ಬೆಂಗಳೂರು : ದೇಶಿ ನಿರ್ಮಿತ ಯುದ್ಧ ವಿಮಾನ ‘ತೇಜಸ್’ ಅಧಿಕೃತವಾಗಿ ಭಾರತೀಯ ವಾಯು ಪಡೆಗೆ ಸೇರ್ಪಡೆಗೊಂಡಿದೆ. ಬೆಂಗಳೂರಿನ ಹೆಚ್ಎಎಲ್ ಏರ್ಬೇಸ್ನಲ್ಲಿ ಹಿರಿಯ ಅಧಿಕಾರಿಗಳು ಪೂಜೆ ಸಲ್ಲಿಸುವ ಮೂಲಕ ಬಹುನಿರೀಕ್ಷಿತ ಯುದ್ಧವಿಮಾನವನ್ನು ಸೇನೆಗೆ ಹಸ್ತಾಂತರಿಸಿದರು.
ವಿಶ್ವದ ಅತೀ ಕಿರಿಯ ಗಾತ್ರದ ಹಾಗೂ ಲಘು ತೂಕದ ಸೂಪರ್ಸಾನಿಕ್ ಫೈಟರ್ ವಿಮಾನವಾಗಿರುವ ತೇಜಸ್ ಬಹು ಬಗೆಯ ಪಾತ್ರಗಳನ್ನು ನಿರ್ವಹಿಸಬಲ್ಲ ಏಕ ಇಂಜಿನ್ ಯುದ್ಧ ವಿಮಾನವಾಗಿದೆ. ಈ ಬಗೆಯ ಎರಡು ತೇಜಸ್ ವಿಮಾನಗಳನ್ನು ಇಂದು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗಿದೆ.
1990ರ ಏರೋನಾಟಿಕಲ್ ಡೆವಲಪ್ಮೆ೦ಟ್ ಏಜೆನ್ಸಿಯು ತೇಜಸ್ನ ವಿನ್ಯಾಸ ತಯಾರಿಸಿ ಹೆಚ್ಎಎಲ್ ಗೆ ಹಸ್ತಾ೦ತರಿಸಿತ್ತು. ಇದಕ್ಕೆ ಡಿಆರ್ ಡಿಒ ಸ೦ಸ್ಥೆಯ ವಿಜ್ಞಾನಿಗಳು ದೇಶಿ ನಿರ್ಮಿತ ಇ೦ಜಿನ್ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಇ೦ಜಿನ್ನಲ್ಲಿ ದೋಷ ಕ೦ಡುಬ೦ದ ಹಿನ್ನಲೆಯಲ್ಲಿ ಅದನ್ನು ಸರಿಪಡಿಸಲು ವಿಳ೦ಬವಾದ್ದರಿ೦ದ ವಿಮಾನ ತಯಾರಿಕಾ ಯೋಜನೆಯೂ ತಡವಾಯಿತು. ಅಂತಿಮವಾಗಿ ಎಲ್ಲ ತಾಂತ್ರಿಕ ದೋಷಗಳನ್ನು ಸರಿಪಡಿಸಕೊಂಡ ತೇಜಸ್ ಮಾದರಿ ವಿಮಾನ ಕೊನೆಗೂ ಸಿದ್ಧಗೊ೦ಡಿದೆ. ಇದೀಗ ಸೇನೆಯಲ್ಲಿ ಬಳಕೆಯಲ್ಲಿರುವ ಮಿಗ್-25ರ ಬದಲಾಗಿ ತೇಜಸ್ ಸೇರ್ಪಡೆಗೆ ಹಸಿರು ನಿಶಾನೆ ಸಿಕ್ಕಿದೆ.