Untitled Document
Sign Up | Login    
Dynamic website and Portals
  
January 27, 2015

ಪ್ರಧಾನಿ ಮೋದಿ-ಒಬಾಮ ಮನ್‌ ಕಿ ಬಾತ್‌ ರಾತ್ರಿ 8 ಗಂಟೆಗೆ

ಪ್ರಧಾನಿ ಮೋದಿ ಟ್ವೀಟ್ ಮಾಡಿದ ಮನ್ ಕಿ ಬಾತ್ ರೆಕಾರ್ಡಿಂಗ್‌ ಚಿತ್ರ ಪ್ರಧಾನಿ ಮೋದಿ ಟ್ವೀಟ್ ಮಾಡಿದ ಮನ್ ಕಿ ಬಾತ್ ರೆಕಾರ್ಡಿಂಗ್‌ ಚಿತ್ರ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಜಂಟಿಯಾಗಿ ನಡೆಸಿಕೊಟ್ಟ ಮನ್‌ ಕಿ ಬಾತ್‌ ರೇಡಿಯೋ ಭಾಷಣ ಕಾರ್ಯಕ್ರಮ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ನವದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಭಾನುವಾರ ಮಧ್ಯಾಹ್ನ ಪ್ರಧಾನಿ ಮೋದಿ ಮತ್ತು ಒಬಾಮ ಅವರ ಭಾಷಣವನ್ನು ರೆಕಾರ್ಡಿಂಗ್‌ ಮಾಡಿಕೊಳ್ಳಲಾಗಿದೆ. 35 ನಿಮಿಷಗಳ ಕಾಲದ ಕಾರ್ಯಕ್ರಮ ಇದಾಗಿದೆ.

ಈ ಹಿಂದೆ ಮೋದಿ ಅವರು ನಡೆಸಿಕೊಡುತ್ತಿದ್ದ ಮನ್‌ ಕಿ ಬಾತ್‌ ಕಾರ್ಯಕ್ರಮಕ್ಕಿಂತ ಸ್ವಲ್ಪ ದೊಡ್ಡದಾಗಿರಲಿದೆ. ಒಬಾಮ ಅವರೊಂದಿಗೆ ಸೇರಿ ಮನ್‌ ಕಿ ಬಾತ್‌ ಕಾರ್ಯಕ್ರಮವನ್ನು ರೆಕಾರ್ಡಿಂಗ್‌ ಮಾಡುತ್ತಿರುವ ಫೋಟೋವನ್ನು ಮೋದಿ ಟ್ವೀಟ್‌ ಮಾಡಿದ್ದು, 8 ಗಂಟೆಗೆ ಪ್ರಸಾರವಾಗಲಿದೆ ಎಂದು ಹೇಳಿದ್ದಾರೆ.

ಈ ಬಾರಿಯ ಮನ್‌ ಕಿ ಬಾತ್‌ ಕಾರ್ಯಕ್ರಮ ಏರ್‌ ಇಂಡಿಯಾ ರೇಡಿಯೋದಲ್ಲಿ ಪ್ರಸಾರಗೊಳ್ಳುವುದರ ಜತೆಗೆ ದೂರದರ್ಶನ ಮತ್ತು ಇತರ ಖಾಸಗಿ ರೇಡಿಯೋ ಮತ್ತು ಟೀವಿ ಚಾನಲ್‌ ಗ‌ಳಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮ ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಯಲ್ಲಿ 9 ಗಂಟೆಗೆ ಮರು ಪ್ರಸಾರವಾಗಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited