Untitled Document
Sign Up | Login    
Dynamic website and Portals
  
June 23, 2015

ಜನಾಂಗೀಯ ದ್ವೇಷದಿಂದ ಅಮೆರಿಕ ಇನ್ನೂ ಹೊರಬಂದಿಲ್ಲ: ಒಬಾಮ

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ

ವಾಷಿಂಗ್ಟನ್ : ಅಮೆರಿಕ ಇನ್ನೂ ಜನಾಂಗೀಯ ದ್ವೇಷದಿಂದ ಹೊರಬಂದಿಲ್ಲ. ಅದು ಇನ್ನೂ ನಮ್ಮ ಡಿಎನ್‍ಎಯಲ್ಲೇ ಇದೆ ಎಂದು ಅಧ್ಯಕ್ಷ ಬರಾಕ್ ಒಬಾಮ ಕಳವಳ ವ್ಯಕ್ತಪಡಿಸಿದ್ದಾರೆ.

ಸೌತ್ ಕೆರೋಲಿನಾದ ಚಾರ್ಲ್ಸ್‍ಟನ್ ಚರ್ಚಿನ ಮೇಲೆ ಬಿಳಿ ಸವರ್ಣೀಯರು ನಡೆಸಿದ ದಾಳಿ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಒಬಾಮ, 'ಜನಾಂಗೀಯ ದ್ವೇಷದಿಂದ ನಾವಿನ್ನೂ ಹೊರಬಂದಿಲ್ಲ. ಸಾರ್ವಜನಿಕವಾಗಿ ನೀಗ್ರೋ ಎಂಬ ಪದವನ್ನು ಬಳಕೆ ಮಾಡುವಂತಿಲ್ಲ ಎಂಬುದಾಗಲೀ, ವರ್ಣಭೇದ ನೀತಿ ಇಂದಿಗೂ ಅಸ್ತಿತ್ವದಲ್ಲಿದೆಯೇ, ಇಲ್ಲವೇ ಎಂಬುದಾಗಲೀ ಇಲ್ಲಿ ಮುಖ್ಯವಲ್ಲ. 200-300 ವರ್ಷಗಳ ಹಿಂದೆ ಇದ್ದವುಗಳನ್ನು ಒಮ್ಮಿಂದೊಮ್ಮೆಲೇ ಸಂಪೂರ್ಣವಾಗಿ ಅಳಿಸಿಹಾಕಲು ಸಾಧ್ಯವಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

ನಾನು ಬಿಳಿ ವರ್ಣೀಯ ತಾಯಿ ಮತ್ತು ಕಪ್ಪು ವರ್ಣೀಯ ತಂದೆಗೆ ಹುಟ್ಟಿದವ. ಈಗ ಸ್ವಲ್ಪಮಟ್ಟಿಗೆ ಈ ವಿಚಾರದಲ್ಲಿ ಸುಧಾರಣೆ ಆಗಿದೆಯಾದರೂ, ಗುಲಾಮಗಿರಿಯ ಕರಿನೆರಳು ಮಾತ್ರ ಮಾಯವಾಗಿಲ್ಲ. ಅದು ಈಗಲೂ ನಮ್ಮ ಡಿಎನ್‍ಎಯಲ್ಲೇ ಇದೆ ಎಂದಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited