Untitled Document
Sign Up | Login    
Dynamic website and Portals
  

Related News

ಶಶಿಕಲಾಗೆ 5 ದಿನಗಳ ಪೆರೋಲ್ ಮಂಜೂರು

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಪ್ತೆ, ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರ ಐದು ದಿನಗಳ ಪೆರೋಲ್ ಮಂಜೂರು ಮಾಡಿದೆ. ಪತಿ ನಟರಾಜನ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಶಶಿಕಲಾರಿಗೆ ಪೆರೋಲ್ ಮಂಜೂರು ಮಾಡಲಾಗಿದ್ದು, ಪತಿಯನ್ನು...

ರಾಜ್ಯದ ವಿವಿಧೆಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ದಾಳಿ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ)ಅಧಿಕಾರಿಗಳು ಐದು ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಿದ್ದಾರೆ. ಬೆಂಗಳೂರು, ಚಿತ್ರದುರ್ಗ, ತುಮಕೂರು ಸೇರಿದಂತೆ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಐದು ಅಧಿಕಾರಿಗಳ ಮನೆ ಮತ್ತು ಕಛೇರಿಗಳ ಮೇಲೆ ಎಸಿಬಿ...

ಕಾವೇರಿ ವಿವಾದ: ಮಾಜಿ ಪ್ರಧಾನಿ ದೇವೇಗೌಡರಿಂದ ಉಪವಾಸ ಸತ್ಯಾಗ್ರಹ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಮತ್ತೆ ಮತ್ತೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕುಳಿತು ಉಪವಾಸ ಸತ್ಯಾಗ್ರಹ ಆರಂಭಿಸಿರುವ ದೇವೇಗೌಡರಿಗೆ ಪರಿಷತ್ ಸದಸ್ಯ ಟಿಎ...

ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಪಿಎಸ್ ಎಲ್ ವಿ-ಸಿ35 ರಾಕೆಟ್ ಮೂಲಕ 8 ಉಗ್ರಹಗಳನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಬೆಳಗ್ಗೆ ಸುಮಾರು...

ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಮತ್ತೊಂದು ಮೈಲುಗಲ್ಲು ಸ್ಥಾಪನೆಗೆ ಸಿದ್ಧತೆ ನಡೆಸಿದ್ದು, ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡಲು ತಯಾರಿ ನಡೆಸಿದೆ. ಸೋಮವಾರ ಏಕಕಾಲದಲ್ಲಿ 8 ಉಪಗ್ರಹ ಉಡಾವಣಾ ಕಾರ್ಯ ನಡೆಯಲಿದ್ದು, ಈಗಾಗಲೇ ಆಂಧ್ರಪ್ರದೇಶದ ಶ್ರೀಹರಿಕೋಟಾ...

ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರವೇ ಕಾರಣ: ಬಿ.ಎಸ್.ಯಡಿಯೂರಪ್ಪ

ರೈತರು ಸಂಕಷ್ಟಕ್ಕೆ ಸಿಲುಕಲು ರಾಜ್ಯ ಸರ್ಕಾರವೇ ನೇರ ಕಾರಣ.ಬೆಳೆನಷ್ಟ ಉಂಟಾಗಿರುವ ರೈತರಿಗೆ ಎಕರೆಗೆ ಕೂಡಲೇ 25 ಸಾವಿರ ರೂ. ಸಹಾಯಧನ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ. ಕವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ...

ಇಸ್ರೋದಿಂದ ಇನ್ಸಾಟ್-3 ಡಿಆರ್ ಉಪಗ್ರಹ ಉಡಾವಣೆಗೆ ಸಜ್ಜು

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅತ್ಯಾಧುನಿಕ ಹವಾಮಾನ ಉಪಗ್ರಹ ಇನ್ಸಾಟ್-3 ಡಿಆರ್ ಉಡಾವಣೆಗೆ ಸಜ್ಜಾಗಿದೆ. ಈ ಅತ್ಯಾಧುನಿಕ ಉಪಗ್ರಹವು ಇನ್ಸಾಟ್ ಸರಣಿ ಉಪಗ್ರಹಗಳಲ್ಲಿ ಒಂದಾಗಿದ್ದು, ಈ ಹಿಂದೆ 2013ರಲ್ಲಿ ಇದೇ ಸರಣಿಯ ಇನ್ಸಾಟ್-3ಡಿ ಉಪಗ್ರಹವನ್ನು ಫ್ರಾನ್ಸ್ ನ ಗಯಾನದಿಂದ ಉಡಾವಣೆ ...

ಭಾರತ-ಅಮೆರಿಕ ರಕ್ಷಣಾ ಪರಿಕರ ವಿನಿಮಯ ಒಪ್ಪಂದಕ್ಕೆ ಸಹಿ

ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕ ಸಹಕಾರ ಮುಂದುವರಿಯಲಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ವಾಷಿಂಗ್ಟನ್ನಲ್ಲಿ ಅಮೆರಿಕ ರಕ್ಷಣಾ ಸಚಿವ ಆಶ್ಟನ್ ಕಾರ್ಟರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ವಿಷಯವನ್ನು ಉಭಯ...

ಐರನ್ ಲೇಡಿ, ಐರೋಮ್ ಶರ್ಮಿಳಾರ ಉಪವಾಸ ಸತ್ಯಾಗ್ರಹ ಅಂತ್ಯ

ಸೇನಾಪಡೆಗಳ ದೌರ್ಜನ್ಯದ ವಿರುದ್ಧ ಬರೋಬ್ಬರಿ 16 ವರ್ಷಗಳಿಂದ ಸುದೀರ್ಘವಾಗಿ ಆಮರಣಾಂತ ಉಪವಾಸ ಸತ್ಯಾಗ್ರಹದ ಹೋರಾಟ ನಡೆಸುತ್ತಿದ್ದ ಐರನ್ ಲೇಡಿ, ಐರೋಮ್ ಶರ್ಮಿಳಾ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಮಣಿಪುರದಲ್ಲಿ ಜಾರಿಯಲ್ಲಿರುವ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಶರ್ಮಿಳಾ,...

ಕುಖ್ಯಾತ ಗ್ಯಾಂಗ್ ಸ್ಟರ್ ನಯೀಂ ಪೊಲೀಸ್ ಎನ್ ಕೌಂಟರ್ ಗೆ ಬಲಿ

ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ನಯೀಂ ತೆಲಂಗಾಣ ನಕ್ಸಲ್ ನಿಗ್ರಹ ಪಡೆ ಮತ್ತು ಎನ್ ಐಎ ನಡೆಸಿದ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ ಎಂದು ತೆಲಂಗಾಣ ಪೊಲೀಸರು ಸ್ಪಷ್ಟಪಡಿಸಿದ್ದಾರೆ. 20ಕ್ಕೂ ಹೆಚ್ಚು ಕೊಲೆ ಸೇರಿದಂತೆ, 100ಕ್ಕೂ ಅಧಿಕ ಪ್ರಕರಣಗಳಲ್ಲಿ ಪಾತಕಿ ಮಹಮ್ಮದ್...

ಇನ್ಸಾಟ್-3ಡಿಆರ್ ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ

ಕಳೆದ ತಿಂಗಳು 20 ಉಪಗ್ರಹಗಳನ್ನು ಏಕಕಾಲಕ್ಕೆ ಅಂತರಿಕ್ಷಕ್ಕೆ ಉಡಾಯಿಸುವ ಮೂಲಕ ಸಾಧನೆ ಮಾಡಿದ್ದ ಇಸ್ರೋ ಈ ತಿಂಗಳಾಂತ್ಯದಲ್ಲಿ ಇನ್ಸಾಟ್-3ಡಿಆರ್ ಹವಾಮಾನ ಉಪಗ್ರಹವನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸುತ್ತಿದ್ದು, ಮತ್ತೊಂದು ಮೈಲುಗಲ್ಲು ಸ್ಥಾಪಿಸಲಿದೆ. ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕ ಮೈಲ್​ಸಮಿ ಅಣ್ಣಾದುರೈ,ಈ ಬಗ್ಗೆ ಮಾಹಿತಿ...

ಇಸ್ರೋದ ಮತ್ತೊಂದು ಸಾಧನೆ: 20 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 34 ರಾಕೆಟ್ ಉಡಾವಣೆ

20 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 34 ರಾಕೆಟ್ ನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದೆ. ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಬೆಳಿಗ್ಗೆ 9.26ಕ್ಕೆ ಪಿಎಸ್​ಎಲ್​ವಿ-ಸಿ 34 ರಾಕೆಟ್ ಯಶಸ್ವಿಯಾಗಿ...

ಪುರಾತನ ವಿಗ್ರಹಗಳನ್ನು ಭಾರತಕ್ಕೆ ಹಸ್ತಾಂತರಿಸಿದ ಅಮೆರಿಕ

ಅಮೆರಿಕ ಸೇರಿದ್ದ ಸುಮಾರು 200ಕ್ಕೂ ಅಧಿಕ ಬೆಲೆ ಬಾಳುವ ಪುರಾತನ ಕಾಲದ ಸುಮಾರು 66.74ಕೋಟಿ ಮೌಲ್ಯದ ಕಲಾಕೃತಿಗಳನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ. ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಮೂರುದಿನಗಳ ಅಮೆರಿಕಾ ಭೇಟಿಯಲ್ಲಿದ್ದು, ವಾಷಿಂಗ್ಟನ್ ಡಿಸಿಗೆ ಆಗಮಿಸಿದಾಗ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ...

ಮಥುರಾದಲ್ಲಿ ಭೂ ಒತ್ತುವರಿ ತೆರವು ವೇಳೆ ಘರ್ಷಣೆ: 200 ಮಂದಿ ಬಂಧನ

ಉತ್ತರ ಪ್ರದೇಶದ ಮಥುರಾದಲ್ಲಿ ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಡೆದ ಘರ್ಷಣೆಯಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು 200 ಮಂದಿಯನ್ನು ಬಂಧಿಸಿದ್ದಾರೆ. ಸುಭಾಷ್ ಚಂದ್ರ ಬೋಸ್ ಅನುಯಾಯಿಗಳು ಎಂದು ಹೇಳಿಕೊಳ್ಳುತ್ತಿದ್ದ ಅಜಾದ್ ಭಾರತ್ ವಿಧಿಕ್ ವೈಚಾರಿಕ್ ಕ್ರಾಂತಿ ಸಂತ್ಯಾಗ್ರಹಿ ಸಂಘಟನೆಯ...

ಸಿಎಂ ಸಿದ್ದರಾಮಯ್ಯ ಹಾಗೂ 28 ಸಚಿವರ ವಿರುದ್ಧ ಎಸಿಬಿಗೆ ದೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ 28 ಸಚಿವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ದೂರು ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ದೂರು ದಾಖಲಿಸಿದ್ದಾರೆ. ಪೊಲೀಸ್ ವರ್ಗಾವಣೆಯಲ್ಲಿ...

ಆಗಸದಲ್ಲಿ ಇನ್ನೊಂದು ವಿಸ್ಮಯ: ಇಂದು ಬುಧ ಗ್ರಹದ ಸಂಚಾರ ವೀಕ್ಷಿಸಬಹುದು

ಸೋಮವಾರ ಬುಧ ಗ್ರಹ ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ. ಸೂರ್ಯನ ಸುತ್ತ ಹಾದುಹೋಗುವ ಬುಧ ಗ್ರಹವನ್ನು ವೀಕ್ಷಿಸುವ ಅದೃಷ್ಟ ಈ ಬಾರಿ ಭಾರತೀಯರಿಗೆ ಒಲಿದಿದ್ದು, ಸಂಜೆ 4.41ರಿಂದ ಮರ್ಕ್ಯುರಿಯನ್ನು ವೀಕ್ಷಿಸಬಹುದು. ಈ ಬಾರಿಯ 7 ಗಂಟೆ ಮತ್ತು 30 ನಿಮಿಷದ ಕಾಲಾವಧಿಯಲ್ಲಿ ಸೂರ್ಯನನ್ನು...

ಮೂರು ವಾಸಯೋಗ್ಯ ಗ್ರಹಗಳನ್ನು ಪತ್ತೆ ಮಾಡಿದ ವಿಜ್ಞಾನಿಗಳು

ಸೌರ ಮಂಡಲದಾಚೆಗೆ ಮೂರು ಸಂಭಾವ್ಯ ವಾಸಯೋಗ್ಯ ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಭೂಮಿಯಿಂದ 39 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಈ ತಂಪಾದ ಕುಬ್ಜಗ್ರಹವನ್ನು ಪತ್ತೆ ಹಚ್ಚಲಾಗಿದೆ. ಇವುಗಳ ಗಾತ್ರ ಸುಮಾರು ನಮ್ಮ ಭೂಮಿ ಅಥವಾ ಶುಕ್ರನ ಗಾತ್ರದಲ್ಲಿರಬಹುದು ಎಂದು ಹೇಳಲಾಗಿದೆ. ಬೆಲ್ಜಿಯಂನ ಲೀಗ್‌...

ಉಗ್ರ ಜೈನುಲ್ ಅಬೇದಿನ್ ನನ್ನು ಬಂಧಿಸಿದ ಪೊಲೀಸರು

ಕರ್ನಾಟಕ, ಗುಜರಾತ್ ಪೊಲೀಸರು ಹಾಗೂ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಘಟಕ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿ ಮೋಸ್ಟ್ ವಾಂಟೆಡ್ ಉಗ್ರ ಜೈನುಲ್ ಅಬೇದಿನ್ ​ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮುಂಬೈ ವಿಮಾನ...

ಲೋಕಾಯುಕ್ತದಿಂದ ಎಸಿಬಿಗೆ ಪ್ರಕರಣ ವರ್ಗಾವಣೆಗೆ ಹೈಕೋರ್ಟ್ ತಡೆ

ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ವರ್ಗಾವಣೆ ಮಾಡಲು ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ವಕೀಲ ಚಿದಾನಂದ ಅರಸ್‌ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಮೂರ್ತಿ ಸುಬ್ರೋ ಕಮಲ್ ಮುಖರ್ಜಿ ಮತ್ತು ನ್ಯಾ. ರವಿ...

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

ರಾಜ್ಯದಲ್ಲಿನ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಬೇಕಾದ ಹೋರಾಟ, ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಶುಕ್ರವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಬರ ಅಧ್ಯಯನ ನಡೆಸುವ ಸಂಬಂಧ ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ ಆರೇಳು ತಂಡಗಳನ್ನು ರಚಿಸಲು ಉದ್ದೇಶಿಸಲಾಗಿದ್ದು, ಈ ಸಭೆಯಲ್ಲಿ ಅಂತಿಮಗೊಳ್ಳಲಿದೆ. ಇದರೊಂದಿಗೆ...

ಇಸ್ರೋದಿಂದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಗುರುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಭಾರತದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಗುರುವಾರ ಸಂಜೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್...

ಗಣ್ಯರಿಗೆ ನಿಯೋಜಿಸಿದ್ದ 600 ಕಮಾಂಡೋಗಳನ್ನು ಹಿಂಪಡೆದ ಎನ್‌ ಎಸ್‌ ಜಿ

ಉಗ್ರರ ವಿರೋಧಿ ಕಾರ್ಯಾಚರಣೆಯೇ ಮುಖ್ಯ ಉದ್ದೇಶವಾಗಿರುವ ಎನ್ ಎಸ್ ಜಿ ಕಮಾಂಡೋಗಳನ್ನು ಬೇರೆ ಬೇರೆ ಕಾರಣಗಳಿಂದಾಗಿ ಗಣ್ಯರ ಭದ್ರತೆಗೆ ನಿಯೋಜನೆಗೊಳಿಸಲಾಗಿತ್ತು. ಈಗ ಗಣ್ಯರ ರಕ್ಷಣೆಗೆ ನಿಯೋಜನೆಗೊಂಡ ಸುಮಾರು 600 ಕಮಾಂಡೋಗಳನ್ನು ಎನ್‌ ಎಸ್‌ ಜಿ ಹಿಂದಕ್ಕೆ ಕರೆಸಿಕೊಂಡು, ಇತ್ತೀಚೆಗೆ ನಡೆದ...

ಭಾರತದಿಂದ ವಿಯೆಟ್ನಾಂನಲ್ಲಿ ಉಪಗ್ರಹ ಟ್ರ್ಯಾಕಿಂಗ್ ಸ್ಟೇಷನ್ ನಿರ್ಮಾಣ

ಭಾರತ ದಕ್ಷಿಣ ವಿಯೆಟ್ನಾಂನಲ್ಲಿ ಉಪಗ್ರಹ ಟ್ರ್ಯಾಕಿಂಗ್ ಸ್ಟೇಷನ್ ಮತ್ತು ಚಿತ್ರಣ ಕೇಂದ್ರವನ್ನು (imaging centre) ನಿರ್ಮಾಣ ಮಾಡಲಿದೆ. ಇದರಿಂದ ಚೀನಾ ಮತ್ತು ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಈ ಪ್ರದೇಶವನ್ನು ಆವರಿಸುವ ಭಾರತೀಯ ಭೂ ವೀಕ್ಷಣೆಯ ಉಪಗ್ರಹಗಳ ಚಿತ್ರ ಸಿಗಲಿದೆ ಎಂದು...

ಉಪಗ್ರಹ ಉಡಾವಣೆ ಯಶಸ್ವಿಃ ದೇಸಿ ಜಿಪಿಎಸ್ ವ್ಯವಸ್ಥೆಗೆ ಒಂದು ಹೆಜ್ಜೆ ಹತ್ತಿರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಬುಧವಾರ ಬೆಳಗ್ಗೆ ಶ್ರೀಹರಿಕೋಟಾದಿಂದ ಭಾರತದ ಐದನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಸಿ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದರಿಂದ ದೇಶಿಯ ಜಿಪಿಎಸ್ ವ್ಯವಸ್ಥೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ. ಈಗಾಗಲೇ ೪...

ಗೋಹತ್ಯಾ ನಿಷೇಧಃ ಪ್ರಧಾನಿ ಮೋದಿಗೆ ಐ ಎಸ್ ಐ ಎಸ್ ಕೊಲೆ ಬೆದರಿಕೆ ಪತ್ರ

ಐ ಎಸ್ ಐ ಎಸ್ ಹಸ್ತಾಕ್ಷರವಿದೆ ಎನ್ನಲಾದ ಅನಾಮಧೇಯ ಪತ್ರವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಗೋವಾ ಪೊಲೀಸರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಮತ್ತು ಭಯೋತ್ಪಾದಕ ನಿಗ್ರಹ ದಳಕ್ಕೆ...

ನಾಗ್ಪುರದಲ್ಲಿ ಐಸಿಸ್ ಸೇರಲಿದ್ದ 3 ಯುವಕರ ಸೆರೆ

ಐಸಿಸ್‌ ಉಗ್ರ ಸಂಘಟನೆಯನ್ನು ಸೇರಿಕೊಳ್ಳಲು ಯತ್ನಿಸುತ್ತಿದ್ದಾರೆಂಬ ಸಂದೇಹದಿಂದ ಶನಿವಾರ ಉಗ್ರ ನಿಗ್ರಹ ದಳ (ಎಟಿಎಸ್‌) ನಾಗ್ಪುರ ವಿಮಾನ ನಿಲ್ದಾಣದಲ್ಲಿ ಮೂವರನ್ನು ಬಂಧಿಸಿದೆ. ಎಟಿಎಸ್ ಮೂಲಗಳ ಪ್ರಕಾರ, ಬಂಧಿತರು ತೆಲಂಗಾಣ ಮೂಲದವರಾಗಿದ್ದು ಜಮ್ಮು-ಕಾಶ್ಮೀರಕ್ಕೆ ತೆರಳುತ್ತಿದ್ದರು. ಬಂಧಿಸಲ್ಪಟ್ಟಿರುವ ಮೂವರು ವ್ಯಕ್ತಿಗಳು ಒಂದು ದಿನದ ಹಿಂದಷ್ಟೇ ರಸ್ತೆ...

ದ್ವಿದಳ ಧಾನ್ಯ ಅಕ್ರಮ ಸಂಗ್ರಹ ತಡೆಗೆ ಕೇಂದ್ರ ಸರ್ಕಾರದಿಂದ ಕ್ರಮ

ಬೇಳೆ-ಕಾಳುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ರಮ ಸಂಗ್ರಹಣೆ ತಡೆಯಲು, ಕೇಂದ್ರ ಸರ್ಕಾರ ನೊಂದಾಯಿತ ಆಹಾರ ಸಂಸ್ಕರಣ ಘಟಕಗಳು, ಆಮದುದಾರರು ಮತ್ತು ರಫ್ತುದಾರರ ಬೇಳೆ-ಕಾಳುಗಳ ಸಂಗ್ರಹದ ಮೇಲೆ ಮಿತಿ ಹೇರಿದೆ. ಬೇಳೆ-ಕಾಳುಗಳನ್ನು ಅಕ್ರಮವಾಗಿ ಸಂಗ್ರಹಿಸಿರುವವರ ಮೇಲೆ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವವರ...

ಭಾನುವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಪೀಣ್ಯ 220/ 66/ 11 ಕಿ.ವ್ಯಾ. ಸಾಮರ್ಥ್ಯದ ಎಸ್‌ಆರ್‌ಎಸ್‌ ಪೀಣ್ಯ ರಿಸೀವಿಂಗ್‌ ಸ್ಟೇಷನ್‌ನಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅ. 11, ಭಾನುವಾರದಂದು ಬೆಂಗಳೂರು ಉತ್ತರ ಭಾಗದ ನೂರಾರು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ. ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಆ...

ಆಸ್ಟ್ರೋಸ್ಯಾಟ್ ಉಪಗ್ರಹ ಯಶಸ್ವಿ ಉಡಾವಣೆ

ಖಗೋಳ ವೀಕ್ಷಣಾಲಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಬಹುನಿರೀಕ್ಷಿತ ಸ್ವದೇಶಿ ನಿರ್ಮಿತ ಮೊತ್ತಮೊದಲ ಆಸ್ಟ್ರೋಸ್ಯಾಟ್ ಉಪಗ್ರಹ ಸೋಮವಾರ ಬೆಳಗ್ಗೆ 10 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಇದರಿಂದ ಇಸ್ರೋ ಮತ್ತೊಂದು ಇತಿಹಾಸ ಸೃಷ್ಟಿಸಿದಂತಾಗಿದೆ. 1513 ಕೆಜಿ ತೂಕದ ಆಸ್ಟ್ರೋಸ್ಯಾಟ್...

ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಸೆ. 26 ರಂದು ಕರ್ನಾಟಕ ಬಂದ್

ಕಳಸಾ-ಬಂಡೂರಿ, ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಸೆ. 26ರಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ ಗೆ ಕರೆ ನೀಡಿವೆ. 30ಕ್ಕೂ ಹೆಚ್ಚು ಸಂಘಟನೆಗಳು ಮಹದಾಯಿ ಹೋರಾಟಕ್ಕೆ ಕೈಜೋಡಿಸುವ ಭರವಸೆ ಕೊಟ್ಟಿರುವುದರಿಂದ ಬಂದ್ ಜನಜೀವನ ಅಸ್ತವ್ಯಸ್ತಗೊಳಿಸುವ ಸುಳಿವು ನೀಡಿದೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಮತ್ತು...

ಏಕ ಶ್ರೇಣಿ-ಏಕ ಪಿಂಚಣಿ ಯೋಜನೆಃ ಅಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯ

ಏಕ ಶ್ರೇಣಿ-ಏಕ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿವುದಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತೆ ಭರವಸೆ ನೀಡಿದ ನಂತರ, ಮೂವರು ಮಾಜಿ ಸೈನಿಕರು ತಮ್ಮ ಅಮರಣಾಂತರ ಉಪವಾಸ ಸತ್ಯಾಗ್ರಹವನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಆದರೆ ನಮ್ಮ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗೋವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು...

ಗುರುವಾರ ಸಂಜೆ ಜಿಸ್ಯಾಟ್-6 ಸಂವಹನ ಉಪಗ್ರಹ ಉಡಾವಣೆ

ಇಸ್ರೋ ನಿರ್ಮಿತ ಭಾರತದ 25 ನೇ ಸಂಹವನ ಉಪಗ್ರಹ ಜಿಸ್ಯಾಟ್-6 ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಉಪಗ್ರಹದ ಉಡಾವಣೆ ಗುರುವಾರ ಸಂಜೆ 4.52ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ. ಸ್ವದೇಶಿ ನಿರ್ಮಿತ ಈ...

ಇಸ್ರೋದಿಂದ ಮೊದಲ ಬಾರಿಗೆ ಅಮೇರಿಕಾದ 9 ನ್ಯಾನೋ, ಮೈಕ್ರೋ ಉಪಗ್ರಹಗಳ ಉಡಾವಣೆ

ಇಸ್ರೋ ಇದೇ ಮೊದಲ ಬಾರಿಗೆ ಅಮೇರಿಕಾದ 9 ನ್ಯಾನೋ, ಮೈಕ್ರೋ ಉಪಗ್ರಹಗಳನ್ನು 2015-16 ರ ಅವಧಿಯಲ್ಲಿ ಉಡಾವಣೆ ಮಾಡಲಿದೆ. ಇಸ್ರೋದ ವಾಣಿಜ್ಯ ಅಂಗಸಂಸ್ಥೆ ಆಂಟ್ರಿಕ್ಸ್ ಕಾಪೋರೇಷನ್ 2015-16 ನೇ ಸಾಲಿನಲ್ಲಿ ಅಮೆರಿಕದ 9 ನ್ಯಾನೋ ಉಪಗ್ರಹಗಳ ಉಡಾವಣೆಯ ಗುತ್ತಿಗೆಯನ್ನು ಪಡೆದುಕೊಂಡಿರುವುದಾಗಿ ಇಸ್ರೋದ ಸಾರ್ವಜನಿಕ...

ರೈತರ ಸಮಸ್ಯೆ ಬಗ್ಗೆ ಜಂತರ್ ಮಂತರ್ ನಲ್ಲಿ ದೇವೆಗೌಡರ ಉಪವಾಸ ಸತ್ಯಾಗ್ರಹ

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಹೆಚ್ ಡಿ ದೇವೇಗೌಡ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರ ಆತ್ಮಹತ್ಯೆಯ ವಿಷಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ರೈತರ ಆತ್ಮಹತ್ಯೆ ಕುರಿತು ಲೋಕಸಭೆಯಲ್ಲಿ ಚರ್ಚೆ...

ನಾಸಾದಿಂದ ಭೂಮಿಯನ್ನು ಹೋಲುವ ಗ್ರಹ ಪತ್ತೆ

ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ನಾಸಾ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭೂಮಿಯನ್ನೇ ಹೋಲುವ ಗ್ರಹವೊಂದನ್ನು ನಾಸಾದ ದೂರದರ್ಶಕ ಕೆಪ್ಲರ್ ಪತ್ತೆ ಹಚ್ಚಿದ್ದು, ಭೂಮಿಗಿಂತಲೂ ಹಿರಿಯ ಹಾಗೂ ದೊಡ್ಡದಾದ ಗ್ರಹ ಇದೆಂದು ನಾಸಾ ಗುರುವಾರ ತಿಳಿಸಿದೆ. ಈ ನೋತನ ಗ್ರಹಕ್ಕೆ ನಾಸಾ ಕೆಪ್ಲರ್ 452ಬಿ...

ಗಗನ್ ವಿಮಾನ ದಿಕ್ಸೂಚಿ ವ್ಯವಸ್ಥೆ ಉದ್ಘಾಟನೆ

ವಿಮಾನಯಾನ ಕಾರ್ಯಚಟುವಟಿಕೆಗಳಿಗಾಗಿ ದಕ್ಷ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಗಗನ್ (ಜಿಪಿಎಸ್ - ಏಡೆಡ್ ಜಿಯೊ ಆಗ್​ವೆುಂಟೆಡ್ ನ್ಯಾವಿಗೇಷನ್) ದಿಕ್ಸೂಚಿ ವ್ಯವಸ್ಥೆಯನ್ನು ನಾಗರೀಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಸೋಮವಾರ ಉದ್ಘಾಟಿಸಿದರು. ಯುಎಸ್. ಜಪಾನ್ ಮತ್ತು ಯುರೋಪ್ ನಲ್ಲಿ ಮಾತ್ರ ಇದ್ದ...

5 ಉಪಗ್ರಹಗಳನ್ನು ಉಡಾವಣೆ ಮಾಡಲಿರುವ ಇಸ್ರೋ

ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಪಿಎಸ್​ಎಲ್​ವಿ ಸಿ-28 ಉಡಾವಣಾ ವಾಹನವು ಇದೇ ಮೊದಲ ಬಾರಿಗೆ ಅತೀ ಹೆಚ್ಚು ಭಾರದ ಉಪಗ್ರಹಗಳನ್ನು ಜುಲೈ 10 ರಂದು ವಾಣಿಜ್ಯ ಉಡಾವಣೆ ಮಾಡಲಿದೆ. ಒಟ್ಟು 1,440 ಕೆ.ಜಿ. ಭಾರದ 5 ಉಪಗ್ರಹಗಳನ್ನು ಶ್ರೀಹರಿಕೋಟಾದಿಂದ ಜುಲೈ 10...

ಎಸಿಬಿ ಮುಖ್ಯಸ್ಥರ ನೇಮಕಾತಿ ವಿವಾದ: ಹೈಕೋರ್ಟ್ ಮೆಟ್ಟಿಲೇರಿದ ದೆಹಲಿ ಸರ್ಕಾರ

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಮುಖ್ಯಸ್ಥರಾಗಿ ಹಿರಿಯ ಪೊಲೀಸ್ ಅಧಿಕಾರಿ ಎಂ.ಕೆ.ಮೀನಾ ನೇಮಕ ಪ್ರಶ್ನಿಸಿ ದೆಹಲಿ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಸಿಬಿ ಮುಖ್ಯಸ್ಥರನ್ನಾಗಿ ಎಸ್‌.ಎಸ್.ಯಾದವ್ ಅವರನ್ನು ನೇಮಕ ಮಾಡಿದ್ದರು. ಆದಾಗ್ಯೂ ಜೂನ್ 9ರಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್...

