ನ್ಯೂಯಾರ್ಕ್ : ಪ್ರಧಾನಿ ನರೇಂದ್ರ ಮೋದಿ ವಿಶ್ವದ ಅತ್ಯುನ್ನತ 30 ಮಂದಿ ಪ್ರಭಾವೀ ಇಂಟರ್ ನೆಟ್ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಟೈಮ್ ನಿಯತಕಾಲಿಕ ಗುರುತಿಸಿರುವ ಪ್ರಭಾವಿಗಳ ಪಟ್ಟಿಯಲ್ಲಿ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ಸಹ ಇದ್ದು, ನಂತರದ ಸ್ಥಾನದಲ್ಲಿ ಮೋದಿ ಇದ್ದಾರೆ.
ವಿಶ್ವದ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹೊಂದಿರುವ ಹಿಂಬಾಲಕರು, ತಮ್ಮ ಕುರಿತಾದ ಸುದ್ದಿಯಿಂದ ಗರಿಷ್ಠ ಸಂಖ್ಯೆಯ ಜನರನ್ನು ತಮ್ಮ ಸುದ್ದಿಗಳ ಮೂಲಕ ಸೆಳೆಯುವ ಸಾಮರ್ಥ್ಯ ಹೊಂದಿರುವ ನಾಯಕರನ್ನು ಆಯ್ದು ಈ ಪಟ್ಟಿಯನ್ನು ತಯಾರಿಸಲಾಗಿದೆ.
ಈ ಪಟ್ಟಿಯಲ್ಲಿ ಹ್ಯಾರಿ ಪಾಟರ್ ಸರಣಿಯ ಬ್ರಿಟಿಷ್ ಲೇಖಕಿ ಜೆ ಕೆ ರೌಲಿಂಗ್ ಅವರು ಕೂಡ ಸೇರಿದ್ದಾರೆ. ಜತೆಗೆ ಹಾಡುಗಾರರಾದ ಟಯ್ಲರ್ ಮತ್ತು ಬಿಯೋನ್ಸ್ ಕೂಡ ಸ್ಥಾನ ಪಡೆದಿದ್ದಾರೆ.
ಟೈಮ್ಸ್ ಪ್ರಕಾರ ಒಬಾಮಾ ಅವರನ್ನು ಹೊರತು ಪಡಿಸಿದರೆ ಮೋದಿ ಅವರು ವಿಶ್ವದ ಇತರೆಲ್ಲ ನಾಯಕರಿಗಿಂತ ಸಾಮಾಜಿಕ ಜಾಲ ತಾಣ ಜನಪ್ರಿಯತೆಯಲ್ಲಿ ಮುಂದಿದ್ದಾರೆ.