Untitled Document
Sign Up | Login    
Dynamic website and Portals
  
June 22, 2016

ಪ್ರಧಾನಿ ಮೋದಿಯವರಿಗೆ ಒಬಾಮ ಏರ್‌ ಫೋರ್ಸ್ ಒನ್ ಮಾದರಿಯ ವಿಮಾನ

ಪ್ರಧಾನಿ ಮೋದಿಯವರಿಗೆ ಒಬಾಮ ಏರ್‌ ಫೋರ್ಸ್ ಒನ್ ಮಾದರಿಯ ವಿಮಾನ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಒಬಾಮ ಹೊಂದಿರುವ ಅತ್ಯಂತ ಭದ್ರತೆಯುಳ್ಳ "ಏರ್‌ ಫೋರ್ಸ್ ಒನ್‌' ಮಾದರಿಯ ವಿಮಾನದಲ್ಲಿ ಶೀಘ್ರವೇ ಸಂಚರಿಸಲಿದ್ದಾರೆ. ಯಾವುದೇ ರೀತಿಯ ಬಾಹ್ಯ ದಾಳಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯ ಈ ವಿಶೇಷ ವಿಮಾನಕ್ಕಿದೆ.

2 ವಷ೯ಗಳ ಆಡಳಿತಾವಧಿಯಲ್ಲಿ 40 ರಾಷ್ಟ್ರಗಳಿಗೆ ಭೇಟಿ ನೀಡಿ, ಹಲವಾರು ರಾಜ ತಾ೦ತ್ರಿಕ ಒಪ್ಪ೦ದ ಮಾಡಿರುವ ಪ್ರಧಾನಿ ಮೋದಿ ಇನ್ನು ಮು೦ದೆ ಸುಸಜ್ಜಿತ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.

ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ಜೂನ್ 25ರ೦ದು ನಡೆಯಲಿರುವ ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ ಮೀಟಿ೦ಗ್‍ನಲ್ಲಿ 2 ಹೊಸ ಬೋಯಿ೦ಗ್ ವಿಮಾನಗಳನ್ನು ಖರೀದಿಸುವ ಕುರಿತು ಅ೦ತಿಮ ನಿಧಾ೯ರ ಹೊರಬೀಳಲಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಮೋದಿ ಬೋಯಿ೦ಗ್ 747 ವಿಮಾನದಲ್ಲಿ ಪ್ರಯಾಣಿಸುತ್ತಿದ್ದು, ಇದರಲ್ಲೂ ಸಾಕಷ್ಟು ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಆದರೆ ಈ ವಿಮಾನ ಕ್ಷಿಪಣಿ ದಾಳಿಯಿಂದ ಹಾನಿಗೀಡಾಗುವ ಅಪಾಯವಿದ್ದು, ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷರು ಬಳಕೆ ಮಾಡುತ್ತಿರುವ ಬೋಯಿ೦ಗ್ 747 ಜ೦ಬೋ ಜೆಟ್ ಮಾದರಿಯ ವಿಮಾನ ಖರೀದಿಗೆ ಸರ್ಕಾರ ಮುಂದಾಗಿದೆ.

ಹಲವು ಉಗ್ರ ಸಂಘಟನೆ ಗಳಿಂದ ಬೆದರಿಕೆ ಎದುರಿಸುತ್ತಿರುವ ಪ್ರಧಾನಿ ಮೋದಿ ಅವರ ಸುರಕ್ಷತೆಗೆ ರಕ್ಷಣಾ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited