Untitled Document
Sign Up | Login    
Dynamic website and Portals
  
May 21, 2015

ಜಿ-ಸ್ಯಾಟ್ 6 ಉಪಗ್ರಹ ಜುಲೈ ಅಥವಾ ಆಗಸ್ಟ್ ನಲ್ಲಿ ಉಡಾವಣೆ

ಬೆಂಗಳೂರು : ಮುಂದುವರಿದ ಸಂವಹನ ಉಪಗ್ರಹ ’ಜಿ-ಸ್ಯಾಟ್‌ 6' ಜುಲೈ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಡಾ|ಎ.ಎಸ್‌.ಕಿರಣ್‌ ಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರಿನ ಕೇಂದ್ರೀಯ ಉತ್ಪಾದನಾ ತಾಂತ್ರಿಕ ಸಂಸ್ಥೆ (ಸಿಎಂಟಿಐ) ಆವರಣದಲ್ಲಿ ಭಾರತೀಯ ಮಾಪನಶಾಸ್ತ್ರ ಸೊಸೈಟಿ ಹಮ್ಮಿಕೊಂಡಿದ್ದ ’ವಿಶ್ವ ಮಾಪನಶಾಸ್ತ್ರ ದಿನಾಚರಣೆ' ಅಂಗವಾಗಿ ನಡೆದ ವಿಚಾರಸಂಕಿರಣ ಹಾಗೂ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಐದು ಟ್ರಾನ್ಸ್‌ ಪಾಂಡರ್‌ಗಳನ್ನು ಒಳಗೊಂಡ ಬಹೂಪಯೋಗಿ ಸೇವೆಗಳನ್ನು ಒಳಗೊಂಡ ಬಹುನಿರೀಕ್ಷಿತ ಜಿ-ಸ್ಯಾಟ್‌ 6 ಉಪಗ್ರಹ ಉಡಾವಣೆಗೆ ಸಿದ್ಧತೆಗಳು ನಡೆದಿದ್ದು, ಜುಲೈ ಕೊನೆಯ ವಾರ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ನಭಕ್ಕೆ ಚಿಮ್ಮಲಿದೆ. ಉಪಗ್ರಹದಲ್ಲಿ ಸಣ್ಣ ಡಿವೈಸ್‌ ಗಳಿದ್ದು, ಆ್ಯಂಟೆನಾ ದೊಡ್ಡದಾಗಿರುತ್ತದೆ. ಇದರಿಂದ ಸಿಗ್ನಲ್‌ ಗ‌ಳನ್ನು ಸ್ವೀಕರಿಸಲು ಸಹಾಯವಾಗಲಿದೆ.

ಸಂವಹನ ಕ್ಷೇತ್ರದಲ್ಲಿ ದೇಶದ ಹಲವು ಬೇಡಿಕೆಗಳನ್ನು ಇದು ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಾಗತಿಕ ಜಿಪಿಎಸ್‌ ತಂತ್ರ ಜ್ನಾನಕ್ಕೆ ಸರಿಸಮವಾಗಿ ಎನ್‌.ಆರ್‌.ಎನ್‌.ಎಸ್‌.ಎಸ್‌ ಅನ್ನು ರೂಪಿಸಲು ಉದ್ದೇಶಿಸ ಲಾಗಿದೆ ಎಂದು ಹೇಳಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited