Untitled Document
Sign Up | Login    
Dynamic website and Portals
  
May 6, 2015

ಯು.ಎನ್ ನಲ್ಲಿ ಭಾರತಕ್ಕೆ ತುರ್ತಾಗಿ ಶಾಶ್ವತ ಸದಸ್ಯತ್ವ ನೀಡಬೇಕು: ಫ್ರಾನ್ಸ್

ವಿಶ್ವಸಂಸ್ಥೆ ಲೋಗೊ ವಿಶ್ವಸಂಸ್ಥೆ ಲೋಗೊ

ನವದೆಹಲಿ : 'ವಿಶ್ವಸಂಸ್ಥೆ' ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಬೇಕು ಎಂದು ಫ್ರಾನ್ಸ್ ಒತ್ತಾಯಿಸಿದೆ. ಬದಲಾಗಿರುವ ಜಗತ್ತಿನಲ್ಲಿ ತುರ್ತಾಗಿ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸ್ಥಾನ ನೀಡಬೇಕಿದೆ ಈ ಮೂಲಕ ವಿಶ್ವಸಂಸ್ಥೆಭದ್ರತಾ ಮಂಡಳಿಯನ್ನು ವಿಸ್ತರಿಸಬೇಕಿದೆ ಎಂದು ಫ್ರಾನ್ಸ್ ಹೇಳಿದೆ.

ಭಾರತದೊಂದಿಗೆ ಬ್ರೆಜಿಲ್ ಹಾಗೂ ಆಫ್ರಿಕಾದ ಪ್ರಾತಿನಿಧ್ಯವೂ ಇರಬೇಕು ಎಂದಿರುವ ಫ್ರಾನ್ಸ್, ತಾನು ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿಯಾಗಿ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದೆ. ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯರಾಗಿರುವ ಬ್ರಿಟನ್, ರಷ್ಯಾ, ಅಮೆರಿಕಾ ಈಗಾಗಲೇ ಭಾರತಕ್ಕೆ ಬೆಂಬಲ ನೀಡಿದ್ದು ಈಗ ಫ್ರಾನ್ಸ್ ಕೂಡ ಭಾರತಕ್ಕೆ ಬೆಂಬಲ ನೀಡಿರುವುದು ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವ ಹೊಂದಿರುವ ಎಲ್ಲಾ ರಾಷ್ಟ್ರಗಳೂ ಭಾರತದ ಬೆಂಬಲಕ್ಕೆ ನಿಂತಂತಾಗಿದೆ.

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಅವರೂ ಸಹ ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲೇಬೇಕು, ಇದಕ್ಕೆ ತಮ್ಮ ರಾಷ್ಟ್ರದ ಬೆಂಬಲ ಇದೆ ಎಂದು ಹೇಳಿದ್ದರು. ವಿಶ್ವದ ಪ್ರಬಲ ರಾಷ್ಟ್ರಗಳು ಭಾರತದ ಪರ ನಿಂತಿರುವುದರಿಂದ ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವ ದೊರೆಯುವುದು ಬಹುತೇಕ ಖಚಿತವಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited