Untitled Document
Sign Up | Login    
Dynamic website and Portals
  
May 8, 2015

ಧಾರ್ಮಿಕ ಸಹಿಷ್ಣುತೆ ಬಗ್ಗೆ ಮೋದಿ, ಒಬಾಮ ಒಂದೇ ರೀತಿ ನಡೆದುಕೊಳ್ಳುತ್ತಿದ್ದಾರೆ: ಅಮೆರಿಕಾ

ಭಾರತದಲ್ಲಿರುವ ಅಮೆರಿಕಾ ರಾಯಭಾರಿ ರಿಚರ್ಡ್ ವರ್ಮಾ ಭಾರತದಲ್ಲಿರುವ ಅಮೆರಿಕಾ ರಾಯಭಾರಿ ರಿಚರ್ಡ್ ವರ್ಮಾ

ನವದೆಹಲಿ : ಭಾರತಕ್ಕೆ ಧಾರ್ಮಿಕ ಸಹಿಷ್ಣುತೆ ಬಗ್ಗೆ ಪಾಠ ಹೇಳಿಕೊಟ್ಟಿದ್ದ ಅಮೆರಿಕಾ, ಧಾರ್ಮಿಕ ಸಹಿಷ್ಣುತೆ ವಿಚಾರದಲ್ಲಿ ಅಮೆರಿಕಾ ಅಧ್ಯಕ್ಷ ಹಾಗೂ ಭಾರತದ ಪ್ರಧಾನಿ ಇಬ್ಬರೂ ಒಂದೇ ಎನ್ನತೊಡಗಿದೆ.

ಭಾರತದಲ್ಲಿರುವ ಅಮೆರಿಕಾ ರಾಯಭಾರಿ ರಿಚರ್ಡ್ ವರ್ಮಾ, ಧಾರ್ಮಿಕ ಸಹಿಷ್ಣುತೆ ವಿಷಯದಲ್ಲಿ ಬರಾಕ್ ಒಬಾಮ ಹಾಗೂ ಮೋದಿ ಇಬ್ಬರೂ ಒಂದೇ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲ ಎನ್.ಜಿ.ಒ ಗಳ ಪರವಾನಗಿಯನ್ನು ರದ್ದುಗೊಳಿಸಿರುವ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ವರ್ಮಾ, ಎನ್.ಜಿ.ಒ ಗಳಿಗೆ ಸಂಬಂಧಿಸಿದಂತೆ ಉಂಟಾಗಿರುವ ಆತಂಕಗಳನ್ನು ಬಗೆಹರಿಸುವುದು ಭಾರತದ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದ್ದಾರೆ.

ಭಾರತ ಹಾಗೂ ಅಮೆರಿಕಾ ದ್ವಿಪಕ್ಷೀಯ ಸಂಬಂಧ ಗಮನಾರ್ಹ ರೀತಿಯಲ್ಲಿ ಬೆಳವಣಿಗೆಯಾಗಿದೆ. ಇದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದು ರಿಚರ್ಡ್ ವರ್ಮಾ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಬಗ್ಗೆಯೂ ಮಾತನಾಡಿರುವ ವರ್ಮಾ, ಮೋದಿ ಅವರ ಒಂದು ವರ್ಷದ ಆಡಳಿತ ಆಶಾದಾಯಕವಾಗಿದೆ ಎಂದು ಹೇಳಿದ್ದಾರೆ.

ಇಷ್ಟು ದಿನ ಭಾರತದಲ್ಲಿ ಧಾರ್ಮಿಕ ಸಹಿಷ್ಣುತೆ ಬಗ್ಗೆ ಅಕ್ಷೇಪ ವ್ಯಕ್ತಪಡಿಸುತ್ತಿದ್ದ ಅಮೆರಿಕಾ, ಈಗ ಆವಿಷಯದಲ್ಲಿ ಭಾರತ ತಾನು ಒಂದೇ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದಾಗಿ ಹೇಳುತ್ತಿರುವುದು ಅಚ್ಚರಿ ಮೂಡಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited