Untitled Document
Sign Up | Login    
Dynamic website and Portals
  
July 4, 2015

ಭಾರತ-ಅಮೆರಿಕಗಳ ಸುದೃಢ ಬಾಂಧವ್ಯ ವಿಶ್ವಕ್ಕೇ ಹಿತಕಾರಿ: ಪ್ರಧಾನಿ ಮೋದಿ

239ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಅಮೆರಿಕದ ಜನತೆಗೆ ಪ್ರಧಾನಿ ಮೋದಿ ಸಂದೇಶ

ಅಮೆರಿಕದ ಜನತೆಗೆ ಟ್ವಿಟ್ಟರ್ ಮೂಲಕ ಪ್ರಧಾನಿ ಮೋದಿ ಸಂದೇಶ (ಕೃಪೆಃಟ್ವಿಟರ್) ಅಮೆರಿಕದ ಜನತೆಗೆ ಟ್ವಿಟ್ಟರ್ ಮೂಲಕ ಪ್ರಧಾನಿ ಮೋದಿ ಸಂದೇಶ (ಕೃಪೆಃಟ್ವಿಟರ್)

ನವದೆಹಲಿ : 'ಅಮೆರಿಕದಲ್ಲಿರುವ ನನ್ನ ಪ್ರೀತಿಯ ಸಹೋದರಿ ಸಹೋದರರೆ, ನಿಮಗೆ ಸ್ವಾತಂತ್ರ್ಯ ದಿನದ ಹಾರ್ಧಿಕ ಶುಭಾಶಯಗಳು. ಭಾರತ ಮತ್ತು ಅಮೆರಿಕದ ನಡುವಿನ ಬಾಂಧವ್ಯ ಕಾಲದ ಪರೀಕ್ಷೆಯನ್ನು ಗೆದ್ದಿದೆ ಹಾಗೂ (ಎರಡೂ ದೇಶಗಳು) ಮೌಲ್ಯಗಳನ್ನು ಹಂಚಿಕೊಂಡಿವೆ. ನಮ್ಮೆರಡೂ ಪ್ರಜಾತಂತ್ರ ದೇಶಗಳು ಪ್ರಜಾಸತ್ತಾತ್ಮಕ ಆಚರಣೆಗಳನ್ನು ಮೈಗೂಡಿಸಿಕೊಂಡಿವೆ ಹಾಗೂ ನಾವು ಅದರ ಬಗ್ಗೆ ಹೆಮ್ಮೆ ಪಡುತ್ತೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕದ 239ನೇ ಸ್ವಾತಂತ್ರ್ಯ ದಿನದಂದು ಅಮೆರಿಕದ ಜನತೆಗೆ ಟ್ವೀಟ್ ಮೂಲಕ ನೀಡಿದ ಶುಭಾಶಯ ಸಂದೇಶದಲ್ಲಿ ಹೇಳಿದ್ದಾರೆ.

ಶನಿವಾರ ಅಮೆರಿಕದ ಜನತೆಗೆ ನೀಡಿದ ಸಂದೇಶದಲ್ಲಿ ಪ್ರಧಾನಿ ಮೋದಿ, 'ಭಾರತ-ಅಮೆರಿಕಗಳ ಬಾಂಧವ್ಯದಲ್ಲಿ ವಿಶ್ವಾಸ ಮತ್ತು ಉತ್ಸಾಹ ಪುನಶ್ಛೇತನಗೊಂಡಿರುವ ಬಗ್ಗೆ ನನಗೆ ಹರ್ಷವಾಗುತ್ತಿದೆ' ಎಂದು ಹೇಳಿದ್ದಾರೆ.

'ನಮ್ಮ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯಗಳು ಗಟ್ಟಿಯಾಗಿವೆ. ಕಳೆದ ವರ್ಷ ನಾನು ಅಮೆರಿಕಕ್ಕೆ ಭೇಟಿ ಇತ್ತಿದ್ದೆ ಹಾಗೂ ಈ ವರ್ಷ ಅಧ್ಯಕ್ಷ (ಬರಾಕ್) ಒಬಾಮ ಭಾರತಕ್ಕೆ ಭೇಟಿ ಕೊಟ್ಟಿದ್ದು, ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಪ್ರಥಮ ಅಮೆರಿಕದ ಅಧ್ಯಕ್ಷರು ಎನಿಸಿಕೊಂಡಿದ್ದಾರೆ' ಎಂದು ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

'ಈ ಎರಡೂ ಭೇಟಿಗಳ ಸಂದರ್ಭಗಳಲ್ಲಿ ಉಭಯ ದೇಶಗಳ ಸಂಬಂಧಗಳ ಬಗ್ಗೆ ಗಣನೀಯ ಪ್ರಗತಿಯನ್ನು ಸಾಧಿಸಲಾಯಿತು' ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.

'ಭಾರತ-ಅಮೆರಿಕಗಳ ಸುಢೃಢ ಬಾಂಧವ್ಯ ಎರಡೂ ದೇಶಗಳಿಗಷ್ಟೇ ಅಲ್ಲ, ವಿಶ್ವಕ್ಕೇ ಪ್ರಯೋಜನಕಾರಿಯಾಗಲಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಇನ್ನಷ್ಟು ವೃದ್ಧಿಸಲಿದೆ ಎಂಬ ಆಶಯವನ್ನು ನಾನು ಹೊಂದಿದ್ದೇನೆ' ಎಂದು ಮೋದಿ ಟ್ವೀಟಿನಲ್ಲಿ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited