Untitled Document
Sign Up | Login    
Dynamic website and Portals
  
November 14, 2014

ಡಬ್ಲ್ಯೂಟಿಒ ಒಪ್ಪಂದ: ಭಾರತಕ್ಕೆ ಶರಣಾದ ಒಬಾಮರಿಂದ ಮೋದಿ ಗುಣಗಾನ

ಬರಾಕ್ ಒಬಾಮ-ಪ್ರಧಾನಿ ನರೇಂದ್ರ ಮೋದಿ ಬರಾಕ್ ಒಬಾಮ-ಪ್ರಧಾನಿ ನರೇಂದ್ರ ಮೋದಿ

ಮಾಯನ್ಮಾರ್ : ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ ವ್ಯಾಪಾರ ಸೌಲಭ್ಯ ಒಪ್ಪಂದದ (ಟಿಎಫ್‌ಎ)ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಇದ್ದ ಭಿನ್ನಾಭಿಪ್ರಾಯ ಪರಿಹರಿಸಲು ಯಶಸ್ವಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೊಂಡಾಡಿದ್ದಾರೆ.

ಆಹಾರ ಭದ್ರತೆ ವಿಚಾರ ಮುಂದಿಟ್ಟ ಕೊಂಡು ವಾಣಿಜ್ಯ ಸೌಲಭ್ಯ ಒಪ್ಪಂದ(ಟಿಎಫ್‌ಎ)ವನ್ನು ವಿರೋಧಿಸಿದ್ದ ಭಾರತಕ್ಕೆ ಕೊನೆಗೂ ಅಮೆರಿಕ ಮಣಿದಿದೆ. ಪ್ರಧಾನಿ ನರೇಂದ್ರ ಮೋದಿ, ಟಿ.ಫ್.ಎ ಒಪ್ಪಂದದ ವಿಷಯವನ್ನು ನಿರ್ವಹಿಸಿದ ರೀತಿ ಹಾಗೂ ಅಭಿನ್ನಾಭಿಪ್ರಾಯ ಕೊನೆಗಾಣಿಸಲು ಕಂಡುಕೊಂಡ ಮಾರ್ಗಕ್ಕೆ ಒಬಾಮ ಸಂತಸ ವ್ಯಕ್ತಪಡಿಸಿದ್ದಾರೆ.

ಆಸಿಯಾನ್ ಶೃಂಗಸಭೆಯಲ್ಲಿ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಮೋದಿ ಅವರನ್ನು 'man of action' ಎಂದು ಬಣ್ಣಿಸಿದ್ದರು. ಇದೀಗ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯೂಟಿಒ)ಯ ವ್ಯಾಪಾರ ಸೌಲಭ್ಯ ಒಪ್ಪಂದದ (ಟಿಎಫ್‌ಎ) ಕುರಿತು ಮೋದಿ ತೆಗೆದುಕೊಂಡ ನಿರ್ಧಾರ ಹಾಗೂ ನಿರ್ವಹಣೆ ರೀತಿಗೆ ಒಬಾಮ ಬೆರಗಾಗಿದ್ದಾರೆ.

ಅಮೆರಿಕಾ-ಭಾರತ ಎರಡೂ ರಾಷ್ಟ್ರಗಳು ಈ ವಿಚಾರದಲ್ಲಿ ಒಮ್ಮತಕ್ಕೆ ಬಂದಿದ್ದು, ಒಪ್ಪಂದದ ಅನುಷ್ಠಾನದ ಹಾದಿ ಸುಗಮವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಸೂಕ್ತ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳುವವರೆಗೆ ಭಾರತದ ಆಹಾರ ಭದ್ರತಾ ಯೋಜನೆಯನ್ನು ಯಾವುದೇ ಅಡೆತಡೆಯಿಲ್ಲದೇ ಅನುಷ್ಠಾನಕ್ಕೆ ತರವುದಕ್ಕೂ ಅಮೆರಿಕ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಾಲಾ ಸೀತಾರಾಮನ್ ಹೇಳಿದ್ದಾರೆ. ಆಹಾರ ಭದ್ರತೆಗೆ ಸಂಬಂಧಿಸಿದಂತೆ ಕಾಯಂ ಪರಿಹಾರ ಕಂಡುಕೊಳ್ಳುವ ವರೆಗೆ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಭಾರತ ಜಿನೀವಾದಲ್ಲಿ ಸ್ಪಷ್ಟವಾಗಿ ಸಾರಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited