Untitled Document
Sign Up | Login    
Dynamic website and Portals
  
January 20, 2015

ಅಮೆರಿಕ ಎಚ್ಚರಿಕೆ ವರದಿಯಲ್ಲಿ ಹುರುಳಿಲ್ಲ: ಜಲಿಲ್ ಅಬ್ಬಾಸ್ ಜಿಲಾನಿ

ಇಸ್ಲಾಮಾಬಾದ್ : ಒಬಾಮ ಆಗಮನದ ವೇಳೆ ಭಾರತದಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳನ್ನು ನಡೆಸದಂತೆ ಪಾಕ್‌ಗೆ ಅಮೆರಿಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಕುರಿತ ಭಾರತೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಯಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಜಲಿಲ್ ಅಬ್ಬಾಸ್ ಜಿಲಾನಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಜಲಿಲ್ ಅಬ್ಬಾಸ್ ಅವರು, ಪಾಕಿಸ್ತಾನಕ್ಕೆ ಅಮೆರಿಕ ನೀಡಿರುವ ಎಚ್ಚರಿಕೆ ಸಂದೇಶದ ಕುರಿತ ಭಾರತೀಯ ಮಾಧ್ಯಮಗಳ ವರದಿಯಲ್ಲಿ ಹುರುಳಿಲ್ಲ. ಕಳೆದ ವಾರವಷ್ಟೇ ಇಸ್ಲಾಮಾಬಾದ್‌ಗೆ ಭೇಟಿ ನೀಡಿದ್ದ ಅಮೆರಿಕದ ವಿದೇಶಾಂಗ ಸಚಿವ ಜಾನ್ ಕೆರ್ರಿ ಅವರೇ ಉಗ್ರರ ನಿಗ್ರಹ ಕುರಿತು ಪಾಕಿಸ್ತಾನ ತೆಗೆದುಕೊಂಡಿರುವ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ಈ ರೀತಿಯಾದ ಯಾವುದೇ ಎಚ್ಚರಿಕೆ ಸಂದೇಶಗಳು ಪಾಕಿಸ್ತಾನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

65ನೇ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ಭದ್ರತೆ ಹಾಗೂ ಎಚ್ಚರಿಕೆ ಕ್ರಮಗಳನ್ನು ವಹಿಸಿರುವ ಅಮೆರಿಕಾ, ಒಬಾಮಾ ಆಗಮನದ ವೇಳೆ ಉಗ್ರರ ಕರಿನೆರಳು ಭಾರತದ ಮೇಲೆ ಬೀಳದಂತೆ ಹಾಗೂ ವಿಧ್ವಂಸಕ ಕೃತ್ಯಗಳನ್ನು ಎಸಗದಂತೆ ಎಚ್ಚರಿಕೆಯನ್ನು ನೀಡಿದ್ದರು.

ಅಲ್ಲದೆ, ಒಂದು ವೇಳೆ ಅಂತಹ ಕೃತ್ಯಗಳು ನಡೆದರೆ ಪಾಕಿಸ್ತಾನವನ್ನೇ ನೇರವಾಗಿ ಹೊಣೆ ಮಾಡಲಾಗುವುದು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿತ್ತು. ಈ ಕುರಿತ ಸುದ್ದಿ ಭಾರತೀಯ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited