Untitled Document
Sign Up | Login    
Dynamic website and Portals
  
January 29, 2015

ಆಡಿಯೋ-ವಿಡಿಯೋ ಟ್ವೀಟ್ ಮಾಡಿದ ವಿಶ್ವದ ಪ್ರಥಮ ನಾಯಕ ಪ್ರಧಾನಿ ಮೋದಿ

ನರೇಂದ್ರ ಮೋದಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ನಡೆಸಿಕೊಟ್ಟ ಮನ್ ಕಿ ಬಾತ್ ಕಾರ್ಯಕ್ರಮದ ಬಗ್ಗೆ ಪ್ರಧಾನಿ ಮೋದಿ ಆಡಿಯೋ-ವಿಡಿಯೋ ಟ್ವೀಟ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.

ತಮ್ಮ ಹಾಗೂ ಬರಾಕ್ ಒಬಾಮ ನಡುವಿನ ಸಂವಹನದ ಭಾಗದ ಆಡಿಯೋ ಹಾಗೂ ವಿಡಿಯೋ ಹೊಂದಿರುವ ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಈ ಸೌಲಭ್ಯ ಬಳಸಿದ ವಿಶ್ವದ ಪ್ರಥಮ ನಾಯಕರಾಗಿದ್ದಾರೆ. ಪ್ರಧಾನಿಯದ್ದು ಸಂಪೂರ್ಣವಾಗಿ ಆಡಿಯೋ-ವಿಡಿಯೋ ಎನೇಬಲ್ಡ್ ಟ್ವಿಟರ್ ಖಾತೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಟ್ವೀಟ್ ಮೂಲಕವೇ ಅದೆಷ್ಟೋ ಜನ ವಿಶೇಷ ಕಾರ್ಯಕ್ರಮವನ್ನು ಆಲಿಸಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಪ್ರಧಾನಿ ಮೋದಿ ಟ್ವಿಟರ್ ಮಿರರ್ ಸೌಲಭ್ಯವನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. ಈ ಸೌಲಭ್ಯವನ್ನು ಬಳಸಿಕೊಂಡ ವಿಶ್ವದ ಪ್ರಥಮ ಪ್ರಧಾನಿಯೆಂಬ ಖ್ಯಾತಿಗೂ ಭಾಜನರಾಗಿದ್ದರು.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಪ್ರಧಾನಿ ಮೋದಿ ಅವರ ಸಾಮಾಜಿಕ ಜಾಲತಾಣ ಖಾತೆ ಒಂದಾಲ್ಲಾ ಒಂದು ದಾಖಲೆ ನಿರ್ಮಿಸುತ್ತಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited