Untitled Document
Sign Up | Login    
Dynamic website and Portals
  
November 22, 2014

ಗಣರಾಜ್ಯೋತ್ಸವಕ್ಕೆ ಒಬಾಮರನ್ನು ಅತಿಥಿಯಾಗಿ ಆಹ್ವಾನಿಸಿದ ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ವಿಭಿನ್ನ ರಾಜತಾಂತ್ರಿಕ ನಡೆಗಳ ಮೂಲಕ ಸುದ್ದಿ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಈ ಹಾದಿಯಲ್ಲಿ ಇದೀಗ ದೊಡ್ಡದೊಂದು ಸಾಧನೆ ಮಾಡಿದ್ದಾರೆ. ಮುಂಬರುವ ಜನವರಿ 26ರ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗುವಂತೆ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರನ್ನು ಆಹ್ವಾನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೀಡಿದ ಆಹ್ವಾನವನ್ನು ಅಧ್ಯಕ್ಷ ಒಬಾಮಾ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಅಮೆರಿಕದ ಶ್ವೇತಭವನದಿಂದ ಅಧಿಕೃತ ಸಂದೇಶ ರವಾನೆಯಾಗಿದೆ.

ಈ ಮೂಲಕ ಅಮೆರಿಕ ಅಧ್ಯಕ್ಷರೊಬ್ಬರು, ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಮೊದಲ ಘಟನೆಗೆ 2015ರ ಜನವರಿ 26 ಸಾಕ್ಷಿಯಾಗಲಿದೆ. ಒಬಾಮಾಗೆ ಆಹ್ವಾನ ನೀಡಿದ ಮೋದಿ ಅವರ ಈ ಕ್ರಮವನ್ನು ರಾಜಕೀಯ ವಲಯದಲ್ಲಿ ಮಾಸ್ಟರ್‌ಸ್ಟ್ರೋಕ್‌ ಎಂದೇ ಪರಿಗಣಿಸಲಾಗಿದೆ.

ಒಬಾಮಾ ಅವರಿಗೆ ಆಹ್ವಾನ ನೀಡಿದ ವಿಷಯವನ್ನು ಸ್ವತಃ ಮೋದಿ ಅವರೇ ಟ್ವೀಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಈ ಗಣರಾಜ್ಯೋತ್ಸ ವದಂದು ಮಿತ್ರರೊಬ್ಬರ ಭಾಗವಹಿಸು ವಿಕೆಯನ್ನು ಬಯಸಿದ್ದೇವೆ. ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಒಬಾಮಾಗೆ ಆಹ್ವಾನ ನೀಡಿದ್ದೇನೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸುವ ಮತ್ತು ಆ ಮೂಲಕ ಆ ದೇಶದೊಂದಿಗೆ ಸಂಬಂಧ ಸುಧಾರಣೆಯ ಕ್ರಮವನ್ನು ಹಿಂದಿನಿಂದಲೂ ಭಾರತ ನಡೆಸಿಕೊಂಡು ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ದೊಡ್ಡ ರಾಷ್ಟ್ರವೊಂದರ ಗಣ್ಯರು ಆಗಮಿಸಿದ್ದು ಕಡಿಮೆ. ಹೀಗಿರುವಾಗ ವಿಶ್ವದ ದೊಡ್ಡಣ್ಣ ಎಂದೇ ಪರಿಗಣಿತ ಅಮೆರಿಕ ಅಧ್ಯಕ್ಷರಿಗೆ ಆಹ್ವಾನ ನೀಡಿದ ಮೋದಿ ಅವರ ನಡೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದೇ ಬಣ್ಣಿಸಲಾಗಿದೆ. ಮೋದಿ ಅಮೆರಿಕ ಪ್ರವಾಸದ ವೇಳೆ ಒಬಾಮಾರನ್ನು ಭೇಟಿಯಾಗಿದ್ದರಾದರೂ, ಈ ವೇಳೆ ಉಭಯ ರಾಷ್ಟ್ರಗಳು ಯಾವುದೇ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಒಬಾಮಾ ಭಾರತ ಪ್ರವಾಸದ ವೇಳೆ ಉಭಯ ರಾಷ್ಟ್ರಗಳು ಕೆಲ ಮಹತ್ವದ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited