Untitled Document
Sign Up | Login    
Dynamic website and Portals
  
January 7, 2015

ಭಾರತದಲ್ಲಿರುವಾಗ ಬರಾಕ್‌ ಒಬಾಮಾ ಭದ್ರತೆಗೆ ಉಪಗ್ರಹ ನಿಯೋಜನೆ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ

ನವದೆಹಲಿ : ಜ.26ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭದ್ರತೆಗೆ ಸರ್ವೇಕ್ಷಣಾ ಉಪಗ್ರಹವೊಂದನ್ನು ನಿಯೋಜನೆ ಮಾಡಲು ಅಮೆರಿಕ ಸರ್ಕಾರ ಮುಂದಾಗಿದೆ.

ಅಮೆರಿಕ ಅಧ್ಯಕ್ಷರೊಬ್ಬರು ಭಾರತದ ಗಣರಾಜ್ಯೋತ್ಸವ ದಿನದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಅದೂ ಅಲ್ಲದೆ ಒಬಾಮಾ ಅವರು ಜಾಗತಿಕ ಭಯೋತ್ಪಾದಕ ಸಂಘಟನೆಗಳ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಹೀಗಾಗಿ ಅವರ ಭದ್ರತೆ ಕುರಿತು ತೀವ್ರ ಕಟ್ಟೆಚ್ಚರ ವಹಿಸಲು ಈಗಾಗಲೇ ಅಮೆರಿಕ ಗುಪ್ತಚರ ದಳದ ಒಂದು ತಂಡ ಭಾರತಕ್ಕೆ ಆಗಮಿಸಿ, ಕೇಂದ್ರ ಸರ್ಕಾರದ ಅಧಿಕಾರಿಗಳ ಜತೆ ಸಮಾಲೋಚನೆಯಲ್ಲಿ ಮಗ್ನವಾಗಿದೆ.

ಗಣರಾಜ್ಯೋತ್ಸವ ದಿನದ ಸಂದರ್ಭದಲ್ಲಿ ಒಬಾಮಾ ಅವರ ಪ್ರತಿ ಚಲನವಲನದ ಮೇಲೂ ಹದ್ದಿನಗಣ್ಣಿಡಲು ಸರ್ವೇಕ್ಷಣಾ ಉಪಗ್ರಹ ನಿಯೋಜನೆಗೆ ಅಮೆರಿಕ ಗುಪ್ತಚರ ದಳದ ತಂಡ ಮುಂದಾಗಿದೆ. ರಾಜಪಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಪಕ್ಕದಲ್ಲಿ ಒಬಾಮಾ ಅವರು ಕೂತಾಗ ಹೆಚ್ಚಿನ ಸರ್ವೇಕ್ಷಣೆ ವಹಿಸಲು ಚಿಂತನೆ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಗುಪ್ತಚರ ದಳದ ಏಜೆಂಟ್‌ಗಳು ಮಾತ್ರವಲ್ಲೇ ಅಮೆರಿಕದ ಮರೈನ್‌ ಕಮಾಂಡೋ ಹಾಗೂ ಇತರೆ ಪಡೆಗಳನ್ನೂ ಭಾರತಕ್ಕೆ ಅಮೆರಿಕ ರವಾನಿಸಲಿದೆ. ಭಾರತ ಭೇಟಿ ವೇಳೆ ಒಬಾಮಾ ಅವರ ಸನಿಹನಿಂತು ಈ ಪಡೆಗಳು ಭದ್ರತೆ ಒದಗಿಸಲಿವೆ. ಎರಡನೇ ಸ್ತರದಲ್ಲಿ ಎನ್‌ಎಸ್‌ಜಿ ಕಮಾಂಡೋಗಳು ಹಾಗೂ ಮೂರನೇ ಹಂತದಲ್ಲಿ ದೆಹಲಿ ಪೊಲೀಸರು ಭದ್ರತೆ ನೋಡಿಕೊಳ್ಳಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited