Untitled Document
Sign Up | Login    
Dynamic website and Portals
  
April 27, 2016

ಶ್ರೀ ರಾಮಚಂದ್ರಾಪುರ ಮಠದ 'ಕಲಾಮುಕುಲ' ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಭರತನಾಟ್ಯ ಕಾರ್ಯಕ್ರಮ

ಉದಯೋನ್ಮುಖ ಕಲಾವಿದೆ ಕು. ಶ್ರೀದೇವಿ ಅವರಿಂದ ಭರತನಾಟ್ಯ ಉದಯೋನ್ಮುಖ ಕಲಾವಿದೆ ಕು. ಶ್ರೀದೇವಿ ಅವರಿಂದ ಭರತನಾಟ್ಯ

Basavanagudi : ಶ್ರೀ ರಾಮಚಂದ್ರಾಪುರ ಮಠದ 'ಕಲಾಮುಕುಲ' ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ, ಗಿರಿನಗರಶ್ರೀರಾಮಾಶ್ರಮದಲ್ಲಿ ಬುಧವಾರ ಭರತನಾಟ್ಯ ಕಾರ್ಯಕ್ರಮ ಸಂಪನ್ನವಾಯಿತು.

ನಾಡಿನ ಪ್ರಸಿದ್ಧ ಭರತನಾಟ್ಯ ಗುರುಗಳಾದ ಶ್ರೀ ಕಿರಣ್ ಸುಬ್ರಹ್ಮಣ್ಯ ಹಾಗು ಶ್ರೀಮತಿ ಸಂಧ್ಯಾ ಕಿರಣ್ ಅವರ ಶಿಷ್ಯೆಯಾದ ಪ್ರತಿಭಾನ್ವಿತ ಉದಯೋನ್ಮುಖ ಕಲಾವಿದೆ ಕು. ಶ್ರೀದೇವಿ ಅವರಿಂದ ನಡೆದ ಭರತನಾಟ್ಯ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಾನ್ನಿಧ್ಯವಹಿಸಿ ಶುಭಹಾರೈಸಿದರು. ನೂರಾರು ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಕಲಾಮುಕುಲ

ಮೊಗ್ಗಿನಂತೆ ಸುಪ್ತವಾಗಿರುವ ಕಲಾವಿದರಿಗೆ, ಭಾರತೀಯ ಕಲಾಪ್ರಕಾರಗಳಿಗೆ ವೇದಿಕೆಯಾಗುವುದು 'ಕಲಾಮುಕುಲ'ದ ಉದ್ದೇಶವಾಗಿದೆ. ಉದಯೋನ್ಮುಖ ಕಲಾವಿದರಿಗೆ ಸೂಕ್ತವಾದ ವೇದಿಕೆಯನ್ನು ಕಲ್ಪಿಸಿ ಸುಪ್ತ ಪ್ರತಿಭೆಗಳನ್ನು ಅನಾವರಣಗೋಳಿಸಿ, ಆಮೂಲಕ ಭಾರತೀಯ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಶ್ರೀ ರಾಮಚಂದ್ರಾಪುರ ಮಠದ 'ಕಲಾಮುಕುಲ' ಸಾಂಸ್ಕೃತಿಕ ವೇದಿಕೆ ಮಾಡುತ್ತಿದ್ದು, ಈಗಾಗಲೇ ಅನೇಕ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.

ಉದಯೋನ್ಮುಖ ಕಲಾವಿದೆ ಕು. ಶ್ರೀದೇವಿ

ಶ್ರೀ ಬಡಜ ನಾರಾಯಣ್ ಭಟ್ ಮತ್ತು ಶ್ರೀಮತಿ ಸುಮಂಗಲಿ ಅವರ ಪುತ್ರಿ ಕು.ಶ್ರೀದೇವಿ ತನ್ನ ಆರನೇ ಎಳೆಯ ವಯಸ್ಸಿನಲ್ಲೇ ನಾಡಿನ ಹೆಸರಾಂತ ನೃತ್ಯ ದಂಪತಿಗಳಾದ ಗುರು ಶ್ರೀ ಕಿರಣ್ ಸುಬ್ರಮಣ್ಯಮ್ ಮತ್ತು ಶ್ರೀಮತಿ ಸಂಧ್ಯಾ ಕಿರಣ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸವನ್ನ ಆರಂಭಿಸಿದಳು. ಇವಳ ಪ್ರತಿಭೆಯನ್ನು ಗುರುತಿಸಿ ಎಲ್ಲೆಡೆ ಪೂರ್ಣ ಅವಕಾಶಗಳು ಪಡೆಯುತ್ತಾ ಬಂದಳು. ಹಾಗಾಗಿಯೇ ಬೆಂಗಳೂರಿನ ಅಕ್ಷಯಪಾತ್ರೆ ಯೋಜನೆಯಲ್ಲಿ ಅವಳ ಗುರುಗಳು ನಿರ್ಮಿಸಿದ ಸರ್ವಂ ಕೃಷ್ಣಮಯಂ ರೂಪಕವು ಸೇರಿದಂತೆ ತನ್ನ ನೃತ್ಯ ಶಾಲೆ ರಸಿಕ ಆರ್ಟ್ಸ್ ಅಕಾಡೆಮಿಯ ರೂಪಕದಲ್ಲಿ ಪ್ರಮುಖ ಅವಕಾಶಗಳನ್ನ ಪಡೆಯುತ್ತಾ ಬಂದಳು. ಇವಳು ಜಯ ಟಿ.ವಿ ಯ ತಕಧಿಮಿತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಳೆ.

ಒಂದು ಅವಧಿಯಲ್ಲಿ ಶ್ರೀದೇವಿ ತನ್ನ ರಸಿಕ ಅಕಾಡೆಮಿಯ ವರ್ಷದ ಉತ್ತಮ ನರ್ತಕಿ ಪ್ರಶಸ್ತಿಯನ್ನೂ ಗಳಿಸಿಕೊಂಡಿದ್ದಳು. ಅದನ್ನ ಹೊರತು ಪಡಿಸಿದರೆ ತನ್ನ ಶಾಲಾ ಕಾಲೆಜಿನಲ್ಲಿ, ಜಿಲ್ಲಾ ಮಟ್ಟದಲ್ಲಿ ,ರಾಜ್ಯಾ ಮಟ್ಟದಲ್ಲಿ ಮತ್ತು ಹಲವಾರು ಸ್ಪರ್ದೆಗಳಲ್ಲಿ ಬಹುಮಾನಗಳನ್ನು ಮತ್ತು ಕೆಲವು ಪ್ರಶಸ್ತಿಗಳನ್ನ ಪಡೆದಿದ್ದಾಳೆ. ಜನವರಿ ೧೪ ೨೦೦೯ ರಂದು ದೈವ ಅನುಗ್ರಹದಿಂದ ಈಕೆ ತುಂಬಾ ಯಶಸ್ವಿಯಾಗಿ ತನ್ನ ರಂಗಪ್ರವೆಶವನ್ನು ಮುಗಿಸಿದ್ದಾಳೆ. ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಅಲ್ಲದೆ ಶೈಕ್ಷಣಿಕವಾಗಿಯೂ ಪ್ರತಿಭಾವoತಳಾದ ಶ್ರೀದೇವಿ ತನ್ನ ಶಾಲೆಯಿಂದ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿಯನ್ನೂ ಪಡೆದಿದ್ದಳು. ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ಈಗ HP ಯಲ್ಲಿ ಉದ್ಯೋಗಿ ಆಗಿರುತ್ತಾಳೆ .

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited