Untitled Document
Sign Up | Login    
Dynamic website and Portals
  
January 27, 2015

ಯುವಶಕ್ತಿ ಜಾಗತಿಕ ಮಟ್ಟದಲ್ಲಿ ಒಗ್ಗೂಡಬೇಕಿದೆ: ಪ್ರಧಾನಿ ಮೋದಿ ಕರೆ

ಬರಾಕ್ ಒಬಾಮ-ನರೇಂದ್ರ ಮೋದಿ ಬರಾಕ್ ಒಬಾಮ-ನರೇಂದ್ರ ಮೋದಿ

ನವದೆಹಲಿ : ವಿಶ್ವಾದ್ಯಂತ ಇರುವ ಯುವಶಕ್ತಿ ಒಗ್ಗೂಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಜ.27ರಂದು ಪ್ರಸಾರವಾದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಟ್ಟ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಯುವಕರು ಜಾಗತಿಕ ಮಟ್ಟದಲ್ಲಿ ಒಗ್ಗೂಡಬೇಕಿದೆ ಎಂದು ಕರೆ ನೀಡಿದ್ದಾರೆ.

ಕಮ್ಯುನಿಷ್ಟ್ ಸಿದ್ಧಾಂತ ಹೆಚ್ಚು ಪ್ರಭಾವಿಯಾಗಿದ್ದ ವೇಳೆ ಕಮ್ಯುನಿಷ್ಟರು ಜಾಗತಿಕ ಮಟ್ಟದಲ್ಲಿ ಕಾರ್ಮಿಕರು ಸಂಘಟಿತರಾಗಬೇಕೆಂದು ಕರೆ ನೀಡಿದ್ದರು ಅಂತೆಯೇ ಇಂದು ಯುವಕರೂ ಸಹ ಜಾಗತಿಕ ಮಟ್ಟದಲ್ಲಿ ಒಗ್ಗೂಡಿ ಭವಿಷ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಬೇಕಿದೆ ಎಂದು ಮೋದಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ಜನತೆ ಉಭಯ ನಾಯಕರಿಗೂ ಪ್ರಶ್ನೆ ಕೇಳಿದ್ದರು. ದೇಶದ ಜನತೆ ಕೇಳಿದ್ದ ಪ್ರಶ್ನೆಗಳಿಗೆ ಅಮೆರಿಕಾ ಅಧ್ಯಕ್ಷರು ಉತ್ತರಿಸಿದ್ದು ವಿಶೇಷವಾಗಿತ್ತು.

ತಮ್ಮ ಇಬ್ಬರೂ ಪುತ್ರಿಯರು ಭಾರತದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಆಕರ್ಷಿತರಾಗಿದ್ದಾರೆ. ನಮ್ಮೊಂದಿಗೆ ಅವರೂ ಭಾರತಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದರು, ಆದರೆ ಪರೀಕ್ಷೆಗಳಿದ್ದ ಕಾರಣ ಅವರು ಭಾರತಕ್ಕೆ ಬರಲಾಗಲಿಲ್ಲ ಎಂದು ಬರಾಕ್ ಒಬಾಮ ತಿಳಿಸಿದ್ದಾರೆ. ಬರಾಕ್ ಒಬಾಮ ಅವರ ಪುತ್ರಿಯರು ಯಾವಾಗ ಭಾರತಕ್ಕೆ ಬಂದರೂ ಅವರನ್ನು ಸ್ವಾಗತಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಭಾರತ ಹಾಗೂ ಅಮೆರಿಕಾ ರಾಷ್ಟ್ರಗಳಲ್ಲಿ ಹಲವು ಸಾಮ್ಯತೆಗಳಿದ್ದು, ನಾವು ಅಲ್ಪಾವಧಿಯಲ್ಲಿ ಅತಿ ಹೆಚ್ಚು ಇತಿಹಾಸ ನಿರ್ಮಿಸುತ್ತಿರುವುದಾಗಿ ಬರಾಕ್ ಒಬಾಮ ತಿಳಿಸಿದ್ದಾರೆ. ಇದೇ ವೇಳೆ, ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಕ್ಕೆ ಬರಾಕ್ ಒಬಾಮ ಸಂತಸ ವ್ಯಕ್ತಪಡಿಸಿದ್ದಾರೆ. ಬರಾಕ್- ಒಬಾಮ ಹಾಗೂ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಇ-ಪುಸ್ತಕ ಹೊರಬರಲಿದ್ದು, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ದೇಶದ ಜನತೆ ಕಳಿಸುವ ಅತ್ಯುತ್ತಮವಾದ ನೂರು ಪರಿಕಲ್ಪನೆನ್ನು ಇದರಲ್ಲಿ ಸೇರಿಸಲಾಗುವುದು, ತಮ್ಮದೇ ಆದರೆ ಸಲಹೆಗಳನ್ನು ಕಳಿಸುವಾಗ ಹ್ಯಾಷ್ ಟ್ಯಾಗ್ ಗಳನ್ನು ಬಳಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited