ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರ ಮೇಲೆ ಭಾರೀ ವಾಹನಗಳನ್ನು ಬಳಸಿ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿವೆ.
ಫ್ರಾನ್ಸ್ನ ನೈಸ್ ನಗರ ದಲ್ಲಿ ಟ್ರಕ್ ಹಾಯಿಸಿ 84 ಜನರನ್ನು ಹತ್ಯೆಗೈದ ಮಾದರಿಯಲ್ಲೇ ಭಾರತದಲ್ಲೂ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಈಗ ಬೆಳಕಿಗೆ ಬಂದಿದೆ.
ತೈಲ ಟ್ಯಾಂಕರ್ಗಳು, ಟ್ರಕ್ ಸಹಿತ ಭಾರೀ ವಾಹನಗಳನ್ನು ಬಳಸಿ ಪ್ರಧಾನಿ ಮೋದಿ ಸಹಿತ ಕೆಲವು ಗಣ್ಯರ ಮೇಲೆ ಇಂಡಿಯನ್ ಮುಜಾಹಿದೀನ್ ಹಾಗೂ ಇತರ ಸಂಘಟನೆಗಳ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತ ಚರ ಇಲಾಖೆ ಎಚ್ಚರಿಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ, ಅವರ ವಾಹನದ ಸುತ್ತಮುತ್ತ ದೊಡ್ಡ ವಾಹನಗಳು ಇರದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಗುಪ್ತಚರ ಇಲಾಖೆ ಸೂಚಿಸಿದೆ.
ಈ ಹಿಂದೆಯೇ ಇಂಥದ್ದೊಂದು ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿತ್ತು. ಇದ್ದಾದ ಬಳಿಕ ಕಳೆದ ಎರಡು ದಿನಗಳ ಹಿಂದೆ ಫ್ರಾನ್ಸ್ನಲ್ಲಿ ನಡೆದ ದಾಳಿಯ ಬಳಿಕ ಮತ್ತೂಮ್ಮೆ ಇಂಥ ಎಚ್ಚರಿಕೆಯನ್ನು ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