Untitled Document
Sign Up | Login    
Dynamic website and Portals
  
January 24, 2015

ಪಾಕ್ ಉಗ್ರರಿಗೆ ಸುರಕ್ಷಿತ ತಾಣವಾಗುವುದು ಸರಿಯಲ್ಲ: ಒಬಾಮಾ

Barak Obama (File Pic) Barak Obama (File Pic)

ವಾಷಿಂಗ್ಟನ್ : ಪಾಕಿಸ್ಥಾನ ಉಗ್ರರಿಗೆ ಸುರಕ್ಷಿತ ತಾಣವಾಗಿರುವುದು ಸರಿಯಲ್ಲ ಮತ್ತು 26/11ರ ಮುಂಬಯಿ ದಾಳಿಯ ಹಿಂದಿರುವ ಉಗ್ರರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಲೇಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ತಿಳಿಸಿದ್ದಾರೆ.

ಅಮೆರಿಕದ ವಾಣಿಜ್ಯ ಕಟ್ಟಡಗಳ ಮೇಲೆ ನಡೆದಿದ್ದ 9/11ರ ಭಯೋತ್ಪಾದಕ ದಾಳಿ ಹಾಗೂ ಮುಂಬಯಿ ಮೇಲೆ ನಡೆದಿದ್ದ 26/11ರ ಉಗ್ರ ದಾಳಿಯನ್ನು ದೃಷ್ಟಿಯಲ್ಲಿರಿಸಿ ಮಾತನಾಡಿದ ಒಬಾಮಾ, ಈ ಎರಡೂ ಸಂತ್ರಸ್ತ ದೇಶಗಳು ತಮ್ಮ ಭದ್ರತೆ ಹಾಗೂ ಜನಜೀವನದ ಸುರಕ್ಷೆಗಾಗಿ ಒಂದಾಗಿ ನಿಂತಿವೆ ಎಂದಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕವು ಪಾಕಿಸ್ಥಾನವನ್ನು ಕೂಡ ತನ್ನ ಜತೆಗೆ ಸೇರಿಸಿಕೊಂಡಿದೆ. ಹಾಗಿದ್ದರೂ ಪಾಕಿಸ್ಥಾನದ ನೆಲದಲ್ಲಿ ಉಗ್ರರಿಗಿರುವ ಸುರಕ್ಷಿತ ತಾಣಗಳು ಎಷ್ಟು ಮಾತ್ರಕ್ಕೂ ಸ್ವೀಕಾರಾರ್ಹವಲ್ಲ ಎಂಬುದನ್ನು ಅದಕ್ಕೆ ಪದೇ ಪದೇ ಮನವರಿಕೆ ಮಾಡುತ್ತಲೇ ಬಂದಿದೆ. ಈಗಲೂ ಅಮೆರಿಕ ಅದೇ ಮಾತನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದ್ದಾರೆ.

ಭಾರತ-ಅಮೆರಿಕ ಬಾಂಧವ್ಯದ ಬಗ್ಗೆ ಮಾತನಾಡಿದ ಒಬಾಮಾ, ಅಮೆರಿಕವು ವಿಶ್ವದ ಇತರ ದೇಶಗಳೊಂದಿಗೆ ಹೊಂದಿರುವ ಮಿತೃತ್ವ ಹಾಗೂ ಬಾಂಧವ್ಯಕ್ಕೆ ಅನುಗುಣವಾಗಿಯೇ ಭಾರತದೊಂದಿಗಿನ ಸಂಬಂಧಗಳು ಇರಬೇಕು ಎಂಬ ಅಪೇಕ್ಷೆ ಹೊಂದಿದೆ. ಈ ಬಗೆಯ ಬಾಂಧವ್ಯ ಪರಸ್ಪರರ ಮೇಲಿನ ಗೌರವಾದರಗಳನ್ನು ಅವಲಂಬಿಸಿರುವುದು ಸಹಜವೇ ಆಗಿರುತ್ತದೆ ಎಂದು ಹೇಳಿದರು.

ಅಮೆರಿಕ-ಭಾರತ ನಡುವಿನ ಬಾಂಧವ್ಯ ಪರಸ್ಪರರ ಹಿತಾಸಕ್ತಿಗಳನ್ನು ಪೋಷಿಸುವಂತಿರಬೇಕು ಅದರಿಂದ ಎರಡೂ ರಾಷ್ಟ್ರಗಳು ಸುರಕ್ಷಿತವಾಗಿರುವಂತಿರಬೇಕು. ಎರಡೂ ದೇಶಗಳ ಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರಕುವಂತಿರಬೇಕು ಇದರಿಂದಾಗಿ ಎರಡು ದೇಶಗಳು ಅಭಿವೃದ್ಧಿಹೊಂದುವಂತಾಗಬೇಕು ಎಂದು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited