ವಾಷಿಂಗ್ ಟನ್ : ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮ್ಯಾನ್ ಆಫ್ ಆಕ್ಷನ್(man of action) ಎಂದು ಬಣ್ಣಿಸಿದ್ದ ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಮತ್ತೊಮ್ಮೆ ಮೋದಿ ಅವರನ್ನು ಹೊಗಳಿದ್ದಾರೆ.
ಅಮೆರಿಕಾದ ಆರ್ಥಿಕತೆ ಬಗ್ಗೆ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಒಬಾಮ, ಮೋದಿ ಅವರು ಅಧಿಕಾರಿಗಳಲ್ಲಿರುವ ಜಡತ್ವ ಹೋಗಲಾಡಿಸಿ ಭಾರತವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಎಂಬುದು ದೀರ್ಘಕಾಲ ಪ್ರಕ್ರಿಯೆ ಇದರಲ್ಲಿ ಮೋದಿ ಉತ್ತಮ ಪ್ರಾರಂಭ ಮಾಡಿದ್ದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂದು ಕಾದುನೋಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನರೇಂದ್ರ ಮೋದಿ ತಮ್ಮ ವಿಶಿಷ್ಠ ರಾಜತಾಂತ್ರಿಕ ನಡೆ, ಅಧಿಕಾರಿಗಳಿಂದ ಕೆಲಸ ಮಾಡಿಸುವ ಕೌಶಲ್ಯದಿಂದ ಜಾಗತಿಕ ಮಟ್ಟದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ ಎಂದು ಒಬಾಮ ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಮಯಾನ್ಮಾರ್ ನಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದ ಒಬಾಮ, ಮೋದಿ ಅವರನ್ನು man of action(ಹೇಳಿದಂತೆಯೇ ಮಾಡುವ ವ್ಯಕ್ತಿ) ಎಂದು ಬಣ್ಣಿಸಿದ್ದರು.