Untitled Document
Sign Up | Login    
Dynamic website and Portals
  
September 26, 2016

ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ

ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಪಿಎಸ್ ಎಲ್ ವಿ-ಸಿ35 ರಾಕೆಟ್ ಮೂಲಕ 8 ಉಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಬೆಳಗ್ಗೆ ಸುಮಾರು 9.12ಕ್ಕೆ ಉಡ್ಡಯನ ಮಾಡಲಾಯಿತು. ಈ ಉಡ್ಡಯನದ ವಿಶೇಷವೆಂದರೆ ಮೊಟ್ಟ ಮೊದಲ ಬಾರಿ ಇಸ್ರೋ ತನ್ನ ಒಂದೇ ಉಡ್ಡಯನದಲ್ಲಿ ಉಪಗ್ರಹಗಳನ್ನು 2 ಬೇರೆ, ಬೇರೆ ಕಕ್ಷಗಳಿಗೆ ಸೇರಿಸುವುದು.

ಈ ಉಡಾವಣೆಯು ಇಸ್ರೋದ ಸುದೀರ್ಘಾವಧಿಯ ಕಾರ್ಯವಾಗಿದ್ದು, ಸುಮಾರು 2 ಗಂಟೆ, 15 ನಿಮಿಷಗಳ ಕಾಲ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೋ ಹೇಳಿದೆ. ಉಡಾವಣೆಯಾದ ಸುಮಾರು 17 ನಿಮಿಷಗಳ ಅವಧಿಯಲ್ಲಿ ಭಾರತದ ಬಹು ಉದ್ದೇಶಿತ ಪ್ರಮುಖ ಹವಾಮಾನ ಉಪಗ್ರಹ ಸ್ಕಾಟ್​ಸ್ಯಾಟ್-1 ಅನ್ನು ಪಿಎಸ್ ಎಲ್ ವಿ ಕಕ್ಷೆಗೆ ಸೇರಿಸಿದ್ದು, ಈ ಉಪಗ್ರಹ ಸುಮಾರು 371 ಕೆಜಿ. ತೂಕ ಹೊಂದಿದೆ. ಈ ಸ್ಕಾಟ್​ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ.

ಭಾರತದ ಸ್ಕಾಟ್​ಸ್ಯಾಟ್-1, ಅಲ್ಜೇರಿಯಾದ 5 ಉಪಗ್ರಹಗಳು, ಕೆನಡಾ ಮತ್ತು ಅಮೆರಿಕದ ತಲಾ 1 ಸ್ಯಾಟಲೈಟ್ ಗಳು, ಮುಂಬೈನ ಐಐಟಿ ವಿದ್ಯಾರ್ಥಿಗಳು ನಿರ್ಮಿಸಿದ ಪ್ರಥಮ್(10 ಕೆ.ಜಿ) ಹಾಗೂ ಬೆಂಗಳೂರಿನ ಪಿಇಎಸ್ ವಿದ್ಯಾರ್ಥಿಗಳು ನಿರ್ಮಿಸಿದ ಪಿಸ್ಯಾಟ್(5.25) ಉಪಗ್ರಹಗಳನ್ನು ರಾಕೆಟ್ ಕಕ್ಷೆಗೆ ತಲುಪಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
 • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
 • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
 • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
 • ಇಸ್ರೋದಿಂದ ಇನ್ಸಾಟ್-3 ಡಿಆರ್ ಉಪಗ್ರಹ ಉಡಾವಣೆಗೆ ಸಜ್ಜು
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited