Untitled Document
Sign Up | Login    
Dynamic website and Portals
  
July 31, 2016

ಯುದ್ಧ ವಿಮಾನಗಳಿಗೆ ಇಂಧನ ಪೂರೈಸಲು 6 ವಿನಾಗಳ ಖರೀದಿಗೆ ಚಿಂತನೆ

ನವದೆಹಲಿ : ಯುದ್ಧ ವಿಮಾನಗಳಿಗೆ ಇಂಧನ ಪೂರೈಕೆ ಮಾಡುವ 6 ವಿಮಾನಗಳ ಖರೀದಿಗೆ ಕೇಂದ್ರ ರಕ್ಷಣಾ ಸಚಿವಾಲಯ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ಫ್ಲೈಟ್ ರಿಫ್ಯೂಯೆಲಿಂಗ್ ಏರ್​ಕ್ರಾಫ್ಟ್ (ಎಫ್​ಆರ್​ಎ) ಮೂಲಕ ಬಾಂಬರ್ ಮತ್ತು ಯುದ್ಧ ವಿಮಾನಗಳಿಗೆ ಯುದ್ಧದ ಸಂದರ್ಭಗಳಲ್ಲಿ ತ್ವರಿತವಾಗಿ ಇಂಧನ ಪೂರೈಕೆ ಮಾಡುವ ಸಲುವಾಗಿ 6 ವಿಮಾನ ಖರೀದಿಸಲು ಕಳೆದೊಂದು ದಶಕದಿಂದ ಎರಡು ಬಾರಿ ಬಿಡ್ ಕರೆದರೂ ಜಾಗತಿಕ ಟೆಂಡರ್​ಗಳನ್ನು ಸೆಳೆಯಲು ವಿಫಲವಾದ ಹಿನ್ನೆಲೆಯಲ್ಲಿ ಕೆಂದ್ರ ಸರ್ಕಾರ ನೇರ ಖರೀದಿಗೆ ಮುಂದಾಗಲಿದೆ ಎನ್ನಲಾಗಿದೆ.

ಸಿಬಿಐನಲ್ಲಿ ಏರ್​ಬಸ್ ಕಂಪನಿ ಹೆಸರಿರುವುದರಿಂದ ಹಾಗೂ ಬಹುವೆಚ್ಚದ ಡೀಲ್​ನಲ್ಲಿ ಹಲವು ವರ್ಷದಿಂದ ಒಂದೇ ಸ್ಥಿತಿ ಇರುವುದರಿಂದಾಗಿ ರಕ್ಷಣಾ ಸಚಿವಾಲಯ ಏರ್​ಬಸ್-330 ಎಮ್ಆ​ರ್ಟಿಟಿ ವಿಮಾನ ಖರೀದಿಗೆ 9 ಸಾವಿರ ಕೋಟಿ ಒಪ್ಪಂದವನ್ನು ಕಡಿದುಕೊಂಡಿದೆ. ಭಾರತೀಯ ವಾಯುಪಡೆಗೆ ಈ ಒಪ್ಪಂದ ಕಡಿತಗೊಂಡ ನಂತರ ನೇರ ಖರೀದಿ ಅನಿವಾರ್ಯವಾಗಿದೆ ಎಂದು ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ವಾಯುಸೇನೆಗೆ ಅವಶ್ಯವಿರುವ ಗಾಳಿಯಲ್ಲಿ ಇಂಧನ ಪೂರೈಕೆ ವಿಮಾನ ಖರೀದಿಗಾಗಿ 2003-04 ರಲ್ಲಿ ಬೇಡಿಕೆಯಿಟ್ಟಿತ್ತು. ಇದರೊಟ್ಟಿಗೆ 2006 ರಲ್ಲಿ ಇಲ್ಯೂಷಿನ್ ಹೆಸರಿನ ಆರು ಟ್ಯಾಂಕರ್ ಖರೀದಿಗೂ ಪ್ರಸ್ತಾವನೆ ಸಲ್ಲಿಸಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
 • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
 • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
 • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
 • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited