Untitled Document
Sign Up | Login    
Dynamic website and Portals
  
February 6, 2015

ಗಾಂಧಿ ಇದ್ದಿದ್ದರೆ ಭಾರತದ ಧಾರ್ಮಿಕ ಅಸಹಿಷ್ಣುತೆ ಕಂಡು ಅಘಾತಕ್ಕೊಳಗಾಗುತ್ತಿದ್ದರು: ಒಬಾಮ

ಬರಾಕ್ ಒಬಾಮ (ಫೈಲ್ ಚಿತ್ರ) ಬರಾಕ್ ಒಬಾಮ (ಫೈಲ್ ಚಿತ್ರ)

ನವದೆಹಲಿ : ಭಾರತದಲ್ಲಿ ಕೆಲವು ವರ್ಷಗಳಿಂದ ಕಂಡುಬರುತ್ತಿರುವ ಧಾರ್ಮಿಕ ಅಸಹಿಷ್ಣುತೆ ಮಹಾತ್ಮಾ ಗಾಂಧಿ ಅವರನ್ನು ಗಾಬರಿಗೊಳಿಸುತ್ತಿತ್ತು ಎಂದು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.

ಭಾರತ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಬರಾಕ್ ಒಬಾಮ, ಭಾರತವೊಂದು ಸುಂದರ ರಾಷ್ಟ್ರ, ಭವ್ಯವಾದ ವೈವಿಧ್ಯತೆ ಹೊಂದಿದೆ, ಆದರೆ ಕೆಲವು ವರ್ಷಗಳಿಂದ ಭಾರತದಲ್ಲಿ ಕಂಡುಬರುತ್ತಿರುವ ಧಾರ್ಮಿಕ ಅಸಹಿಷ್ಣುತೆಯನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಕಂಡಿದ್ದರೆ ಆಘಾತಕ್ಕೊಳಗಾಗುತ್ತಿದ್ದರು ಎಂದು ಒಬಾಮ ಅಭಿಪ್ರಾಯಪಟ್ಟಿದ್ದಾರೆ.

ವೈಟ್ ಹೌಸ್ ನಲ್ಲಿ ಸುಮಾರು 3000 ಯುಸ್ ನಾಯಕರು ಹಾಗೂ ಅಂತಾರಾಷ್ಟ್ರೀಯ ನಾಯಕರನ್ನುದ್ದೇಶಿಸಿ ಮಾತನಾಡಿದ ಒಬಾಮ, ತಮ್ಮ ಭಾಷಣದಲ್ಲಿ ಯಾವ ಧರ್ಮದ ಬಗ್ಗೆಯೂ ಪ್ರಸ್ತಾಪಿಸದೇ, ಭಾರತದಲ್ಲಿನ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಉಲ್ಲೇಖಿಸಿದ್ದಾರೆ. ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ನವದೆಹಲಿಯಲ್ಲಿ ಮಾತನಾಡಿದ ಬರಾಕ್ ಒಬಾಮ ಧಾರ್ಮಿಕ ಅಸಹಿಷ್ಣುತೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ನೇರಾ ನೇರವಾಗಿ ಭಾರತದ ಧಾರ್ಮಿಕ ಸ್ಥಿತಿ-ಗತಿಗಳ ಬಗ್ಗೆ ಮಾತನಾಡಿರುವ ಒಬಾಮ ಇಲ್ಲಿನ ಧಾರ್ಮಿಕ ಸ್ಥಿತಿಯನ್ನು ಕಂಡಿದ್ದರೆ ಮಹಾತ್ಮಾ ಗಾಂಧಿ ಆಘಾತಕ್ಕೊಳಗಾಗುತ್ತಿದ್ದರು ಎಂದು ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited