ನವದೆಹಲಿ : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ಭಾರತಕ್ಕೆ ಬೆಳಿಗ್ಗೆ ಆಗಮಿಸಿದ್ದಾರೆ.
ದೆಹಲಿಯ ಪಾಲಂ ವಾಯುನೆಲೆಯಲ್ಲಿ ವಿಶೇಷ ವಿಮಾನದಲ್ಲಿ ಬಂದಿಳಿದ ಒಬಾಮ ದಂಪತಿಯನ್ನು ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಸ್ವಾಗತಿಸಿದರು.
ಸಿಗದಿತ ಸಮಯಕ್ಕೆ 15 ನಿಮಿಷ ಮುಂಚಿತವಾಗಿ ವಿಮಾನದಿಂದ ಇಳಿದ ಒಬಾಮಾ ದಂಪತಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಆಲಂಗಿಸಿ ಕುಶಲೋಪರಿ ವಿಚಾರಿಸಿದರು.
ಐಟಿಸಿ ಮೌರ್ಯ ಹೋಟೆಲ್ನಲ್ಲಿ ಒಬಾಮ ದಂಪತಿ ಕೆಲ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಒಬಾಮ ಭೇಟಿ ನೀಡಿದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, 500 ಕಿ.ಮೀ ವ್ಯಾಪ್ತಿಯಲ್ಲಿ ವಿಮಾನ ಹಾರಾಟ ಬಂದ್ ಮಾಡಲಾಗಿದೆ. ದೆಹಲಿಯ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ನೀಯೋಜಿಸಲಾಗಿದ್ದು, ಭದ್ರತೆಗಾಗಿ ಒಟ್ಟು 60 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಒಬಾಮ ಇಂದಿನ ಕಾರ್ಯಕ್ರಮ :
ಮಧ್ಯಾಹ್ನ 12.00: ರಾಷ್ಟ್ರಪತಿ ಭವನದಲ್ಲಿ ಗೌರವವಂದನೆ ಸ್ವೀಕಾರ.
ಮಧ್ಯಾಹ್ನ12.40 : ಮಹಾತ್ಮ ಗಾಂಧಿ ಸಮಾಧಿ ಸ್ಥಳ ರಾಜ್ಘಾಟ್ಗೆ ತೆರಳಿ ಗೌರವ ಸಮರ್ಪಣೆ. ಭೇಟಿ ಸ್ಮರಣಾರ್ಥ ಸಸಿ ನೆಡುವಿಕೆ.
ಮಧ್ಯಾಹ್ನ2.45 : ಔತಣ ಕೂಟದ ಬಳಿಕ ಪ್ರಧಾನಿ ಮೋದಿ ಜತೆ ನಡೆದಾಡುತ್ತಲೇ ಮಾತುಕತೆ (ವಾಕ್ ಆ್ಯಂಡ್ ಟಾಕ್).ಅದಾದ ಬಳಿಕ ದ್ವಿಪಕ್ಷೀಯ ಮಟ್ಟದ ಮಾತುಕತೆ.
ಸಂಜೆ:4.10 : ಒಬಾಮಾ- ಮೋದಿಯಿಂದ ಜಂಟಿ ಪತ್ರಿಕಾಗೋಷ್ಠಿ.
ರಾತ್ರಿ 7.35: ಐಟಿಸಿ ಮೌರ್ಯ ಹೋಟೆಲ್ನಲ್ಲಿ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ, ಕುಟುಂಬ ವರ್ಗದವರೊಂದಿಗೆ ಸಮಾಲೋಚನೆ.
ರಾತ್ರಿ 7.50 : ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಔತಣ ಕೂಟದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಭವನಕ್ಕೆ ಪ್ರಯಾಣ