Untitled Document
Sign Up | Login    
Dynamic website and Portals
  
April 20, 2016

ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾಗೆ ಭೇಟಿ ನೀಡುವ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ (ಫೈಲ್ ಚಿತ್ರ) ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ (ಫೈಲ್ ಚಿತ್ರ)

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಜೂನ್ ತಿಂಗಳಲ್ಲಿ ಮತ್ತೆ ಅಮೆರಿಕಾಗೆ ಭೇಟಿ ನೀಡಬಹುದು. ಇದು ಅಮೆರಿಕಾಗೆ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನಾಲ್ಕನೇ ಭೇಟಿಯಾಗಲಿದೆ.

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ವಾಷಿಂಗ್ಟನ್ ಗೆ ಭೇಟಿ ನೀಡಲಿದ್ದಾರೆ. ಇದು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಹಿನ್ನಲೆಯಲ್ಲಿ ಈ ಭೇಟಿಯನ್ನು 21ನೇ ಶತಮಾನದ ಬಾಂಧವ್ಯದ ವೃದ್ದಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಅಮೆರಿಕಾದ ನೆರೆ ರಾಷ್ಟ್ರಗಳ ನಡುವಿನ ನಾಯಕರ ಮೈತ್ರಿ ಗೌರವಿಸಲು ಒಬಾಮಾ ನೆರೆ ರಾಷ್ಟ್ರಗಳ ನಾಯಕರನ್ನ ಆಹ್ವಾನಿಸಿದ್ದು, ಸಾಮಾನ್ಯವಾಗಿ ಪರಸ್ಪರ ರಾಷ್ಟ್ರಗಳ ನಡುವೆ ಸ್ನೇಹ, ದ್ವಿಪಕ್ಷೀಯ ಸಂಬಂಧಗಳು, ಕೆಲ ಒಪ್ಪಂದಗಳ ಕುರಿತು ಮಾತುಕತೆ ನಡೆಯಲಿದೆ.

ಮೆಕ್ಸಿಕೋ ನ ಫೆಲಿಪೆ ಕಾಲ್ಡೆರಾನ್, ಜರ್ಮನಿಯ ಏಂಜೆಲಾ ಮರ್ಕೆಲ್, ದಕ್ಷಿಣ ಕೊರಿಯಾದ ಲೀ ಮಯುಂಗ್ ಬಾಕ್ ಬ್ರಿಟನ್ನ ಡೇವಿಡ್ ಕ್ಯಾಮೆರಾನ್, ಫ್ರಾನ್ಸ್ ನ ಫ್ರಾಂಕೋಯಿಸ್ ಹೊಲಾಂಡ್ ಜಪಾನ್ ನ ಶಿಂಜೋ ಅಬೆ, ಮತ್ತು ಕೆನಡಾದ ಜಸ್ಟಿನ್ ಟ್ರುಡೆಯೊ ಸೇರಿದಂತೆ ನೆರೆಯ ಪ್ರಶ್ನಾತೀತ ಮೈತ್ರಿಕೂಟ ಸೇರಿದಂತೆ ಹತ್ತು ರಾಷ್ಟ್ರಗಳ ನಾಯಕರು ಭೇಟಿ ನೀಡುವ ಸಾಧ್ಯತೆಗಳಿವೆ.

ಇದರ ಜೊತೆ ಅಮೆರಿಕಾದ ನಾಲ್ವರು ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾದ ಕಾಂಗ್ರೆಸ್ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಲು ಆಹ್ವಾನಿಸಬೇಕೆಂದು ತಮ್ಮ ಸ್ಪೀಕರ್ ಗೆ ಮನವಿ ಸಲ್ಲಿಸಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಈಗಿನ ಬಾಂಧವ್ಯವನ್ನು ಗಮನಿನದಲಿಟ್ಟು, ಪ್ರಧಾನಿ ಮೋದಿ ಅವರಿಂದಲೇ ನೇರವಾಗಿ ಮಾತು ಕೇಳಲು ಇದು ಸುಸಂದರ್ಭ ಎಂದು ತಮ್ಮ ಮನವಿಯಲ್ಲಿ ಶಾಸಕರು ಸ್ಪೀಕರ್ ಗೆ ತಿಳಿಸಿದ್ದಾರೆ.

ಜೂನ್ ಎರಡನೇ ವಾರ ಅಂದರೆ ಜೂನ್ 7 ಅಥವಾ 8 ರಂದು ಪ್ರಧಾನಿ ನರೇಂದ್ರ ಮೋದಿಯವರ ಯುಎಸ್ ಪ್ರವಾಸ ನಿಗದಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited