ವಾಷಿಂಗ್ಟನ್ : ಅಮೆರಿಕ ಸೇರಿದ್ದ ಸುಮಾರು 200ಕ್ಕೂ ಅಧಿಕ ಬೆಲೆ ಬಾಳುವ ಪುರಾತನ ಕಾಲದ ಸುಮಾರು 66.74ಕೋಟಿ ಮೌಲ್ಯದ ಕಲಾಕೃತಿಗಳನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ.
ಪಂಚರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಮೂರುದಿನಗಳ ಅಮೆರಿಕಾ ಭೇಟಿಯಲ್ಲಿದ್ದು, ವಾಷಿಂಗ್ಟನ್ ಡಿಸಿಗೆ ಆಗಮಿಸಿದಾಗ ಪ್ರಧಾನಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ನಂತರ ವಾಷಿಂಗ್ಟನ್ನ ಬ್ಲೇರ್ ಹೌಸ್ನಲ್ಲಿ ನಡೆದ ಸಮಾರಂಭದಲ್ಲಿ ಮೊದಿ ಅವರಿಗೆ ಈ ಪುರಾತನ ವಿಗ್ರಹ ಕಲಾಕೃತಿಗಳನ್ನು ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಪ್ರಧಾನಿ, ಈ ಕಲಾಕೃತಿಗಳನ್ನು ಹಣಕ್ಕಾಗಿ ಮಾರಾಟ ಮಾಡಿರಬಹುದು. ಆದರೆ ಇವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಒಂದು ಭಾಗ ಎಂದರು.
ಇದರಲ್ಲಿ ಒಂದು ಸಾವಿರ ವರ್ಷಗಳ ಹಿಂದಿನ ಗಣೇಶನ ಕಂಚಿನ ವಿಗ್ರಹ, ಚೆನ್ನೈನ ಶಿವನ ದೇವಾಲಯದಿಂದ ಕಳವಾಗಿದ್ದ ಚೋಳರ ಕಾಲದ ಕವಿ, ಸಂತ ಮನಿಕ್ಕವಿಚವಕರ್ ಪ್ರತಿಮೆ,ಬಾಹುಬಲಿ ಮೂರ್ತಿ ಕೂಡಾ ಸೇರಿದಂತೆ ಹಲವು ವಿಗೃಹಗಳನ್ನು ಹಸ್ತಾಂತರಿಸಲಾಗಿದೆ.