ನವದೆಹಲಿ : 'ಭಾರತ'ದಲ್ಲಿ ಶಾಖೆ ಆರಂಭಿಸುವುದಾಗಿ ಘೋಷಿಸಿರುವ ಅಲ್ ಖೈದಾ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಯತ್ನಿಸುತ್ತಿದೆ ಎಂದು ಅಮೆರಿಕ ವಿಶ್ಲೇಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಅಲ್ ಖೈದಾ ಸಂಘಟನೆ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಅಮೆರಿಕಾ ಸಲಹೆ ನೀಡಿದೆ. ಭಾರತದಲ್ಲಿ ಅಲ್ ಖೈದಾ ಸಂಘಟನೆ ಬಲಪಡಿಸುತ್ತೇವೆ ಎಂದು ಉಗ್ರ ಸಂಘಟನೆ ಮುಖ್ಯಸ್ಥ ಜವಹರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ತಜ್ನರೊಬ್ಬರು ಪ್ರತಿಕ್ರಿಯಿಸಿದ್ದು, ಉಗ್ರ ಸಂಘಟನೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತದಲ್ಲಿ ತಮ್ಮ ಸಂಘಟನೆ ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಲಷ್ಕರ್-ಎ-ತೋಯ್ಬಾ ಸಂಘಟನೆ ಕೂಡ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಕೈ ಜೋಡಿಸಿದ್ದು ಭಾರತಕ್ಕೆ ಮುಳುವಾಗಿದೆ ಎಂದು ಅಮೆರಿಕದ ಭಯೋತ್ಪಾದನಾ ನಿಗ್ರಹ ತಜ್ನ ರಿಡೆಲ್ ಹೇಳಿದ್ದಾರೆ.
ಭಾರತದ ಮೇಲೆ ದಾಳಿ ನಡೆಸಿ, ಅಲ್ಲಿ ಗುಂಪುಕಟ್ಟಿ ಅಲ್ ಖೈದಾ ಶಾಖೆ ತೆರೆಯುವ ಕುರಿತು ಬೆದರಿಕೆ ಹಾಕಿರುವ ವಿಡೊಯೋವನ್ನು ಇಂಟರ್ ನೆಟ್ ನಲ್ಲಿ ಅಲ್ ಖೈದಾ ಬಿಡುಗಡೆ ಮಾಡಲಾಗಿದೆ.