ನವದೆಹಲಿ : ಭಾರತೀಯ ಹೂಡಿಕೆದಾರರಿಂದ ಅಮೆರಿಕಕ್ಕೆ ಹೆಚ್ಚಿನ ಲಾಭವಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಿಳಿಸಿದ್ದಾರೆ.
ದೆಹಲಿಯ ತಾಜ್ ಪ್ಯಾಲೇಸ್ನ ದರ್ಬಾರ್ ಹಾಲ್ನಲ್ಲಿ ಭಾರತ-ಅಮೆರಿಕ ವಾಣಿಜ್ಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಒಬಾಮ, ಭಾರತೀಯ ಹೂಡಿಕೆದಾರರಿಂದಾಗಿ ಅಮೆರಿಕಕ್ಕೆ ಹೆಚ್ಚಿನ ಲಾಭ ಇದೆ. ವ್ಯಾಪಾರ ಹೆಚ್ಚಳದಿಂದ ಉಭಯ ದೇಶಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದರು.
ನೂತನ ತಂತ್ರಜ್ಞಾನ ಅಭಿವೃದ್ಧಿಗೆ ಭಾರತಕ್ಕೆ ಅಮೆರಿಕ ಸಹಕಾರ ನೀಡುತ್ತದೆ. ಭಾರತದಲ್ಲಿ ಮೂರು ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಅಮೆರಿಕ ನೆರವು ನೀಡುತ್ತದೆ ಎಂದು ಭರವಸೆ ನೀಡಿದರು. ಇದೇ ವೇಳೆ ಶೃಂಗಸಭೆ ಆಯೋಜಿಸಿದ ಭಾರತ ಸರ್ಕಾರಕ್ಕೆ ಅವರು ವಂದನೆ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜನರ ಜೀವನ ಮಟ್ಟು ಸುಧಾರಣೆಯಾಗುವ ವಿಶ್ವಾಸ ವ್ಯಕ್ತಪಡಿಸಿದ ಒಬಾಮ, ಮೋದಿ ಅವರ ಸ್ಪಚ್ಛತಾ ಅಭಿಯಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.