ಒನ್ ರಾಂಕ್, ಒನ್ ಪೆನ್ಶನ್ ಯೋಜನೆಗೆ ಆಗ್ರಹ: ಮಾಜಿ ಸೈನಿಕರಿಂದ ಉಪವಾಸ ಸತ್ಯಾಗ್ರಹ

ಒನ್ ರಾಂಕ್, ಒನ್ ಪೆನ್ಶನ್ ಯೋಜನೆ ಜಾರಿ ವಿಳಂಬವನ್ನು ಖಂಡಿಸಿ ನೂರಾರು ಮಾಜಿ ಸೈನಿಕರು ದೆಹಲಿಯ ಜಂತರ್‌ ಮಂತರ್‌ ನಲ್ಲಿ ಸರಣಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಜಂತರ್‌ ಮಂತರ್‌ನಲ್ಲಿ ಆರಂಭಿಸಲಾಗಿರುವ ಸರದಿ ಉಪವಾಸ ಸತ್ಯಾಗ್ರಹವನ್ನು ಭಾರತೀಯ ಮಾಜಿ ಸೈನಿಕರ ಆಂದೋಲನ ಸಂಘಟನೆ (ಐಇಎಸ್‌ಎಂ)...

ಜಿ-ಸ್ಯಾಟ್ 6 ಉಪಗ್ರಹ ಜುಲೈ ಅಥವಾ ಆಗಸ್ಟ್ ನಲ್ಲಿ ಉಡಾವಣೆ

ಮುಂದುವರಿದ ಸಂವಹನ ಉಪಗ್ರಹ ’ಜಿ-ಸ್ಯಾಟ್‌ 6' ಜುಲೈ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಡಾ|ಎ.ಎಸ್‌.ಕಿರಣ್‌ ಕುಮಾರ್‌ ತಿಳಿಸಿದ್ದಾರೆ. ಬೆಂಗಳೂರಿನ ಕೇಂದ್ರೀಯ ಉತ್ಪಾದನಾ ತಾಂತ್ರಿಕ ಸಂಸ್ಥೆ (ಸಿಎಂಟಿಐ) ಆವರಣದಲ್ಲಿ ಭಾರತೀಯ ಮಾಪನಶಾಸ್ತ್ರ ಸೊಸೈಟಿ ಹಮ್ಮಿಕೊಂಡಿದ್ದ ’ವಿಶ್ವ ಮಾಪನಶಾಸ್ತ್ರ...

ಭಯೋತ್ಪಾದನೆ ನಿಗ್ರಹಕ್ಕೆ ಅಂತಾರಾಷ್ಟ್ರೀಯ ಸಮುದಾಯ ಒಮ್ಮತದಿಂದ ಹೋರಾಡಬೇಕು: ಮೋದಿ

ಇತ್ತೀಚೆಗೆ ಭಯೋತ್ಪಾದಕತೆ ಮನುಕುಲಕ್ಕೆ ಮಾರಕವಾಗಿದೆ. ಮಾನವೀಯತೆಗೇ ಸವಾಲಾಗಿ ವಿಜೃಂಭಿಸುತ್ತಿದೆ. ಇದನ್ನು ನಿಗ್ರಹಿಸಲು ಅಂತಾರಾಷ್ಟ್ರೀಯ ಸಮುದಾಯ ಒಮ್ಮತದಿಂದ ಹೋರಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಚೀನಾ ಪ್ರವಾಸದ ಬಳಿಕ ಮಂಗೋಲಿಯಾಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರೊಂದಿಗೆ ಮಂಗೋಲಿಯಾ ಪ್ರಧಾನಿ ಚಿಮ್ಡ್...

ಚೀನಾದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ: ಟೆರ್ರಾಕೋಟಾ ಮ್ಯೂಸಿಯಂಗೆ ಭೇಟಿ

ಇಂದಿನಿಂದ ಮೂರು ದಿನಗಳ ಚೀನಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೀನಾದಲ್ಲಿ ಭವ್ಯ ಸ್ವಾಗತ ನೀಡಲಾಗಿದೆ. ಕ್ಸಿಯಾನ್ ಅಂತರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಚೀನಾದ ಸಾಂಪ್ರದಾಯಿಕ ಡ್ರ್ಯಾಗನ್ ನೃತ್ಯದ ಮೂಲಕ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಬಳಿಕ ಚೀನಾ...

ಕೆ.ಸಿ.ತ್ಯಾಗಿ ಕ್ಷಮೆಯಾಚನೆಗೆ ರಾಮ್ ದೇವ್ ಆಗ್ರಹ

ಯೋಗಗುರು ಬಾಬಾ ರಾಮ್ ದೇವ್ ಅವರ ದಿವ್ಯ ಫಾರ್ಮಸಿ ಬಿಡುಗಡೆ ಮಾಡಿರುವ ಪುತ್ರಜೀವಕ್ ಬೀಜ್ ಮಾತ್ರೆಯ ವಿಚಾರ ರಾಜ್ಯಸಭೆಯಲ್ಲಿ ತೀವ್ರ ವಿರೋಧಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ರಾಮ್ ದೇವ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ವಿಷಯ ಪ್ರಸ್ತಾಪಿಸಿದ ಜೆಡಿಯು ಸಂಸದ ಕೆ.ಸಿ.ತ್ಯಾಗಿ ಕ್ಷಮೆಯಾಚಿಸಬೇಕೆಂದು...

ಭೂಕಂಪದಿಂದ ಅಸ್ತವ್ಯಸ್ಥ: ಭಾರತ-ನೇಪಾಳದ ಗಡಿಯಲ್ಲಿ ಉಗ್ರರು ನುಸುಳುವ ಸಾಧ್ಯತೆ

'ನೇಪಾಳ'ದಲ್ಲಿ ಸಂಭವಿಸಿದ ಭೀಕರ ಭೂಕಂಪದ ಪರಿಣಾಮವಾಗಿ ಉಂಟಾದ ಅವ್ಯವಸ್ಥೆಯಿಂದಾಗಿ ಭಾರತ-ನೇಪಾಳ ಗಡಿ ಪ್ರದೇಶದಲ್ಲಿ ಭಯೋತ್ಪಾದಕರು ನುಸುಳಲು ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಉತ್ತರ ಪ್ರದೇಶಕ್ಕೆ ಎಚ್ಚರಿಕೆ ರವಾನಿಸಿರುವ ಗುಪ್ತಚರ ಇಲಾಖೆ ಉಗ್ರರ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದೆ....

ವರ್ಷದ ಮೊದಲ ಖಗ್ರಾಸ ಚಂದ್ರ ಗ್ರಹಣ

ಈ ವರ್ಷದ ಮೊದಲ ಖಗ್ರಾಸ ಚಂದ್ರ ಗ್ರಹಣ ಶನಿವಾರ ಘಟಿಸಲಿದ್ದು, ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ಗೋಚರಿಸಲಿದೆ. ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಖಗ್ರಾಸ ಚಂದ್ರ ಗ್ರಹಣ ಕಾಣಿಸಲಿದ್ದರೆ, ದೇಶದ ಉಳಿದ ಭಾಗಗಳಲ್ಲಿ ಭಾಗಶಃ ಗ್ರಹಣ ಕಂಡುಬರಲಿದೆ. ಆಕಾಶಕಾಯಗಳಾದ ಸೂರ್ಯ ಹಾಗೂ ಚಂದ್ರನ...

ಬೂಸಾ ಬಜೆಟ್ ಪದ ಹೆಚ್.ಡಿ.ಕೆ ವಾಪಸ್ ಪಡೆಯಲಿ: ಸಿದ್ದರಾಮಯ್ಯ

ರಾಜ್ಯ ಸರ್ಕಾರದ ಬಜೆಟ್ ಬಗ್ಗೆ ಕೆಲವರು ರಾಜಕೀಯ ಭಾಷಣ ಮಾಡಿದ್ದಾರೆ, ಕೆಲವರು ಬೂಸಾ ಬಜೆಟ್ ಎಂದು ಹೇಳಿದ್ದಾರೆ. ಎಲ್ಲಾ ಟೀಕೆಗಳನ್ನು ಸಮಚಿತ್ತದಿಂದ ಸ್ವೀಕರಿಸುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕೆಗೆ ತಿರುಗೇಟು ನೀಡಿದ ಅವರು,...

ಐ.ಆರ್‌.ಎನ್‌.ಎಸ್‌.ಎಸ್‌-1ಡಿ ಉಪಗ್ರಹ ಯಶಸ್ವಿ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ದ ನಾಲ್ಕನೇ ದಿಕ್ಸೂಚಿ ಉಪಗ್ರಹ ಐ.ಆರ್‌.ಎನ್‌.ಎಸ್‌.ಎಸ್‌-1ಡಿ ಶನಿವಾರ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಉಪಗ್ರಹದಿಂದಾಗಿ ಅಮೆರಿಕಕ್ಕೆ ಸಮನಾದ ಜಿಪಿಎಸ್‌ ವ್ಯವಸ್ಥೆಯು ಭಾರತದಲ್ಲೂ ಬರಲಿದೆ. ಪಿ.ಎಸ್‌.ಎಲ್‌.ವಿ ಸಿ-27ವಾಹಕದ ಮೂಲಕ ಉಪಗ್ರಹ ಸಂಜೆ 5.19ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡ್ಡಯನ...

ಮೇಕೆದಾಟು ನೀರಾವರಿ ಯೋಜನೆ ಜಾರಿಗೆ ಹೆಚ್.ಡಿ.ಕೆ ಆಗ್ರಹ

ದೇಶದ ಒಕ್ಕೂಟ ವ್ಯವಸ್ಥೆಯಿಂದ ಹೊರಬಂದರೂ ಸರಿಯೇ, ತಮಿಳುನಾಡಿನ ವಿರೋಧವನ್ನು ಲೆಕ್ಕಿಸದೆ ತಕ್ಷಣವೇ 2000 ಕೋಟಿ ರೂ. ಸಾಲ ಮಾಡಿ ಮೇಕೆದಾಟು ನೀರಾವರಿ ಯೋಜನೆ ಜಾರಿಗೊಳಿಸುವ ಮೂಲಕ ಬಾಯಾರಿಕೆಯಿಂದ ತತ್ತರಿಸಿರುವ ಜನರಿಗೆ ನೀರು ಕೊಡಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ...

ರೈತರು ನಿಮ್ಮ ಸೊಕ್ಕನ್ನು ಮುರಿಯಲಿದ್ದಾರೆ: ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

'ಕೇಂದ್ರ ಸರ್ಕಾರ'ದ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್, ರೈತರು 56...

ಯೋಗೇಂದ್ರ ಯಾದವ್, ಭೂಷಣ್ ಉಚ್ಚಾಟನೆಗೆ ಆಪ್ ಶಾಸಕರ ಒತ್ತಾಯ

ಆಮ್ ಆದ್ಮಿ ಪಕ್ಷದ ಆಂತರಿಕ ಭಿನ್ನಮತ ಸದ್ಯಕ್ಕೆ ಇನ್ನಷ್ಟು ತೀವ್ರಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪ ಎದುರಿಸುತ್ತಿರುವ ಯೋಗೇಂದ್ರ ಯಾದವ್, ಶಾಂತಿ ಭೂಷಣ್ ಹಾಗೂ ಪ್ರಶಾಂತ್ ಭೂಷಣ್ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕು ಎಂದು ದೆಹಲಿ ಆಪ್ ಶಾಸಕರು ಆಗ್ರಹಿಸಿದ್ದಾರೆ. ಇದೀಗ ಪಕ್ಷದ ಸೋಲು...

ಯಾದವ್‌, ಭೂಷಣ್‌ಗೆ ಬೆಂಬಲವಾಗಿ ಆಪ್‌ ಆನ್‌ ಲೈನ್‌ ಸಹಿ ಸಂಗ್ರಹ ಅಭಿಯಾನ

ಆಮ್‌ ಆದ್ಮಿ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಪಕ್ಷದ ಹಿರಿಯ ಸ್ಥಾಪಕ ಸದಸ್ಯರಾದ ಪ್ರಶಾಂತ್‌ ಭೂಷಣ್‌ ಮತ್ತು ಯೋಗೇಂದ್ರ ಯಾದವ್‌ ಅವರನ್ನು ಹೊರ ಹಾಕುವುದನ್ನು ವಿರೋಧಿಸಿ ಇದೀಗ ಆನ್‌ ಲೈನ್‌ ಸಹಿ ಸಂಗ್ರಹ ಅಭಿಯಾನ ಭರದಿಂದ ಸಾಗುತ್ತಿದ್ದು ಕನಿಷ್ಠ 10,000 ಸಹಿ...

ಮತಾಂತರ ನಿಷೇಧ ಕಾಯ್ದೆ ಸಮಾಜದ ಶಾಂತಿಗೆ ಭಂಗ: ದೆಹಲಿಯ ಆರ್ಚ್ ಬಿಷಪ್ ಜಾರ್ಜ್ ಕಾರ್ಡಿನಲ್

ದೇಶಾದ್ಯಂತ ಚರ್ಚೆಗೆ ಗುರಿಯಾಗಿರುವ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಸಿರೊ ಮಲಬಾರ್ ಕ್ಯಾಥೊಲಿಕ್ ಚರ್ಚ್ ನ ಮುಖ್ಯಸ್ಥ ಜಾರ್ಜ್ ಕಾರ್ಡಿನಲ್ ಪ್ರತಿಕ್ರಿಯೆ ನೀಡಿದ್ದು, ಮತಾಂತರ ನಿಷೇಧ ಕಾಯ್ದೆ ವಿವಿಧ ಧರ್ಮಗಳ ನಡುವೆ ದ್ವೇಷ ಹರಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಧರ್ಮಗಳ ನಡುವೆ ದ್ವೇಷ...

ಫೆ.25ರಿಂದ ಬ್ಯಾಂಕ್‌ ಮಷ್ಕರ ಸಾಧ್ಯತೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್‌ ನೌಕರರು ಫೆ.25ರಿಂದ ನಾಲ್ಕು ದಿನ ಮುಷ್ಕರ ಹೂಡುವ ಸಾಧ್ಯತೆಯಿದೆ. ಬ್ಯಾಂಕ್‌ ಗಳ ಸಂಘಟನೆ ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ ಮುಂದಿಟ್ಟಿರುವ ಶೇ. 13 ವೇತನ ಏರಿಕೆ ಪ್ರಸ್ತಾಪ ನೌಕರರ ಯೂನಿಯನ್‌ ಗಳಿಗೆ ಸಮ್ಮತವಾಗಿಲ್ಲ. ಈ ಹಿನ್ನೆಲೆಯಲ್ಲಿ ಚೆನ್ನೈಯಲ್ಲಿ...

ಗೂಗಲ್ ನ ಸ್ಕೈ ಬಾಕ್ಸ್ ಇಮೇಜಿಂಗ್ ಉಪಗ್ರಹ ಉಡಾವಣೆ ಮಾಡಲಿರುವ ಇಸ್ರೋ

'ಗೂಗಲ್' ನ ಸ್ಕೈ ಬಾಕ್ಸ್ ಇಮೇಜಿಂಗ್ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧತೆ ನಡೆಸಿದೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ. ಏಷಿಯನ್ ಏಜ್ ನ ವರದಿಗಳ ಪ್ರಕಾರ, ಇದೇ ಪ್ರಥಮ ಬಾರಿಗೆ ಇಸ್ರೋ ಯು.ಎಸ್ ಉಪಗ್ರಹವೊಂದನ್ನು ಉಡಾವಣೆ...

ಹವಾಲ ಮೂಲಕ ದೇಣಿಗೆ ಸಂಗ್ರಹ :ಆಮ್ ಆದ್ಮಿ ಪಕ್ಷದ ವಿರುದ್ಧ ಗಂಭೀರ ಆರೋಪ

'ದೆಹಲಿ ವಿಧಾನಸಭಾ ಚುನಾವಣೆ'ಗೆ ಕೆಲವೇ ದಿನಗಳಿದ್ದು, ಆಮ್ ಆದ್ಮಿ ಪಕ್ಷದ ವಿರುದ್ಧ ಹೊಸ ಆರೋಪ ಕೇಳಿಬಂದಿದೆ. ಈ ಬಾರಿ ಆಮ್ ಆದ್ಮಿ ಪಕ್ಷದ ಸ್ವಯಂ ಸೇವಕ ಘಟಕದ ಸದಸ್ಯರೇ ಆಮ್ ಆದ್ಮಿ ಪಕ್ಷದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಹವಾಲ ಮೂಲಕ ದೇಣಿಗೆ...

ಜನಾರ್ದನ ರೆಡ್ಡಿ ಜೈಲಿನಿಂದ ಬಿಡುಗಡೆ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಜೈಲಿನಲ್ಲಿದ್ದ ಗಣಿ ಧಣಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಝುರಾದ ಹಿನ್ನಲೆಯಲ್ಲಿ ಜನಾರ್ದರ ರೆಡ್ಡಿ ಪರ ವಕೀಲ ಮುನಿರೆಡ್ಡಿ ಅವರು ಬೆಂಗಳೂರಿನ...

ಅಮೆರಿಕ ಎಚ್ಚರಿಕೆ ವರದಿಯಲ್ಲಿ ಹುರುಳಿಲ್ಲ: ಜಲಿಲ್ ಅಬ್ಬಾಸ್ ಜಿಲಾನಿ

ಒಬಾಮ ಆಗಮನದ ವೇಳೆ ಭಾರತದಲ್ಲಿ ಯಾವುದೇ ವಿಧ್ವಂಸಕ ಕೃತ್ಯಗಳನ್ನು ನಡೆಸದಂತೆ ಪಾಕ್‌ಗೆ ಅಮೆರಿಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಕುರಿತ ಭಾರತೀಯ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ವರದಿಯಲ್ಲಿ ಯಾವುದೇ ರೀತಿಯ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಜಲಿಲ್ ಅಬ್ಬಾಸ್ ಜಿಲಾನಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ...

ಉಗ್ರರ ನಿಗ್ರಹಕ್ಕೆ ಅಮೆರಿಕ ಬೆಂಬಲ: ಜಾನ್ ಕೆರ್ರಿ

ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು . ಭಾರತ ಪಾಕ್ ಸರ್ಕಾರಕ್ಕೆ ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಸಲಹೆ ನೀಡಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಕೆರ್ರಿ, ಇಸ್ಲಾಮಾಬಾದ್ ನಲ್ಲಿ ಮಾತನಾಡಿ, ಉಗ್ರರ ನಿಗ್ರಹದ ಹೊರತು ಪಾಕಿಸ್ತಾನದ ನೆರೆಹೊರೆಯ...

ಮೊದಲ ಬಾರಿಗೆ ಹೆಚ್ಚು ಕಾಲ ತೆರೆದ ಅಂಗಳದಲ್ಲಿ ಆಸೀನರಾಗಲಿರುವ ಒಬಾಮ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಸುಮಾರು 2 ತಾಸಿಗೂ ಹೆಚ್ಚು ಕಾಲ ರಾಜಪಥದ ತೆರೆದ ಅಂಗಳದಲ್ಲಿ ಆಸೀನರಾಗಲಿದ್ದಾರೆ. ಈ ಮೂಲಕ ತೆರೆದ ಅಂಗಳದಲ್ಲಿ ಇಷ್ಟೊಂದು ಹೆಚ್ಚು ಸಮಯ ಕುಳಿತುಕೊಳ್ಳುತ್ತಿರುವ ಮೊದಲ ಅಮೆರಿಕ ಅಧ್ಯಕ್ಷ ಎನ್ನಿಸಿಕೊಳ್ಳಲಿದ್ದಾರೆ. ಉಗ್ರರ ದಾಳಿಯ...

ಭಾರತದಲ್ಲಿರುವಾಗ ಬರಾಕ್‌ ಒಬಾಮಾ ಭದ್ರತೆಗೆ ಉಪಗ್ರಹ ನಿಯೋಜನೆ

ಜ.26ರ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭದ್ರತೆಗೆ ಸರ್ವೇಕ್ಷಣಾ ಉಪಗ್ರಹವೊಂದನ್ನು ನಿಯೋಜನೆ ಮಾಡಲು ಅಮೆರಿಕ ಸರ್ಕಾರ ಮುಂದಾಗಿದೆ. ಅಮೆರಿಕ ಅಧ್ಯಕ್ಷರೊಬ್ಬರು ಭಾರತದ ಗಣರಾಜ್ಯೋತ್ಸವ ದಿನದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು. ಅದೂ ಅಲ್ಲದೆ ಒಬಾಮಾ ಅವರು...

