Untitled Document
Sign Up | Login    
Dynamic website and Portals
  
November 21, 2014

ಟೈಮ್ 2014ನೇ ವರ್ಷದ ವ್ಯಕ್ತಿ ರೇಸ್ ನಲ್ಲಿ ಪ್ರಧಾನಿ ಮೋದಿಯೇ ಎಲ್ಲರಿಗಿಂತ ಮುಂದು!

ನ್ಯೂಯಾರ್ಕ್ : ಟೈಮ್ ನಿಯತಕಾಲಿಕೆಯ 2014ನೇ ಸಾಲಿನ ವರ್ಷದ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದಿದ್ದಾರೆ.

ವಿಶ್ವಾದ್ಯಂತ ಪ್ರಭಾವಿಗಳಾಗಿರುವ ಒಟ್ಟು 50 ಮಂದಿಯನ್ನು ಟೈಮ್ ನಿಯತಕಾಲಿಕೆ ವರ್ಷದ ವ್ಯಕ್ತಿ ಗೌರವಕ್ಕೆ ಆಯ್ಕೆ ಮಾಡಿದೆ. 50 ಮಂದಿಗಳ ಪೈಕಿ ಮುಂದಿನ ತಿಂಗಳು ಓರ್ವ ವ್ಯಕ್ತಿಯನ್ನು ವಿಜೇತನನ್ನಾಗಿ ಘೋಷಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವರ್ಷದ ವ್ಯಕ್ತಿ ಸ್ಥಾನದಲ್ಲಿ ಮೋದಿಯೇ ಎಲ್ಲರಿಗಿಂತ ಮುಂದಿದ್ದಾರೆ ಎಂಬುದು ವಿಶೇಷ.

ಪ್ರಧಾನಿ ಮೋದಿ ಅವರಿಗೆ ಈ ವರೆಗೆ ಶೇ.8.1ರಷ್ಟು ಮತಗಳು ದೊರೆತಿದೆ. ಈ ಮೂಲಕ ವರ್ಷದ ವ್ಯಕ್ತಿ ರೇಸ್ ನಲ್ಲಿ ಮೋದಿ ಮುಂದಿದ್ದರೆ ನಂತರದ ಸ್ಥಾನದಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಹಾಗೂ ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಇದ್ದಾರೆ.

ವಿಶ್ವದ ಪ್ರಭಾವಿ ನಿಯತಕಾಲಿಕೆ 'ಟೈಮ್‌' ಮೋದಿ ಅವರನ್ನು ಕೊಂಡಾದಿದ್ದು ಒಂದು ಕಾಲದಲ್ಲಿ ಗುಜರಾತ್‌ ನ ವಿವಾದಾತ್ಮಕ ನಾಯಕರಾಗಿದ್ದ ಮೋದಿ ಕಳೆದ ಬಾರಿ ಭಾರತದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವ ವಹಿಸಿ ಪ್ರಧಾನಿಯಾಗಿದ್ದಾರೆ ಭಾರತಕ್ಕೆ ಉತ್ತಮ ಆರ್ಥಿಕ ಬೆಳವಣಿಗೆ ನೀಡುವ ಭರವಸೆಯನ್ನು ಚುನಾವಣೆ ವೇಳೆ ನೀಡಿದ್ದರು ಎಂದು ಹೇಳಿದೆ.

ಇಸ್ರೇಸ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಇರಾನ್ ನಾಯಕ ಆಯತೊಲ್ಲ ಖೊಮೇನಿ, ಪಾಕಿಸ್ತಾನದ ಮಕ್ಕಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಮೆರಿಕದ ಜನಪ್ರಿಯ ಟಿವಿ ತಾರೆ ಕಿಮ್ ಕಾದರ್ ಶಿಯಾನ್ ವರ್ಷದ ವ್ಯಕ್ತಿ ಪಟ್ಟಿಯಲ್ಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited