Untitled Document
Sign Up | Login    
Dynamic website and Portals
  
August 8, 2016

ಕುಖ್ಯಾತ ಗ್ಯಾಂಗ್ ಸ್ಟರ್ ನಯೀಂ ಪೊಲೀಸ್ ಎನ್ ಕೌಂಟರ್ ಗೆ ಬಲಿ

ಕುಖ್ಯಾತ ಗ್ಯಾಂಗ್ ಸ್ಟರ್ ನಯೀಂ ಪೊಲೀಸ್ ಎನ್ ಕೌಂಟರ್ ಗೆ ಬಲಿ

ಹೈದ್ರಾಬಾದ್ : ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ನಯೀಂ ತೆಲಂಗಾಣ ನಕ್ಸಲ್ ನಿಗ್ರಹ ಪಡೆ ಮತ್ತು ಎನ್ ಐಎ ನಡೆಸಿದ ಎನ್ ಕೌಂಟರ್ ಗೆ ಬಲಿಯಾಗಿದ್ದಾನೆ ಎಂದು ತೆಲಂಗಾಣ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

20ಕ್ಕೂ ಹೆಚ್ಚು ಕೊಲೆ ಸೇರಿದಂತೆ, 100ಕ್ಕೂ ಅಧಿಕ ಪ್ರಕರಣಗಳಲ್ಲಿ ಪಾತಕಿ ಮಹಮ್ಮದ್ ನಯೀಮುದ್ದೀನ್ ಬೇಕಾಗಿದ್ದ. ಹೈದರಬಾದ್ ನಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಮೆಹಬೂಬ್ ನಗರದ ಶಾದ್ ನಗರದಲ್ಲಿ ಪೊಲೀಸರು ನಡೆದ ದಾಳಿಯಲ್ಲಿ ಮಹಮ್ಮದ್ ನಯೀಂ ಸಾವನ್ನಾಪ್ಪಿದ್ದಾನೆ ಎನ್ನಲಾಗಿದೆ.

ಐಎಎಸ್ ಅಧಿಕಾರಿ ವ್ಯಾಸ್ ಹಾಗೂ ಹಲವು ಮಾಜಿ ನಕ್ಸಲೀಯರ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ನಯೀಮ್, ಅಡಗಿರುವ ಮಾಹಿತಿ ತಿಳಿದ ನಕ್ಸಲ್ ನಿಗ್ರಹ ಪಡೆ ಮತ್ತು ಗ್ರೇಹಾಂಡ್ ಪೊಲೀಸ್ ಪಡೆ ಮೆಹಬೂಬ್ ನಗರದ ಶಾದ್ ನಗರದಲ್ಲಿರುವ ಟೌನ್ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ನಯೀಂ ಪೊಲೀಸರ ಮೇಲೆ ಪ್ರತಿದಾಳಿ ನಡೆಸಿದ್ದ. ಈ ವೇಳೆ ಪೊಲೀಸರು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ನಯೀಂ ಸಾವನ್ನಪ್ಪಿದ್ದಾನೆ.

ಹಲವು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ಈ ಕುಖ್ಯಾತ ಗ್ಯಾಂಗ್ ಸ್ಟರ್ ನಯೀಂ ಮೂಲತಃ ನಲಗೊಂಡ ಜಿಲ್ಲೆಯ ಭುವನಗಿರಿ ನಿವಾಸಿಯಾಗಿದ್ದ.

 

 

Share this page : 
 

Table 'bangalorewaves.bv_news_comments' doesn't exist