ಜಾತಿ ಗಣತಿ: ಏಪ್ರಿಲ್ 11ರಿಂದ ಮನೆ ಮನೆ ಸಮೀಕ್ಷೆ ಪ್ರಾರಂಭ

ರಾಜ್ಯದ ಜನತೆಯ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತಂತೆ ಏಪ್ರಿಲ್ 11 ರಿಂದ ಮನೆ ಮನೆ ಸಮೀಕ್ಷೆ ಪ್ರಾರಂಭವಾಗುವುದರೊಂದಿಗೆ ಜಾತಿ ಗಣತಿಗೆ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಮೀಕ್ಷೆ...

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸಂಕವನ್ನು ಮತ್ತೆ ಹೆಚ್ಚಳ ಮಾಡಿದೆ. ಆದರೆ ಅಬಕಾರಿ ಸುಂಕ ಹೆಚ್ಚಳ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ಸಂತಸದ ವಿಷಯ. ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು...

ಇಸ್ರೋ ಅಧ್ಯಕ್ಷ ಕೆ.ರಾಧಾಕೃಷ್ಣನ್‌ ನಿವೃತ್ತಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾಗಿ ಹಲವು ಸಾಧನೆಗಳ ಮೂಲಕ ವಿಶ್ವಮಟ್ಟದಲ್ಲಿ ಇಸ್ರೋ ಕೀರ್ತಿ ಪತಾಕೆಗಳನ್ನು ಹಾರಿಸಿದ್ದ ಕೆ.ರಾಧಾಕೃಷ್ಣನ್‌ ನಿವೃತ್ತಿ ಹೊಂದಿದ್ದಾರೆ. ಅವರು ಮಂಗಳ ಗ್ರಹ ಶೋಧಕ ಉಪ್ರಗ್ರಹ ಸೇರಿದಂತೆ ಹಲವು ಸ್ವದೇಶಿ ಉಪಗ್ರಹಗಳ ಉಡಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನು...

ಉಗ್ರ ಲಖ್ವಿಯನ್ನು ಮತ್ತೆ ಬಂಧಿಸಿದ ಪಾಕ್ ಸರ್ಕಾರ

'ಮುಂಬೈ ದಾಳಿ'ಯ ಉಗ್ರ ಝಕೀಉರ್ ರೆಹಮಾನ್ ಲಖ್ವಿಯನ್ನು ಪಾಕಿಸ್ತಾನ ಮತ್ತೆ ಬಂಧಿಸಿದೆ. ಝಕೀಉರ್ ರೆಹಮಾನ್ ಲಖ್ವಿಯ ಬಂಧನವನ್ನು ಆತನ ಪರ ವಕೀಲರು ಖಚಿತಪಡಿಸಿದ್ದು, ಪಾಕ್ ಸರ್ಕಾರ ಮತ್ತೆ ಆತನನ್ನು ಬಂಧಿಸಿದೆ ಎಂದು ಹೇಳಿದ್ದಾರೆ. ಲಖ್ವಿ ಬಂಧನವನ್ನು ಪ್ರಶ್ನಿಸಿ ಮತ್ತೊಮ್ಮೆ ಕೋರ್ಟ್...

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಖಚಿತ

ನೂತನ ವರ್ಷಾರಂಭದಿಲ್ಲಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಭಾರೀ ಕೆಲಸ ಮಾಡಲಿದೆ ಎಂಬುದು ಅಭಿಮತ ಸಮೀಕ್ಷೆಯ ಅಭಿಪ್ರಾಯ. ಸಮೀಕ್ಷೆಯ ಪ್ರಕಾರ 70 ಸ್ಥಾನ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಗಲು ಅವಶ್ಯವಿರುವ 45 ಸ್ಥಾನಗಳು...

ವ್ಯಾಟ್ ಸುಧಾರಣೆಯ ಭರವಸೆ ನೀಡಿದ ಅರವಿಂದ್ ಕೇಜ್ರಿವಾಲ್

ಫೆಬ್ರವರಿಯಲ್ಲಿ ನಡೆಯಬಹುದಾದ ದೆಹಲಿ ವಿಧಾನಸಭಾ ಚುನಾವಣೆಗೂ ಮೊದಲು ಪಕ್ಷದ ವ್ಯಾಪಾರಿಗಳ ವಿಭಾಗ ಆಯೋಜಿಸಿದ್ದ ಪಕ್ಷದ ನಿಧಿ ಸಂಗ್ರಹ ಔತಣಕೂಟದಲ್ಲಿ ಎಎಪಿ ಪಕ್ಷ 50 ಲಕ್ಷ ರೂ ಸಂಗ್ರಹಿಸಿದೆ. ಬೇರೆ ರಾಜ್ಯಗಳಿಗಿಂತ ಮೌಲ್ಯಾಧಾರಿತ ತೆರಿಗೆ ಹೆಚ್ಚಿರುವ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಸಿ ವ್ಯಾಟ್ ಮೇಲೆ...

ತೆರಿಗೆ ವಿನಾಯಿತಿ ಮಿತಿ ಹೆಚ್ಚಳದ ಸುಳಿವು ನೀಡಿದ ಜೇಟ್ಲಿ

ಸಂಬಳದಾರರಿಗೆ ಮತ್ತು ಮಧ್ಯಮ ವರ್ಗಕ್ಕೆ ಹೆಚ್ಚಿನ ತೆರಿಗೆ ಹೆಚ್ಚಿಸಿ, ಹೆಚ್ಚಿನ ಹೊರೆಯಾಗಿಸುವುದು ನಮಗೆ ಇಷ್ಟವಿಲ್ಲ, ಬದಲಾಗಿ ತೆರಿಗೆ ವಂಚಿಸುವವರ ಮೇಲೆ ಹೆಚ್ಚಿನ ಹೊರೆಯಾಗುವಂತೆ ಮಾಡಲಿದ್ದೇವೆ. ಇದರಿಂದ ತೆರಿಗೆ ಕಟ್ಟುವವರ ಜೇಬಿನಲ್ಲಿ ಹೆಚ್ಚು ಹಣ ಉಳಿಯುವಂತೆ ಮಾಡಿ, ಅವರು ಅದನ್ನು ವ್ಯಯಿಸಿದಾಗ ಪರೋಕ್ಷ...

ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ: ಶೋಭಾ ಕರಂದ್ಲಾಜೆ ಪೊಲೀಸರ ವಶಕ್ಕೆ

ಭ್ರಷ್ಟ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ಬಿಜೆಪಿ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಪೊಲಿಸರು ಬಂಧಿಸಿದ್ದಾರೆ. ಸಂಪುಟದಲ್ಲಿರುವ ನಾಲ್ವರು ಸಚಿವರ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದಿದ್ದು, ಈ ನಾಲ್ವರು ಸಚಿವರನ್ನು ಸಂಪುಟದಿಂದ...

ನೈಸ್ ಅಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಭಾಗಿ: ದೇವೇಗೌಡ

ನೈಸ್ ಕಂಪನಿ ಅಕ್ರಮದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್, ನೈಸ್ ಕಂಪನಿಯ ಬಿಎಂಐಸಿ ಯೋಜನೆಗೆ ಭೂಮಿ ಮಂಜೂರು ಸಮಿತಿ ಅಧ್ಯಕ್ಷರಾಗಿದ್ದರು. ಈ ವೇಳೆ ರೈತರ ಭೂಮಿಯನ್ನು...

14,400 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಗುರಿ: ಜಾರಕಿಹೊಳಿ

ಪ್ರಸಕ್ತ ಆರ್ಥಿಕ ವರ್ಷದಲ್ಲಿ 14,400 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ನಿರೀಕ್ಷಿತ ಗುರಿ ತಲುಪಲಾಗುವುದು ಎಂದು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಳೆದ ವರ್ಷ 12,600 ಕೋಟಿ ರೂ. ಅಬಕಾರಿ ತೆರಿಗೆ...

ಜೈಲಿನಿಂದ ಬಿಡುಗಡೆಗೊಂಡ ಜಯಲಲಿತಾ

ಕಳೆದ 21 ದಿನಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನಲೆಯಲ್ಲಿ ಬಿಡುಗಡೆಗೊಂಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಮಧ್ಯಾಹ್ನ 3:15ರ ವೇಳೆ ಜಯಲಲಿತಾ ಹಾಗೂ ಅವರ ದತ್ತು ಪುತ್ರ ಸುಧಾಕರನ್,...

ಜಯಲಲಿತಾ ಬಿಡುಗಡೆ ಹಿನ್ನಲೆ: ಜೈಲಿನ ಸುತ್ತ ನಿಷೇಧಾಜ್ನೆ ಜಾರಿ

ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ 21ದಿಗಳಿಂದ ಜೈಲುವಾಸ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಿಡುಗಡೆ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ನಿಂದ ಜಾಮೀನು ದೊರೆತ ಹಿನ್ನಲೆಯಲ್ಲಿ ಅ.18ರಂದು ಜಯಲಲಿತಾ ಪರಪ್ಪನ ಅಗ್ರಹಾರ ಜೈಲಿನಿಂದ...

ಜಯಲಲಿತಾಗೆ ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ಜಾಮೀನು ಮಂಜೂರು

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾಗೆ ಸುಪ್ರೀಂ ಕೋರ್ಟ್ ಅ.17ರಂದು ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜೈಲು ಶಿಕ್ಷೆ ಅಮಾನತು ಹಾಗೂ ಜಾಮೀನು ನೀಡಬೇಕೆಂದು...

ಇಸ್ರೋ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ಉಡಾವಣೆ ಯಶಸ್ವಿ

'ಐ.ಆರ್‌.ಎನ್‌.ಎಸ್‌.ಎಸ್‌ -1ಸಿ' ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಇಸ್ರೋ, ಅ.16ರಂದು ಯಶಸ್ವಿ ಉಡಾವಣೆ ಮಾಡಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿ.ಎಸ್‌.ಎಲ್‌.ವಿ.ಸಿ -26 ವಾಹಕದ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಈ ಮೂಲಕ ಭಾರತ ತನ್ನ 3ನೇ ನ್ಯಾವಿಗೇಶನ್ ಸ್ಯಾಟಲೈಟ್ ನ್ನು...

ಎರಡು ತಿಂಗಳಲ್ಲಿ ನಗರದ ಆಸ್ತಿಗಳ ಮರು ಸರ್ವೇಕ್ಷಣಾ ಕಾರ್ಯ ಆರಂಭ

ಮುಂದಿನ ಎರಡು ತಿಂಗಳಲ್ಲಿ ಬೆಂಗಳೂರು ನಗರದ ಎಲ್ಲಾ ಆಸ್ತಿಗಳ ಮರು ಸರ್ವೇಕ್ಷಣಾ ಕಾರ್ಯ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಿಬಿಎಂಪಿ ಕಾರ್ಯಚಟುವಟಿಕೆಗಳ ಪ್ರಗತಿ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನಗರದಲ್ಲಿ ಪ್ರಸ್ತುತ 16 ಲಕ್ಷ ಆಸ್ತಿಗಳನ್ನು ಗುರುತಿಸಲಾಗಿದೆ. ಆದರೆ, ಎರಡು...

ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ: ಪೊಲೀಸ್ ಬಿಗಿ ಬಂದೋಬಸ್ತ್

ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಸೇರಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಾಮೀನು ಅರ್ಜಿ ವಿಚಾರಣೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೈಕೋರ್ಟ್ ಹಾಗೂ ಪರಪ್ಪನ ಅಗ್ರಹಾರ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೈಕೋರ್ಟ್ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಇಂದು ರಾತ್ರಿವರೆಗೂ...

ತಮಿಳುನಾಡಿನಲ್ಲಿ ಕನ್ನಡಿಗರಿಗೆ ಎಐಡಿಎಂಕೆ ಕಾರ್ಯಕರ್ತರಿಂದ ಬೆದರಿಕೆ

ವ್ಯಕ್ತಿಪೂಜೆಯ ಪರಾಕಾಷ್ಠೆ ತಲುಪುತ್ತಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅಭಿಮಾನಿಗಳು ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರ ಮೇಲೆ ತಮ್ಮ ಹತಾಶೆಯನ್ನು ತೋರಲು ಮುಂದಾಗಿದ್ದಾರೆ. ತಮ್ಮ ಕುರುಡು ಅಭಿಮಾನದ ಪ್ರದರ್ಶನಕ್ಕೆ ನ್ಯಾಯಾಲಯದ ಆದೇಶಕ್ಕೂ ಬೆಲೆ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಸಧ್ಯಕ್ಕೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸಿಯಾಗಿರುವ...

ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಮೂಲಕ ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನ ಆರಂಭವಾಗಿದೆ. ನವದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ ಪೊರಕೆ ಹಿಡಿದ ಪ್ರಧಾನಿ ಮೋದಿ ರಸ್ತೆಯಲ್ಲಿ ಕಸ ಗುಡಿಸುವ ಮೂಲಕ ಕ್ಲೀನ್ ಇಂಡಿಯಾ...

ಜಯಲಲಿತಾ ಬಿಡುಗಡೆಗೆ ಆಗ್ರಹ: ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ಸತ್ಯಾಗ್ರಹ

ಜಯಲಲಿತಾ ಬಿಡುಗಡೆಗೆ ಆಗ್ರಹಿಸಿ ತಮಿಳುನಾಡು ನಿಯೋಜಿತ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ಎಐಎಡಿಎಂಕೆ ನಾಯಕರು ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣ ಹಿನ್ನಲೆಯಲ್ಲಿ ಜಯಲಲಿತಾ ಕಳೆದ ಮೂರು ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹರ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದು,...

ಜಯಲಲಿತಾ ಪ್ರಕರಣದ ತೀರ್ಪು ಹಿನ್ನಲೆ: ಬಿಗಿ ಪೊಲೀಸ್ ಬಂದೋಬಸ್ತ್

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಪ್ರಕಟವಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪರಪ್ಪನ ಅಗ್ರಹಾರದ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಾನ್ ಮೈಕಲ್ ಕುನ್ಹಾ...

ನಿಗಮ ಮಂಡಳಿ ನೇಮಕಾತಿ ವಿಚಾರ: ಕಾರ್ಯಕಾರಿ ಸಭೆ ಆರಂಭ

ನಿಗಮ ಮಂಡಳಿ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ರಾಜ್ಯ ಕಾಂಗ್ರೆಸ್ ಕಾರ್ಯಕಾರಿ ಸಭೆ ಆರಂಭವಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಭೆ ಆರಂಭವಾಗಿದ್ದು, ಹಲವು ಸಚಿವರು, ಕಾಂಗ್ರೆಸ್ ನ ಪದಾಧಿಕಾರಿಗಳು, ಕೆಪಿಸಿಸಿ ಕಾರ್ಯಕಾರಿ...

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವೆಂದು ಘೋಷಿಸಿ: ಕತ್ತಿ ಆಗ್ರಹ

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಿಸಬೇಕು ಎಂದು ಶಾಸಕ ಉಮೇಶ್ ಕತ್ತಿ ಮತ್ತೊಮ್ಮೆ ರಾಜ್ಯ ವಿಭಜನೆಯ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಪ್ರತ್ಯೇಕ ರಾಜ್ಯದ ಮಾತುಗಳನ್ನಾಡಿ ತೀವ್ರ ವಿವಾದಕ್ಕೆ ಕಾರಣರಾಗಿದ್ದ ಉಮೇಶ್ ಕತ್ತಿ ಮತ್ತದೇ ಹಳೆರಾಗ ಹಾಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಉತ್ತರ...

ಮಮತಾ ಬ್ಯಾನರ್ಜಿ ಬಂಟರು ಶೀಘ್ರದಲ್ಲಿ ಜೈಲಿಗೆ ಹೋಗುತ್ತಾರೆ: ಅಮಿತ್ ಶಾ

ಶಾರದಾ ಚಿಟ್ ಫಂಡ್ ಹಗರಣದಲ್ಲಿ ಭಾಗಿಯಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಟರು ಶೀಘ್ರದಲ್ಲಿಯೇ ಜೈಲು ಪಾಲಾಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾರದಾ...

ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿ ಅವರನ್ನು ದೂಷಿಸುವುದು ತಪ್ಪು-ಆಸ್ಟ್ರೇಲಿಯಾ ಪ್ರಧಾನಿ

'ಗುಜರಾತ್ ಗಲಭೆ'ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸಬಾರದು ಎಂದು ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್ ಹೇಳಿದ್ದಾರೆ. ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ, ಕೊನೆಯಿಲ್ಲದ ವಿಚಾರಣೆ ಎದುರಿಸಿದ್ದಾರೆ. ಗಲಭೆ ಸಂಬಂಧ ನಡೆದಿರುವ ವಿಚಾರಣೆಯಲ್ಲಿ ಮೋದಿ ನಿರಪರಾಧಿಯೆಂದು...

ದೆಹಲಿಯಲ್ಲಿ ಮರು ಚುನಾವಣೆಗೆ ಆಮ್ ಆದ್ಮಿ ಪಟ್ಟು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರ ರಚನೆಯ ಯತ್ನಕ್ಕೆ ಚಾಲನೆ ದೊರೆತಿದೆ. ಬಿಜೆಪಿಗೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡುವ ಸಾಧ್ಯತೆಯಿದೆ. ಆದರೆ ಆಮ್ ಆದ್ಮಿ ಪಕ್ಷ ಮರು ಚುನಾವಣೆಗೆ ಪಟ್ಟು ಹಿಡಿದಿದೆ. ರಾಜಧಾನಿಯಲ್ಲಿ ಮರು ಚುನಾವಣೆ ಅಗತ್ಯವಿದೆ. ಮೈತ್ರಿ ಸರ್ಕಾರದಿಂದ ಭ್ರಷ್ಟಾಚಾರ...

ಪ್ರಧಾನಿ ಮೋದಿ ಅವರನ್ನು ಮುಸ್ಲಿಂ ವಿರೋಧಿಯಾಗಿ ಬಿಂಬಿಸಲು ಅಲ್ ಖೈದಾ ಯತ್ನ- ಅಮೆರಿಕ

'ಭಾರತ'ದಲ್ಲಿ ಶಾಖೆ ಆರಂಭಿಸುವುದಾಗಿ ಘೋಷಿಸಿರುವ ಅಲ್ ಖೈದಾ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಿದೆ ಎಂದು ಅಮೆರಿಕ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಲ್ ಖೈದಾ ಸಂಘಟನೆ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಅಮೆರಿಕಾ...

ಕೇರಳದ ರಾಜ್ಯಪಾಲರಾಗಿ ಸದಾಶಿವಂ ಅಧಿಕಾರಸ್ವೀಕಾರ

ಕೇರಳದ 23ನೇ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ.ಸದಾಶಿವಂ ಪದಗ್ರಹಣ ಮಾಡಿದ್ದಾರೆ. ಶೀಲಾ ದೀಕ್ಷಿತ್ ರಿಂದ ತೆರವಾದ ರಾಜ್ಯಪಾಲರ ಸ್ಥಾನಕ್ಕೆ ಸದಾಶಿವಂ ನೇಮಕಗೊಂಡಿದ್ದು, ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಶೋಕ್ ಭೂಷಣ್ ಪ್ರಮಾಣ ವಚನ...

ಕೇರಳ ರಾಜ್ಯಪಾಲರಾಗಿ ನ್ಯಾ.ಸದಾಶಿವಂ ನೇಮಕ

ತೀವ್ರ ವಿರೋಧದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾ.ಪಿ.ಸದಾಶಿವಂ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಕ ಮಾಡಿದೆ. ಪಿ.ಸದಾಶಿವಂ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಕಳುಹಿಸಿದ್ದ ಶಿಫಾರಸಿಗೆ ರಾಷ್ಟ್ರಪತಿ ಪ್ರಣಬ್...

ರಾಜ್ಯದ ರಾಜ್ಯಪಾಲರಾಗಿ ಸಂಜೆ ವಾಜುಭಾಯಿ ಪದಗ್ರಹಣ

ರಾಜ್ಯದ ನೂತನ ರಾಜ್ಯಪಾಲರಾಗಿ ವಾಜುಭಾಯಿ ರೂಡಭಾಯಿ ವಾಲಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ವಾಜುಭಾಯಿ ವಾಲಾ ಈಗಾಗಲೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವಾಜುಬಾಯಿ ವಾಲಾರನ್ನು ಗೃಹ ಸಚಿವ ಕೆ.ಜೆ.ಜಾರ್ಜ್ ಬರಮಾಡಿಕೊಂಡಿದ್ದಾರೆ. ಸಂಜೆ 5ಗಂಟೆಗೆ ರಾಜಭವನದಲ್ಲಿ ನಡೆಯುವ ಸರಳ...

