ಲಂಡನ್ : ಪ್ರಧಾನಿ ನರೇಂದ್ರ ಮೋದಿ ಅವರನ್ನು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಹೊಗಳಿದ್ದು ಸ್ಪಷ್ಟ ಗುರಿ ಹೊಂದಿರುವ ನಾಯಕ ಪ್ರಧಾನಿ ಮೋದಿ ಎಂದು ಹೇಳಿದ್ದಾರೆ.
ಟಿ.ಎಫ್.ಟಿ ಒಪ್ಪಂದಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರನ್ನು ಹೊಗಳಿರುವ ಕೆಮರೂನ್, ಮೋದಿ ಅಭಿವೃದ್ಧಿ ಬಗ್ಗೆ ಸ್ಪಷ್ಟ ದೃಷ್ಟಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರಿಟನ್ ನಲ್ಲಿರುವ ಭಾರತೀಯ ಮೂಲದ ಸಂಸದರಿಗೆ ಪ್ರತಿಕ್ರಿಯಿಸಿದ ವೇಳೆ ಕೆಮರೂನ್ ಈ ಹೇಳಿಕೆ ನೀಡಿದ್ದಾರೆ. ಗುಜರಾತ್ ನಲ್ಲಿ ಆರ್ಥಿಕ ಸುಧಾರಣೆ ತಂದಿರುವ ಮೋದಿ ಭಾರತದ ಆರ್ಥಿಕತೆಯನ್ನೂ ಚೇತರಿಸಿಕೊಳ್ಳುವಂತೆ ಮಾಡಲಿದ್ದಾರೆ ಎಂದು ಡೇವಿಡ್ ಕೆಮರೂನ್ ಅಭಿಪ್ರಾಯಪಟ್ಟಿದ್ದಾರೆ.
ಬ್ರಿಸ್ಬೇನ್ ನಲ್ಲಿ ಇತ್ತೀಚೆಗಷ್ಟೇ ನಡೆದ ಜಿ.20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಡೇವಿಡ್ ಕೆಮರೂನ್ ಭೇಟಿ ಮಾಡಿದ್ದರು. ಮೋದಿ ಅವರೊಂದಿಗಿನ ಭೇಟಿ ಸಂತಸ ತಂದಿದೆ ಎಂದು ಕೆಮರೂನ್ ಹೇಳಿದ್ದಾರೆ.
ಟಿ.ಎಫ್.ಟಿ ಒಪ್ಪದಂಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಮೆಚ್ಚಿದ್ದರು. ಅಲ್ಲದೇ you are the man of action ಹೇಳಿದಂತೆಯೇ ಮಾಡುವ ವ್ಯಕ್ತಿ ಎಂದು ಬಣ್ಣಿಸಿದ್ದರು.