ಲಂಡನ್ : ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ವಿಶ್ವದ 31 ಗಣ್ಯರ ಖಾಸಗಿ ಮಾಹಿತಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಮೆಂಟ್ನ ಆಯೋಜಕರಿಗೆ ಸೋರಿಕೆಯಾದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವರ್ಷ ನವೆಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಜಿ20 ಶೃಂಗದ ವೇಳೆ ಆಸ್ಟ್ರೇಲಿಯಾದ ವಲಸೆ ವಿಭಾಗದ ಅಧಿಕಾರಿಯೊಬ್ಬರು ಎಡವಟ್ಟು ಮಾಡಿದ್ದು, ಯಾವುದೋ ಇ-ಮೇಲ್ ಅನ್ನು ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿ ಆಯೋಜಕರಿಗೆ ಕಳಿಸುವ ಬದಲು ಮೋದಿ ಮತ್ತು ಇತರ ಗಣ್ಯರ ವಿವರವುಳ್ಳ ಇ-ಮೇಲನ್ನು ಕಳಿಸಿಬಿಟ್ಟಿದ್ದಾರೆ.
ಇದರಲ್ಲಿ ಈ ಗಣ್ಯರ ಪಾಸ್ ಪೋರ್ಟ್ ನಂಬರ್, ವೀಸಾ ಮಾಹಿತಿ ಸೇರಿದಂತೆ ಇತರೆ ಹಲವು ಖಾಸಗಿ ಮಾಹಿತಿಗಳು ಇದ್ದವು ಎಂದು ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.