ನ್ಯೂಯಾರ್ಕ್ : ತಮ್ಮ ಎರಡು ದಿನದ ಸಿಲಿಕಾನ್ ವ್ಯಾಲಿ ಭೇಟಿ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ತಲುಪಿದ್ದಾರೆ.
ಸಿಲಿಕಾನ್ ವ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟೆಸ್ಲಾ, ಫೇಸ್ ಬುಕ್, ಗೂಗಲ್ ಕಂಪನಿಗಳಿಗೆ ಭೇಟಿ ನೀಡಿದ್ದರು. ಇದಲ್ಲದೇ ಆಪಲ್ ಸೇರಿದಂತೆ ಪ್ರಖ್ಯಾತ ಐಟಿ ಕಂಪನಿಗಳ ಸಿಇಓ ಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಅದಲ್ಲದೇ, ಸ್ಯಾಪ್ ಸೆಂಟರ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದರು.
ನ್ಯೂಯಾರ್ಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್ ಅಧ್ಯಕ್ಷ ಬರಾಕ್ ಒಬಮಾ, ಫ್ರೆಂಚ್ ಅಧ್ಯಕ್ಷ ಮತ್ತು ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಜೊತೆ ದ್ವಿಪಕ್ಷೀಯ ಮಾತುಕತೆ ವ್ಯವಸ್ಥೆ ಮಾಡಲಾಗಿದೆ.