Untitled Document
Sign Up | Login    
Dynamic website and Portals
  
July 5, 2015

5 ಉಪಗ್ರಹಗಳನ್ನು ಉಡಾವಣೆ ಮಾಡಲಿರುವ ಇಸ್ರೋ

ಬೆಂಗಳೂರು : ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋಪಿಎಸ್​ಎಲ್​ವಿ ಸಿ-28 ಉಡಾವಣಾ ವಾಹನವು ಇದೇ ಮೊದಲ ಬಾರಿಗೆ ಅತೀ ಹೆಚ್ಚು ಭಾರದ ಉಪಗ್ರಹಗಳನ್ನು ಜುಲೈ 10 ರಂದು ವಾಣಿಜ್ಯ ಉಡಾವಣೆ ಮಾಡಲಿದೆ.

ಒಟ್ಟು 1,440 ಕೆ.ಜಿ. ಭಾರದ 5 ಉಪಗ್ರಹಗಳನ್ನು ಶ್ರೀಹರಿಕೋಟಾದಿಂದ ಜುಲೈ 10 ರಂದು ಉಡಾವಣೆ ಮಾಡಿ ಮತ್ತೊಂದು ಮೈಲಿಗಲ್ಲು ಸಾಧಿಸಲು ಇಸ್ರೋ ಸಿದ್ದತೆ ನಡೆಸಿದೆ. ಇದೊಂದು ವಾಣಿಜ್ಯ ಉಡಾವಣೆಯಾಗಿದೆ. ಇಸ್ರೋ ಮತ್ತು ಅದರ ವಾಣಿಜ್ಯ ಸಹಯೋಗಿ ಸಂಸ್ಥೆಯಾದ ಆಂಟ್ರಿಕ್ಸ್ ಜಂಟಿಯಾಗಿ ಉಡಾವಣೆ ಕಾರ್ಯ ನಿರ್ವಹಿಸಲಿವೆ.

ಬ್ರಿಟನ್​ನ ಸರ್ರೆ ಉಪಗ್ರಹ ತಂತ್ರಜ್ಞಾನ ಲಿಮಿಟೆಡ್ (ಎಸ್​ಎಸ್​ಟಿಎಲ್) ಅಭಿವೃದ್ಧಿ ಪಡಿಸಿರುವ ಪ್ರತಿಯೊಂದು ಉಪಗ್ರಹವೂ 447 ಕೆ.ಜಿ. ಭಾರವಿರುವ 3 ಡಿಎಂಸಿ3 ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ. ಈ ಉಪಗ್ರಹಗಳನ್ನು 647 ಕಿ.ಮೀ. ಎತ್ತರದ ಕಕ್ಷೆಗೆ ಉಡಾಯಿಸಲಾಗುವುದು. ಉಳಿದಂತೆ ಯುಕೆ-ಸಿಬಿಎನ್​ಟಿ-1 ಎಂಬ 2 ಸಣ್ಣ ಉಪಗ್ರಹಗಳನ್ನೂ ಉಡಾವಣೆ ಮಾಡಲಾಗುತ್ತಿದೆ.

ವಿದೇಶಿ ಉಪಗ್ರಹಗಳಿಗೆ ಭಾರತ ಒಂದು ದಕ್ಷ ವಾಣಿಜ್ಯ ಉಡಾವಣಾ ತಾಣವಾಗಿದೆ. ಈ ಉಡಾವಣೆ ಅತೀ ಹೆಚ್ಚು ಭಾರದ ಉಪಗ್ರಹ ಉಡಾವಣೆಯಾಗಿದೆ. ಪಿಎಸ್​ಎಲ್​ವಿ ಸಿ-28 ರ ಯಶಸ್ವಿ ಉಡಾವಣವು ಇಸ್ರೋದ ವಾಣಿಜ್ಯ ಉಡಾವಣೆಗೆ ದೊಡ್ಡ ಉತ್ತೇಜನ ನೀಡಲಿದೆ ಎಂದು ಇಸ್ರೋದ ವಕ್ತಾರ ದೇವಿಪ್ರಸಾದ್ ಕಾರ್ಣಿಕ್ ಹೇಳಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist