ಬೆಂಗಳೂರು : ಹೌದು, ಇನ್ನೂ ಮುಂದೆ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿ ಇನ್ನೂ ಮುಂದೆ ನಿಮ್ಮ ಮೊಬೈಲ್ ನಲ್ಲಿ ಸಿಗಲಿದೆ. ಇದಕ್ಕಾಗಿಯೇ ರವಿ ಮಡೋಡಿ, ಆದಿತ್ಯ ಪ್ರಸಾದ ಮತ್ತು ರವೀಂದ್ರ ದೊಂಗಡೆ ಎಂಬ ಮೂವರು ಬೆಂಗಳೂರಿನ Software Enginners ಸೇರಿ ಯಕ್ಷಗಾನದ ಕಾರ್ಯಕ್ರಮಗಳ ಮಾಹಿತಿಗಾಗಿ ಒಂದು ಮೊಬೈಲ್ ಆಪ್ ನ್ನು ಬಿಡುಗಡೆ ಮಾಡಿದ್ದಾರೆ.
ಪ್ರಸ್ತುತ ಲಭ್ಯವಿರುವ Android ಆವೃತ್ತಿಯಲ್ಲಿ(Beta version) ಮುಂದೆ ನಡೆಯಲಿರುವ ಯಕ್ಷಗಾನ ಕಾರ್ಯಕ್ರಮಗಳ ವಿವರಗಳನ್ನು ಯಾವಾಗ ಬೇಕಾದರೂ, ಉಚಿತವಾಗಿ ಪಡೆದುಕೊಳ್ಳಬಹುದು. ಈ ಮೂಲಕ ಹೆಚ್ಚು ಹೆಚ್ಚು ಆಸಕ್ತರನ್ನು ಯಕ್ಷಗಾನಕ್ಕೆ ಸೆಳೆಯುವಂತೆ ಮಾಡುವುದು ಇದರ ಮೂಲ ಉದ್ದೇಶಗಳಲ್ಲೊಂದು.
ಕರ್ನಾಟಕ ರಾಜ್ಯದ್ಯಂತ ಪ್ರತಿ ವರ್ಷ ಸುಮಾರು 10 ಸಾವಿರಕ್ಕೂ ಅಧಿಕ ಯಕ್ಷಗಾನ ಪ್ರದರ್ಶನಗಳು ನಡೆಯುತ್ತವೆ. ಧರ್ಮಸ್ಥಳ, ಕಟೀಲು, ಪೆರ್ಡೂರು, ಸಾಲಿಗ್ರಾಮ, ಮಂದಾರ್ತಿ ಮೊದಲಾದ 30ಕ್ಕೂ ಹೆಚ್ಚು ವೃತ್ತಿಮೇಳಗಳು, 100ಕ್ಕೂ ಅಧಿಕ ಹವ್ಯಾಸೀ ಯಕ್ಷಗಾನ ತಂಡಗಳು ಪ್ರದರ್ಶನಗಳನ್ನು ನೀಡುತ್ತವೆ. ಕೇವಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ , ಶಿವಮೊಗ್ಗ ಜೆಲ್ಲೆಗಳಲ್ಲಿ ಮಾತ್ರವಲ್ಲದೇ ಬೆಂಗಳೂರು, ಮೈಸೂರು, ಮುಂಬಯಿ ಮೊದಲಾದೆಡೆಯೂ ನೂರಾರು ಪ್ರದರ್ಶನಗಳು ನಡೆಯುತ್ತಿದೆ. ಬೆಂಗಳೂರು ನಗರದಲ್ಲೇ 30 ಕ್ಕೂ ಹವ್ಯಾಸೀ ತಂಡಗಳು ಕಾರ್ಯ ನಿರ್ವಹಿಸುತ್ತದೆ. ಆದರೂ ಈ ಎಲ್ಲಾ ಪ್ರದರ್ಶನಗಳ ಕುರಿತಾದ ಮಾಹಿತಿ ಒಂದೆಡೆ ಸಿಗುವಂತೆ ಮಾಡುವ ಯಾವುದೇ ವಿಧಾನ ಇದುವರೆಗೆ ಇರಲಿಲ್ಲ. ಮುಖಪುಟ(Facebook), ವಾಟ್ಸಪ್ ಗಳಲ್ಲಿ ಸಿಗುತ್ತಿದ್ದ ಬಿಡಿ ಬಿಡಿಯಾದ ಮಾಹಿತಿ ಎಲ್ಲರಿಗೂ ದೊರಕುವಂತಿರಲಿಲ್ಲ. ಈ ಆಪ್ ಮೂಲಕ ಎಲ್ಲ ಕಾರ್ಯಕ್ರಮಗಳ ಮಾಹಿತಿ ಒಂದೇ ಸ್ಠಳದಲ್ಲಿ ಸಿಗುವಂತೆ ಮಾಡುವುದು ಇದರ ಮತ್ತೊಂದು ಉದ್ದೇಶ.
App Download ಮಾಡಿಕೊಳ್ಳುವುದ್ದಕ್ಕೆ, Google Play‘ ನಲ್ಲಿ ‘Efollo’ ಎಂದು Search ಮಾಡಿ. ನಿಮ್ಮ ಕಾರ್ಯಕ್ರಮಗಳ ವಿವರಗಳನ್ನು Efolo‘ ದಲ್ಲಿ ಹಾಕುವುದಿದ್ದರೆ, ಕೆಳಗಿನ ಈ ವಿವರಕ್ಕೆ ಸಂಪರ್ಕಿಸಬಹುದು
Email: efmobileapp@gmail.com
Facebook: Ef Mobileapp