ನವದೆಹಲಿ : ಭಾರತಕ್ಕೆ ಭೇಟಿನೀಡಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ರಾಜ್ ಘಾಟ್ಗೆ ತೆರಳಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಸಮಾಧಿಗೆ ನಮನ ಸಲ್ಲಿಸಿದ್ದಾರೆ.
ಬೆಳಿಗ್ಗೆ ಭಾರತಕ್ಕೆ ಬಂದಿಳಿದ ಒಬಾಮ ಮತ್ತು ಅವರ ಪತ್ನಿ ಮಿಶಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು. ವಿಮಾನ ನಿಲ್ದಾಣದಿಂದ ಹೊರಟ ಒಬಾಮ ಹೋಟೆಲ್ ಮೌರ್ಯ ಶೆರಟಾನ್ನಲ್ಲಿ ಕೆಲ ಗಂಟೆಗಳ ಕಾಲ ತಂಗಿದ್ದರು.
ಬಳಿಕ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಒಬಾಮ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲಿಂದ ರಾಜ್ ಘಾಟ್ಗೆ ತೆರಳಿ ಗಾಂಧಿ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.
ನಂತರ ದೆಹಲಿಯ ಹೈದ್ರಾಬಾದ್ ಹೌಸ್ಗೆ ಒಬಾಮಾ ತೆರಳಿದ್ದು. ಭೋಜನಕೂಟದ ಬಳಿಕ ಉಭಯ ದೇಶದ ನಾಯಕರು ಮಾತುಕತೆ ನಡೆಸಲಿದ್ದು, ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫೋಟೋ ಕೃಪೆ : www.pmindia.nic.in