ಪಾಕ್ ನಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಪಾಕಿಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಗೊಂಡಿದೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷ ನಾಯಕ ಇಮ್ರಾನ್ ಖಾನ್ ಹಾಗೂ ತಾಹಿರ್ ಉಲ್ ಖಾದ್ರಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ನವಾಜ್ ಷರೀಫ್ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ...

ಜಿಹಾದಿ ಸಂಘಟನೆ ಐ.ಎಸ್.ಐ.ಎಸ್ ಸೇರಿದ್ದ ಮುಂಬೈ ಮೂಲದ ಯುವಕ ಸಾವನ್ನಪ್ಪಿರುವ ಶಂಕೆ

'ಇರಾಕ್‌'ನಲ್ಲಿನ ಸುನ್ನಿ ಜಿಹಾದಿ ಉಗ್ರರ ಸಂಘಟನೆಯಾದ ಐ.ಎಸ್‌.ಐ.ಎಸ್‌ (ಐಸಿಸ್‌) ಸೇರಿಕೊಂಡಿದ್ದಾರೆಂದು ಹೇಳಲಾಗಿದ್ದ ಮುಂಬೈ ನ ನಾಲ್ವರು ಮುಸ್ಲಿಂ ಯುವಕರ ಪೈಕಿ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ ಇರಾಕ್ ನ ಉಗ್ರ ಸಂಘಟನೆಯಿಂದ ಆರಿಫ್ ಮಜೀದ್‌ ಕುಟುಂಬದವರಿಗೆ...

ಗಡಿಯಲ್ಲಿ ತೀವ್ರಗೊಂಡ ಪಾಕ್ ದಾಳಿ: ಪಾಕ್ ವಿರುದ್ಧ ಯುದ್ಧಕ್ಕೆ ಶಿವಸೇನೆ ಆಗ್ರಹ

ಜಮ್ಮು-ಕಾಶೀರದ ಗಡಿಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಗುಂಡಿನ ದಾಳಿಯಲ್ಲಿ ತೊಡಗಿರುವ ಪಾಕ್ ಸೇನೆ, ತನ್ನ ಕೃತ್ಯ ಮುಂದುವರೆಸುವ ಮೂಲಕ ಭಾರತವನ್ನು ಇನ್ನಷ್ಟು ಕೆಣಕುವ ಯತ್ನ ನಡೆಸಿದೆ. ಕಳೆದ 15ದಿನಗಳಲ್ಲಿ ಪಾಕಿಸ್ತಾನ 21ಬಾರಿ ಕದನ ವಿರಾಮ ಉಲ್ಲಂಘನೆಮಾಡಿದೆ. ಆಗಸ್ಟ್ ತಿಂಗಳೊಂದರಲ್ಲೇ 23ಬಾರಿ, ಜು.16ರಿಂದ...

2017ಕ್ಕೆ ಚಂದ್ರಯಾನ-2 ಆರಂಭಿಸಲಿರುವ ಭಾರತ

'ಚಂದ್ರಯಾನ-1'ರ ಯಶಸ್ಸಿನಿಂದಾಗಿ ಸ್ಪೂರ್ತಿಪಡೆದಿರುವ ಇಸ್ರೋ ಚಂದ್ರಯಾನ-2ಕ್ಕಾಗಿ ಉಪಗ್ರಹ ಉಡಾವಣೆಗೆ ಮಂದಾಗಿದೆ. 2017ರ ವೇಳೆಗೆ ಮಿಷನ್ ಚಂದ್ರಯಾನ-2ಕ್ಕೆ ಜಿ.ಎಸ್‍.ಎಲ್‍.ವಿ ಉಪಗ್ರಹ ಉಡಾವಣೆ ಮಾಡಲಾಗುವುದು ಎಂದು ಚಂದ್ರಯಾನ-1, ಚಂದ್ರಯಾನ-2 ಯೋಜನೆಯ ನಿರ್ದೇಶಕ ಎಂ ಅಣ್ಣಾದೊರೈ ತಿಳಿಸಿದ್ದಾರೆ. ಚಂದ್ರನಲ್ಲಿಗೆ ದೇಶದ ಉಡಾವಣೆ ಮಾಡಿದ ಮೊದಲ ಉಪಗ್ರಹ...

ಮತಗಟ್ಟೆ ಸ್ಥಾಪನೆಗೆ ಆಗ್ರಹ: ಮತದಾನ ಬಹಿಷ್ಕಾರ

ಮತಗಟ್ಟೆ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಮಾಳಗೊಂಡಕೊಪ್ಪದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ. ಬಳ್ಳಾರಿ ಗ್ರಾಮೀಣ, ಚಿಕ್ಕೋಡಿ-ಸದಲಗಾ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಮತದಾನ ಆರಂಭವಾಗಿದೆ. ಆದರೆ ಶಿಕಾರಿಪುರ ಕ್ಷೇತ್ರದ ಮಾಳಗೊಂಡಕೊಪ್ಪದ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ...

ಕೆಪಿಎಸ್ ಸಿ ನೇಮಕಾತಿ ರದ್ದು ವಿವಾದ: ಅಭ್ಯರ್ಥಿಗಳಿಂದ ಕೋರ್ಟ್ ಗೆ ಅರ್ಜಿ

2011ನೇ ಸಾಲಿನ ಕೆಪಿಎಸ್ ಸಿ ನೇಮಕಾತಿ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆ.ಎ.ಟಿ)ಗೆ ಅರ್ಜಿ ಸಲ್ಲಿಸಿದ್ದಾರೆ. ಕೆಪಿಎಸ್ ಸಿ ನೇಮಕಾತಿ ರದ್ದುಗೊಳಿಸಿ ಆದೇಶಹೊರಡಿಸಿರುವ ರಾಜ್ಯ ಸಚಿವ ಸಂಪುಟ ಸಭೆಯ ಕ್ರಮ ಖಂಡಿಸಿ, ಅಭ್ಯರ್ಥಿಗಳು 32ದಿನಗಳಿಂದ...

ಹೇಮಾವತಿ ನಾಲೆ ಒಡೆಯುತ್ತಿರುವ ಕುರಿತು ಸಿಓಡಿ ತನಿಖೆಗೆ ಬಿಜೆಪಿ ಆಗ್ರಹ

ಹೇಮಾವತಿ ನಾಲೆ ಪದೇ ಪದೇ ಒಡೆಯಲು ಕಾರಣವಾಗಿರುವವರ ವಿರುದ್ಧ ಸಿಓಡಿ ತನಿಖೆಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿದೆ. 2012-13, 2013-14 ಮತ್ತು 2014-15ರಲ್ಲಿ ಸತತವಾಗಿ ಕಳೆದ ಮೂರು ವರ್ಷಗಳಿಂದ ತುಮಕೂರಿಗೆ ನೀರು ಹರಿಸುವ ಹೇಮಾವತಿ ನಾಲೆಯು 72ಕಿ.ಮೀ ವ್ಯಾಪ್ತಿಯೊಳಗೆ ನಾಲೆ ಒಡೆದು ಹೋಗುತ್ತಿದ್ದು, ಪ್ರತಿ...

ಕೆಪಿಎಸ್ ಸಿ ನೇಮಕಾತಿ ರದ್ದು: ಸಿದ್ದರಾಮಯ್ಯಗೆ ಹೆಚ್.ಡಿ.ಕೆ 12 ಪ್ರಶ್ನೆ

2011ರ ಕೆಪಿಎಸ್ ಸಿ ನೇಮಕಾತಿ ರದ್ದು ಆದೇಶವವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಇನ್ನೂ ಮುಂದುವರೆದಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ 12 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಫ್ರೀಡಂಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ...

ಕೆಪಿಎಸ್ ಸಿ ನೇಮಕಾತಿ ರದ್ದು ವಿಚಾರದಲ್ಲಿ ಅಕ್ರಮವೆಸಗಿಲ್ಲ: ಸಿದ್ದರಾಮಯ್ಯ

2011ರ ಕೆಪಿಎಸ್ ಸಿ ನೇಮಕಾತಿ ರದ್ದು ವಿಚಾರದಲ್ಲಿ ಸರ್ಕಾರ ಅಕ್ರಮವೆಸಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆರೋಪಕ್ಕೆ ಸಿದ್ದರಾಮಯ್ಯ ಉತ್ತರಿಸಿದರು. ಈಗಾಗಲೇ 28 ದಿನಗಳ ಕಾಲ ಅಧಿವೇಶನ ನಡೆಸಲಾಗಿದೆ. ಹೀಗಾಗಿ ಮತ್ತೆ ವಿಶೇಷ ಅಧಿವೇಶನ...

ಕೆಪಿಎಸ್ ಸಿ ನೇಮಕಾತಿ ರದ್ದು: ಹೆಚ್.ಡಿ.ಕೆ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ

2011ರ ಕೆಪಿಎಸ್ ಸಿ ನೇಮಕಾತಿ ರದ್ದು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಗಳ ಪರ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. 2011ರಲ್ಲಿ ಆಯ್ಕೆಯಾದ 362 ಗೆಜೆಟೆಡ್ ಪ್ರೊಬೇಷನರಿ (ಕೆಪಿಎಸ್ ಸಿ) ಅಭ್ಯರ್ಥಿಗಳ ನೇಮಕಾತಿಯನ್ನು ರದ್ದುಗೊಳಿಸಿ,...

ಕೆಪಿಎಸ್ ಸಿ ನೇಮಕಾತಿ ರದ್ದು: ಹೆಚ್.ಡಿ.ಕೆ ಉಪವಾಸ ಸತ್ಯಾಗ್ರಹ ಆರಂಭ

2011ರ ಕೆಪಿಎಸ್ ಸಿ ನೇಮಕಾತಿ ರದ್ದು ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಮಾಜಿಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಭ್ಯರ್ಥಿಗಳ ಪರ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಕುಮಾರಸ್ವಾಮಿ, ರಾಜ್ಯ ಸರ್ಕಾರ ಕೆಪಿಎಸ್ ಸಿ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited