಪ್ರಸ್ತಾಪಿಸಿದ್ದರು. ಅಲ್ಲದೇ ಯೋಗ ಪದ್ಧತಿಯ ರೂಢಿಸಿಕೊಳ್ಳುವುದರಿಂದ ಉಂಟಾಗುವ ಲಾಭವನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಮೋದಿ ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ನಿಟ್ಟಿನಲ್ಲಿ ವಿಶ್ವ ಸಂಸ್ಥೆಯಲ್ಲಿ ನಿರ್ಣಯ ಮಂಡಿಸಲು ವಿಶ್ವಾದ್ಯಂತ 50 ರಾಷ್ಟ್ರಗಳು ಉತ್ಸುಕವಾಗಿರುವುದು ವಿಶೇಷವಾಗಿದೆ.

 

 

Share this page : 
 

Readers' Comments (1)

Alen Cruz09-06-2019:10:10:12 am

This is a very good post .Thanks for letting us know some good tips . I like your many articles it will help not only me and also many newbie check out Best FB Dowloader now

Select Language : 
Press F12 to toggle Indian language and English
Your Name : 
Characters Remaining: 5000
 
 

More News From : Health

ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
 • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ
 • ಗವ್ಯ ಚಿಕಿತ್ಸಾ - ರಾಷ್ಟೀಯ ವಿಚಾರ ಸಂಕಿರಣ’ದ ಸಮಾರೋಪ ಸಮಾರಂಭ
 • ಉದ್ಯಾನ ವನದಲ್ಲಿ ಉದಯರಾಗ
 • ರಾಜ್ಯದಲ್ಲಿ ಆಹಾರ ಆಯೋಗ ರಚನೆ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited