Untitled Document
Sign Up | Login    
Dynamic website and Portals
  
January 29, 2015

ಶಿರಚ್ಛೇದನ ಮಾಡ್ತೇವೆ ಎಂದು ಒಬಾಮಾಗೆ ಐಸಿಎಸ್ ಬೆದರಿಕೆ

Barak Obama (File Pic) Barak Obama (File Pic)

ವಾಷಿಗ್ಟನ್ : ಅಮೆರಿಕವನ್ನು ಮುಸ್ಲಿಂ ದೇಶವನ್ನಾಗಿ ಪರಿವರ್ತಿಸಬೇಕು ಇಲ್ಲದಿದ್ರೆ ಶ್ವೇತಭವನಕ್ಕೆ ನುಗ್ಗಿ ಶಿರಚ್ಛೇದನ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಐಸಿಎಸ್ ಉಗ್ರರು ಬೆದರಿಕೆ ಹಾಕಿದ್ದಾರೆ.

ಇಸ್ಲಾಂ ಅನ್ನು ಯಾರು ವಿರೋಧಿಸುತ್ತಾರೋ, ಅವರು ಯಾರೇ ಆಗಲಿ ಅವರಿಗೆ ಇದೇ ಗತಿ. ಒಬಾಮಾ ನಿಮಗೂ ಗೊತ್ತಿರಲಿ. ನಾವು ಅಮೆರಿಕವನ್ನು ತಲುಪಿದ್ದೇವೆ. ಅದೇ ರೀತಿ ನಾವು ಶ್ವೇತಭವನಕ್ಕೆ ನುಗ್ಗಿ ನಿಮ್ಮ ಶಿರಚ್ಛೇದನ ಮಾಡ್ತೇವೆ. ನಂತರ ಅಮೆರಿಕವನ್ನು ಮುಸ್ಲಿಂ ಪ್ರಾಂತ್ಯಗಳನ್ನಾಗಿ ಪರಿವರ್ತಿಸುತ್ತೇವೆ ಎಂದು ಐಸಿಸ್ ಉಗ್ರನೊಬ್ಬ ಬೆದರಿಕೆ ಹಾಕಿರುವ ವಿಡಿಯೋದಲ್ಲಿ ಎಚ್ಚರಿಕೆ ನೀಡಲಾಗಿದೆ.

ಓ ಒಬಾಮಾ... ಪ್ರತಿ ಬಾರಿ ನೀನು ಕ್ಷಿಪಣಿ ಬಳಸಿದಾಗ ನಿನ್ನ ಸೈನಿಕ ಪಡೆಯ ರುಂಡಗಳನ್ನು ಉತ್ತರವಾಗಿ ಕಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಮೆಸೂಲ್ ನಗರದ ಶಾಂತಿ ಕದಡಿ, ಬಾಂಬ್ ದಾಳಿ ನಡೆಸಿ ನಾಶ ಮಾಡಿರುವ ಚಿತ್ರವನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ವೀಡಿಯೋದಲ್ಲಿ ಸೆರೆ ಸಿಕ್ಕ ವಿದೇಶಿ ಸೈನಿಕರು, ಪತ್ರಕರ್ತರ ನೂರಾರು ಜನರ ಹರ್ಷೋದ್ಘಾರಗಳ ನಡುವೆ ಶಿರಚ್ಛೇದ ಮಾಡುತ್ತಿರುವ ಚಿತ್ರಗಳಿವೆ. ಮುಖವಾಡ ಧರಿಸಿರುವ ಐಎಸ್‌ ಐಎಸ್ ಉಗ್ರನೊಬ್ಬ ಮುಂದೆ ತಾವು ಅಮೆರಿಕ, ಫ್ರಾನ್ಸ್, ಬೆಲ್ಜಿಯಂ, ಖುರ್ದ್ಸ್ ಹಾಗೂ ಇತರ ದೇಶಗಳ ಮೇಲೆ ವಿಧ್ವಂಸಕಾರಿ ದಾಳಿ ನಡೆಸುವುದಾಗಿ ಘೋಷಿಸಿದ್ದಾನೆ. ಈ ವಿಡಿಯೋವನ್ನು ಉಗ್ರರು ಜ.26 ರಂದು ಪ್ರಕಟಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited