Untitled Document
Sign Up | Login    
Dynamic website and Portals
  
September 4, 2014

ಐಸಿಸ್ ಉಗ್ರರನ್ನು ಮಟ್ಟಹಾಕುವುದಾಗಿ ಒಬಾಮ ಎಚ್ಚರಿಕೆ

ಟಾಲಿನ್ : ಅಮೆರಿಕದ ಇಬ್ಬರು ಪತ್ರಕರ್ತರನ್ನು ಹತ್ಯೆಗೈದ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಕ್ರೋಶಗೊಂಡಿದ್ದು, ಐಸಿಸ್ ಉಗ್ರರ ಹುಟ್ಟಡಗಿಸುವುದಾಗಿ ಕಿಡಿಕಾರಿದ್ದಾರೆ.

ಐಸಿಸ್ ಉಗ್ರರ ಮಟ್ಟಹಾಕಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಮಧ್ಯಪ್ರಾಚ್ಯದಲ್ಲಿ ಒಂದು ಶಕ್ತಿಯೇ ಅಲ್ಲ ಎನ್ನುವವರೆಗೂ ಅಮೆರಿಕ ಹೋರಾಟ ನಡೆಸಲಿದೆ ಎಂದು ಗುಡುಗಿದ್ದಾರೆ.

ಸಿರಿಯಾ ಸರ್ಕಾರದ ಅಧಿಕಾರದಲ್ಲಿ ಕೊರತೆಯಿರುವುದರಿಂದ ಐಸಿಸ್ ಉಗ್ರ ಸಂಘಟನೆಯನ್ನು ನಾಶಪಡಿಸಲು ಸಮಯ ಹಿಡಿಯಲಿದೆ ಎಂದು ಒಬಾಮ ತಿಳಿಸಿದ್ದಾರೆ.

ಪತ್ರಕರ್ತ ಸ್ಟೀವನ್ ಅವರಂತಹ ಅಮೆರಿಕನ್ನರನ್ನು ಕೊಂದು ಏನನ್ನಾದರೂ ಸಾಧಿಸಬಹುದು ಎಂದು ಈ ಕೊಲೆಗಡುಕರು ಅಂದುಕೊಂಡಿದ್ದರೆ ಅದರಲ್ಲಿ ಅವರು ಈಗಾಗಲೇ ವಿಫಲರಾಗಿದ್ದಾರೆ. ಐಸಿಸ್ ಉಗ್ರರು ಇರಾಕ್ ಮಾತ್ರವಲ್ಲ ಮಧ್ಯಪ್ರಾಚ್ಯ ಹಾಗೂ ಅಮೆರಿಕಕ್ಕೆ ಯಾವುದೇ ಸವಾಲಾಗದಿರುವವರೆಗೆ ಹತ್ತಿಕ್ಕಲು ಕ್ರಮಕೈಗೊಳ್ಳುತ್ತೇವೆ ಎಂದು ಒಬಾಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited