Untitled Document
Sign Up | Login    
Dynamic website and Portals
  
August 8, 2014

ಇರಾಖ್ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಲು ಯುಎಸ್ ಸೇನೆಗೆ ಒಬಾಮ ಸೂಚನೆ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ

ವಾಷಿಂಗ್‌ಟನ್ : ಉತ್ತರ ಇರಾಖ್ ನಲ್ಲಿ ಉಗ್ರರ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ನೆಲೆಸಿರುವ ಅಮೆರಿಕಾ ನಾಗರಿಕರನ್ನು ಸುರಕ್ಷತೆಗಾಗಿ ಅಗತ್ಯಬಿದ್ದರೆ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿ ಎಂದು ಅಮೆರಿಕಾ ಸೇನೆಗೆ ಬರಾಕ್ ಒಬಾಮ ಆದೇಶಿಸಿದ್ದಾರೆ.

ಇರಾಖ್ ನಲ್ಲಿ ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಅಮೆರಿಕಾ ಸೇನೆ ಆಹಾರ ಪದಾರ್ಥಗಳನ್ನು ವಿಮಾನಗಳ ಮೂಲಕ ತಲುಪಿಸುತ್ತಿದೆ ಎಂದು ಬರಾಕ್ ಒಬಾಮ ತಿಳಿಸಿದ್ದಾರೆ.

ಇರಾಖ್ ನ ಬಹುದೊಡ್ಡ ಕ್ರೈಸ್ತ ನಗರ ಕರಕೋಶ್ ಮತ್ತು ಸುತ್ತಮುತ್ತಲ ಪ್ರದೇಶಗಳ ಮೇಲೆ ಐ.ಎಸ್.ಐ.ಎಸ್ ಜಿಹಾದಿಗಳು ಪ್ರಾಬಲ್ಯ ಸಾಧಿಸಿದ್ದು ಆತಂಕಕ್ಕೆ ಒಳಗಾಗಿರುವ ಕ್ರೈಸ್ತರು(ಧಾರ್ಮಿಕ ಅಲ್ಪಸಂಖ್ಯಾತರು) ಕುರ್ದಿಸ್ತಾನದಿಂದ ವಲಸೆ ಹೋಗುತ್ತಿದ್ದಾರೆ. ಜಿಹಾದಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಪರ್ವತಗಳಲ್ಲಿ ಸಿಲುಕಿಕೊಂಡಿರುವ ವಲಸಿಗರಿಗೆ ಇರಾಖ್ ಸರ್ಕಾರದ ಮನವಿ ಮೇರೆಗೆ ಅಮೆರಿಕಾ ವಿಮಾನದ ಮೂಲಕ ಆಹಾರ, ನೀರು ನೀಡುತ್ತಿದೆ(ಏರ್ ಡ್ರಾಪ್) ಎಂದು ಬರಾಕ್ ಒಬಾಮ ಹೇಳಿದ್ದಾರೆ.

ಇಸ್ಲಾಂ ಒಪ್ಪಿಕೊಂಡು ಮತಾಂತರ ಹೊಂದಬೇಕು ಇಲ್ಲವೇ ಖಡ್ಗಕ್ಕೆ ತಲೆಕೊಡಬೇಕು ಎಂದು ಜಿಹಾದಿಗಳು ಈಗಾಗಲೇ ಘೋಷಿಸಿದ್ದು ಕೂಡಲೇ ನೆರವಿಗೆ ಧಾವಿಸುವಂತೆ ಇರಾಕ್ ನ ಬಿಷಪ್ ಗಳು ವಿಶ್ವಸಂಸ್ಥೆ ಮತ್ತು ಪಶ್ಚಿಮ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ.

ಇರಾಖ್ ನಿಂದ ವಾಪಸ್ ಕರೆಸಿಕೊಳ್ಳಲಾಗಿರುವ ಅಮೆರಿಕಾ ಮಿಲಿಟರಿ ಪಡೆಯನ್ನು ಪುನಃ ಸ್ಥಾಪಿಸುವುದಿಲ್ಲ ಎಂದು ಹೇಳಿರುವ ಒಬಾಮ, ಇರಾಖ್ ನಲ್ಲಿರುವ ಅಮೆರಿಕಾ ನಾಗರಿಕರ ರಕ್ಷಣೆಗೆ ಮಾತ್ರ ಮಿಲಿಟರಿ ಪಡೆಯನ್ನು ಕಳಿಸಲಾಗುತ್ತಿದೆ. ಇರಾಖ್ ನ ಆಂತರಿಕ ಕಲಹಕ್ಕೆ ಅಮೆರಿಕಾ ಸೇನೆ ಪರಿಹಾರವಲ್ಲ ಎಂದು ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited