ನವದೆಹಲಿ : 66ನೇ ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜ.25ರಂದು ಭಾರತಕ್ಕೆ ಆಗಮಿಸುತ್ತಿದ್ದು, ತಮ್ಮ ಆಗ್ರಾ ಭೇಟಿ ರದ್ದು ಮಾಡಿದ್ದಾರೆ.
ಸೌದಿ ಅರೇಬಿಯಾ ರಾಜ ಅಬ್ದುಲ್ಲಾ ಅವರ ನಿಧನ ಹಿನ್ನೆಲೆಯಲ್ಲಿ ಮಂಗಳವಾರ ಆಗ್ರಾದ ವಿಶ್ವವಿಖ್ಯಾತ ತಾಜ್ ಮಹಲ್ ಭೇಟಿಯನ್ನು ರದ್ದು ಪಡಿಸಿದ್ದು, ಒಬಾಮಾ ನೇರವಾಗಿ ಸೌದಿ ಅರೇಬಿಯಾಗೆ ತೆರಳಲಿದ್ದಾರೆ.
ಮೂರು ದಿನಗಳ ಭಾರತ ಪ್ರವಾಸದಲ್ಲಿನ ಆಗ್ರಾ ಭೇಟಿ ರದ್ದಾಗಿದ್ದು, ಯುಎಸ್ ತಂಡ ಈ ಮಾಹಿತಿಯನ್ನು ದೃಢಪಡಿಸಿವೆ ಎಂದು ಆಗ್ರಾದ ಜಿಲ್ಲಾಧಿಕಾರಿ ಪ್ರದೀಪ್ ಬಟ್ನಾಗರ್ ತಿಳಿಸಿದ್ದಾರೆ.
ಅಲ್ಲದೆ ಒಬಾಮಾ ಆಗ್ರ ಭೇಟಿ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಭದ್ರತೆಯಲ್ಲಿ ತೊಡಗಿದ್ದ ಅಮೆರಿಕ ಭದ್ರತಾ ತಂಡ ಆಗ್ರವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.