Untitled Document
Sign Up | Login    
Dynamic website and Portals
  
January 15, 2015

ಜನವರಿ 25 ರಿಂದ ಒಬಾಮಾ ಭಾರತ ಪ್ರವಾಸ

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ

ನವದೆಹಲಿ : ಜ.25 ರಿಂದ 27ರವರೆಗೆ ಒಬಾಮಾ ಭಾರತ ಪ್ರವಾಸ
ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಜನವರಿ 25 ರಿಂದ 27 ರವರೆಗೆ ಭಾರತ ಪ್ರವಾಸ ಮಾಡಲಿದ್ದಾರೆ.

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭಕ್ಕೆ ಒಬಾಮಾ ಮುಖ್ಯ ಅಥಿತಿಯಾಗಿರುತ್ತಾರೆ ಹಾಗೂ ಆಗ್ರಾದ ತಾಜ್ ಮಹಲ್ ಗೆ ಕೂಡ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಭೇಟಿಯ ವೇಳೆಯಲ್ಲಿ ಒಬಾಮ ಅವರ ಪತ್ನಿ ಮಿಶೆಲ್ ಜೊತೆಗಿರುತ್ತಾರೆ ಎಂದು ಮೂಲಗಳು ತಿಳಿಸಿವೆ.

ಈ ಭೇಟಿಗೂ ಮುನ್ನ ರಾಷ್ಟ್ರದ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಮೇರಿಕಾದ ಗುಪ್ತಚರ ಇಲಾಖೆಯ ಒಂದು ತಂಡ ಕೂಡ ಆಗಲೇ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದು, ಭಾರತೀಯ ಗುಪ್ತಚರದಳದೊಂದಿಗೆ ಮಾತುಕತೆ ನಡೆಸಿದೆ.

ಜ.16ರಂದು ಎರಡೂ ದೇಶದ ಭದ್ರತಾ ಪಡೆಗಳ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಅಂದೆ ಒಬಾಮ ಪ್ರವಾಸದ ಅಂತಿಮ ವಿವರಗಳು ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited