ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಗುರುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಭಾರತದ ಆರನೇ ನೌಕಾಯಾನ ಉಪಗ್ರಹ ಐ ಆರ್ ಎನ್ ಎಸ್ ಎಸ್-1 ಎಫ್ ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಗುರುವಾರ ಸಂಜೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್ ಎಲ್ ವಿ ಸಿ 32 ಸೆಟಲೈಟ್ ಮೂಲಕ ಪ್ರತಿ ಸೆಕೆಂಡಿಗೆ ಸುಮಾರು 309 ಕಿಲೋ ಮೀಟರ್ ವೇಗದಲ್ಲಿ ಗಗನಕ್ಕೆ ಚಿಮ್ಮಿರುವುದಾಗಿ ಇಸ್ರೋ ಮೂಲಗಳು ತಿಳಿಸಿವೆ.
ಈಗಾಗಲೇ ಭಾರತ ಐ ಆರ್ ಎನ್ ಎಸ್ ಎಸ್ ಸರಣಿಯ 1ಎ, 1ಬಿ, 1ಸಿ, 1ಡಿ ಹಾಗೂ 1ಇ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿತ್ತು. ಐಆರ್ ಎನ್ ಎಸ್ ಎಸ್ ಕಾರ್ಯಾಚರಣೆ ಆರಂಭಿಸಲು ನಾಲ್ಕು ಉಪಗ್ರಹಗಳು ಸಾಕಾಗಿದ್ದರು. ಉಳಿದ ಮೂರು ಉಪಗ್ರಹಗಳು ಹೆಚ್ಚಿನ ನಿಖರತೆ, ದಕ್ಷತೆಯ ಮಾಹಿತಿ ಒದಗಿಸಲು ಸಹಾಯಕವಾಗಬಲ್ಲವು ಎಂದು ವಿವರಿಸಿದೆ