Untitled Document
Sign Up | Login    
Dynamic website and Portals
  
August 20, 2014

ಉಗ್ರರ ಬೆದರಿಕೆ ಹಿನ್ನಲೆ: ಪ್ರಧಾನಿ ಮೋದಿ ಪ್ರಯಾಣಕ್ಕೆ 2 ರಸ್ತೆ ವ್ಯವಸ್ಥೆ

Narendra Modi (File Pic) Narendra Modi (File Pic)

ನವದೆಹಲಿ : ಉಗ್ರರಿಂದ ಜೀವ ಬೆದರಿಕೆಯಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯಾಣಕ್ಕೆ ಡಬ್ಬಲ್ ಟ್ರ್ಯಾಕ್ ಮಾದರಿ ವ್ಯವಸ್ಥೆಗೆ ಎಸ್.ಪಿ.ಜಿ (ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ನಿರ್ಧರಿಸಿದೆ.

ಉಗ್ರರಿಂದ ಜೀವ ಬೆದರಿಕೆಯಿರುವ ನಾಯಕರು ರಸ್ತೆ ಮೇಲೆ ಪ್ರಯಾಣ ಮಾಡುವಾಗ ಅವರಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಅವರು ಎಲ್ಲಿಗೆ ಹೋಗಬೇಕೋ ಆ ಆಸ್ಥಳಕ್ಕೆ ಸಾಗಲು 2 ದಾರಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕಡೆಯ ಗಳಿಗೆವರೆಗೂ ಗಣ್ಯ ವ್ಯಕ್ತಿ ಯಾವ ಮಾರ್ಗದಲ್ಲಿ ಸಾಗುತ್ತಾರೆ ಎಂಬುದನ್ನು ಗುಪ್ತವಾಗಿ ಇಡುವ ಮೂಲಕ ಅವರಿಗೆ ಹೆಚ್ಚಿನ ರಕ್ಷಣೆ ನೀಡಲಾಗುತ್ತದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಸಂಚರಿಸುವ ಕಡೆ ಕೂಡ ಈ ಡಬ್ಬಲ್ ಟ್ರ್ಯಾಕ್ ವ್ಯವಸ್ಥೆ ಇದೆ. ಪ್ರಧಾನಿ ಮೋದಿಯವರಿಗೂ ಉಗ್ರರಿಂದ ಬೆದರಿಕೆ ಇರುವುದರಿಂದ ಸಂಭವನೀಯ ದಾಳಿ ತಪ್ಪಿಸಲು ಒಬಾಮ ಮಾದರಿ ವಿಶೇಷ ವ್ಯವಸ್ಥೆ ಮಾಡಲು ಎಸ್.ಪಿ.ಜಿ ತೀರ್ಮಾನಿಸಿದೆ.

ದೆಹಲಿಯಲ್ಲಿ ಪ್ರತಿದಿನ ಪ್ರಧಾನಿ ನರೇಂದ್ರ ಮೋದಿ ಎಲ್ಲಿಗೇ ಹೊರಟರೂ ಅದಕ್ಕೆಂದು 2 ಮಾರ್ಗಗಳನ್ನು ಸಿದ್ಧಪಡಿಸಲಾಗುತ್ತದೆ.ಎರಡೂ ರಸ್ತೆಗಳಲ್ಲಿ ಮೋದಿಯವರ ಬೆಂಗಾವಲು ವಾಹನ ಸಾಗುತ್ತದೆ. ಎರಡೂ ಕಡೆಗಳಲ್ಲೂ ಮೋದಿ ಸಾಮಾನ್ಯವಾಗಿ ಪ್ರಯಾಣಿಸುವ ಕಾರು ಸಾಗುತ್ತದೆ. ಆದರೆ ಈ ಕಾರಿನ ಪೈಕಿ ಒಂದರಲ್ಲಿ ಮಾತ್ರ ಮೋದಿ ಇರುತ್ತಾರೆ. ಅಂದರೆ ನೋಡುವವರ ಕಣ್ಣಲ್ಲಿ ಮೋದಿ ಎರಡೂ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಂತೆ ಕಾಣುತ್ತದೆ.

ಪ್ರಧಾನಿ ಮೋದಿ ಅವರು ಪ್ರಯಾಣ ಮಾಡುವ ಎರಡೂ ಮಾರ್ಗಗಗಳಲ್ಲಿ ಅವರ ಬೆಂಗಾವಲು ವಾಹನ ಸಂಚರಿಸುವ ವೇಳೆ ಸಂಚಾರವನ್ನು ಬಂದ್ ಮಾಡಲಾಗುತ್ತದೆ. ಈ ಮೂಲಕ ಮೋದಿ ಯಾವ ಮಾರ್ಗದಲ್ಲಿ ಸಂಚರಿಸುತ್ತಾರೆ ಎಂಬುದನ್ನು ಗೌಪ್ಯವಾಗಿಡಲಾಗುತ್ತದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited