Untitled Document
Sign Up | Login    
Dynamic website and Portals
  
December 1, 2015

ಜಾಗತಿಕ ತಾಪದ ವಿರುದ್ಧ ಪ್ಯಾರಿಸ್ ನಲ್ಲಿ ಶೃಂಗಸಭೆ ಆರಂಭ

ಜಾಗತಿಕ ತಾಪದ ವಿರುದ್ಧ ಪ್ಯಾರಿಸ್ ನಲ್ಲಿ ಶೃಂಗಸಭೆ ಆರಂಭ

ಪ್ಯಾರಿಸ್ : 130 ಜನರನ್ನು ಬಲಿ ಪಡೆದ ಪ್ಯಾರಿಸ್‌ ಭಯೋತ್ಪಾದಕ ದಾಳಿಯ ಕರಿನೆರಳಿನಲ್ಲಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ 12 ದಿನಗಳ ವಿಶ್ವ ನಾಯಕರ ಜಾಗತಿಕ ತಾಪಮಾನದ ವಿರುದ್ಧದ ಶೃಂಗಸಭೆ ಸೋಮವಾರದಿಂದ ಆರಂಭವಾಗಿದೆ.

ಈ ಮಹಾಸಭೆಗೆ ಸುಮಾರು 9 ಸಾವಿರ ಮಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ರಷ್ಯಾ ಅಧ್ಯಕ್ಷ ಪುಟಿನ್‌ ಸೇರಿದಂತೆ ವಿಶ್ವದ 150 ನಾಯಕರು ಈ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಮುಖ್ಯ ನಾಯಕರೆಲ್ಲಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮರಳಲಿದ್ದಾರೆ. ಈ ಸಂದರ್ಭದಲ್ಲೇ ಮಹತ್ವದ ಘೋಷಣೆಗಳು ಹೊರಬೀಳುವ ನಿರೀಕ್ಷೆ ಇದೆ. ಶೃಂಗ ಸಭೆಗೆ ಆಗಮಿಸಿದ ವಿಶ್ವ ನಾಯಕರನ್ನು ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲಾಂಡೆ ಅವರು ಖುದ್ದಾಗಿ ಸ್ವಾಗತಿಸಿದ್ದಾರೆ.

ಸದ್ಯ 2.7 ರಿಂದ 3 ಡಿಗ್ರಿಯಷ್ಟಿರುವ ಜಾಗತಿಕ ತಾಪವನ್ನು ಕೈಗಾರಿಕೀಕರಣದ ಪೂರ್ವದಲ್ಲಿನ 2 ಡಿಗ್ರಿಯ ಮಟ್ಟಕ್ಕೆ ತರುವುದು ಹೇಗೆಂಬುದರ ಕುರಿತು ಚರ್ಚಿಸಿ, ಪರಿಹಾರ ಸೂಚಿಸುವ ಒಪ್ಪಂದ ಈ ಶೃಂಗದಲ್ಲಿ ಏರ್ಪಡುವ ನಿರೀಕ್ಷೆ ಇವೆ. ಒಂದು ವೇಳೆ ಜಾಗತಿಕ ತಾಪಮಾನ ಕೈಗಾರಿಕೀಕರಣ ಪೂರ್ವದಲ್ಲಿದ್ದ 2 ಡಿಗ್ರಿಯಷ್ಟು ಹೆಚ್ಚಾದರೂ ಈ ಶತಮಾನದ ಅಂತ್ಯದೊತ್ತಿಗೆ ಸರಿಪಡಿಸಲಾಗದಷ್ಟು ಮಹಾ ವಿಪತ್ತು ಸಂಭವಿಸಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಪರಿಹಾರದ ಕಸರತ್ತಿನಲ್ಲಿ ವಿವಿಧ ರಾಷ್ಟ್ರಗಳು ನಿರತವಾಗಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited