ಬೆಂಗಳೂರು : ಬೆಂಗಳೂರು: 2018ರ ಅಂತ್ಯದ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ಆಧಾರ್ ವ್ಯವಸ್ಥೆಯನ್ನು ಸಕ್ರಿಯವಾಗಿ ಬಳಸಿಕೊಳ್ಳವ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಅನ್ನು ಸಂಪೂರ್ಣವಾಗಿ ಆಧಾರ್ ನೊಂದಿಗೆ ಲಿಂಕ್ ಮಾಡಿಸುವುದಲ್ಲದೆ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯನ್ನು ಮಾಡಲು ಉದ್ದೇಶಿಸಿದೆ. ಪ್ರಯಾಣಿಕರು ದಾಖಲೆ ಪರಿಶೀಲನೆಗೆ ಒಳಪಟ್ಟು ವಿಮಾನದೊಳಗೆ ಪ್ರವೇಶಿಸಲು ಸರಾಸರಿ 25 ನಿಮಿಷ ಬೇಕಾಗುತ್ತದೆ. ಆಧಾರ್ ಮಾಹಿತಿಯನ್ನು ಆಧರಿಸಿ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ಬೋರ್ಡಿಂಗ್(ವಿಮಾನದೊಳಗೆ ಪ್ರವೇಶ) ಕೆಲವೇ ಸೆಕೆಂಡ್‌ಗಳಲ್ಲಿ ಪೂರ್ಣಗೊಳ್ಳಲಿದ್ದು, ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್) ಈ ವ್ಯವಸ್ಥೆಯ ಅಳವಡಿಕೆಗೆ ಮುಂದಾಗಿದೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರಿಶೀಲನಾ ಅವಧಿಯನ್ನು 25 ನಿಮಿಷದಿಂದ 10 ನಿಮಿಷಕ್ಕೆ ಇಳಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಿದ್ದು, ಕ್ಷಿಪ್ರವಾಗಿ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿದೆ. 2018ರ ಡಿಸೆಂಬರ್ ವೇಳೆಗೆ ಆಧಾರ್ ಆಧಾರಿತ ಪರಿಶೀಲನೆ ಸಾಧ್ಯವಾಗಲಿದೆ ಎಂದು ಬಿಐಎ ಎಲ್ ತಿಳಿಸಿದೆ.