Untitled Document
Sign Up | Login    
Dynamic website and Portals
  
September 22, 2014

ಒಬಾಮ ಔತಣಕೂಟದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲ್ಲ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ಸೆ.27ರಿಂದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ ಅಧ್ಯಕ್ಷ ಬರಾಕ್ ಒಬಾಮ ಅವರ ಔತಣಕೂಟದಲ್ಲಿ ಮೋದಿ ಭಾಗವಹಿಸುವುದಿಲ್ಲ.

ನವರಾತ್ರಿ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬರಾಕ್ ಒಬಾಮ ಅವರ ಔತಣಕೂಟದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿದುಬಂದಿದೆ.

ಸೆ.25ರಿಂದ ಅ.4ರವರೆಗೆ ನವರಾತ್ರಿ ಆಚರಣೆಯಿರುವುದರಿಂದ ಕಳೆದ 35 ವರ್ಷಗಳಿಂದ ನರೇಂದ್ರ ಮೋದಿ ನವರಾತ್ರಿ ವೇಳೆ ಉಪವಾಸ ಆಚರಿಸುತ್ತಿದ್ದಾರೆ. ಉಪವಾಸದ ವೇಳೆ ನೀರನ್ನು ಬಿಟ್ಟು ಬೇರೆ ಯಾವುದೇ ಘನ ಆಹಾರವನ್ನು ಸೇವಿಸುವುದಿಲ್ಲ.

ಪ್ರಧಾನಿ ಮೋದಿ ಭೇಟಿ ಹಿನ್ನಲೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಔತಣಕೂಟವನ್ನು ಆಯೋಜಿಸಿದ್ದರು. ಆದರೆ ನವರಾತ್ರಿ ವೇಳೆ ಉಪವಾಸ ಆಚರಿಸುವುದರಿಂದ ಮೋದಿ ಔತಣಕೂಟದಲ್ಲಿ ಮಾತ್ರ ಭಾಗಿಯಾಗುತ್ತಿಲ್ಲ. ಆದರೆ ಒಬಾಮ ಅವರ ಉಳಿದೆಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited