ನವದೆಹಲಿ : ಈ ವರ್ಷದ ಮೊದಲ ಖಗ್ರಾಸ ಚಂದ್ರ ಗ್ರಹಣ&id=17835'>ಚಂದ್ರ ಗ್ರಹಣ ಶನಿವಾರ ಘಟಿಸಲಿದ್ದು, ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ಗೋಚರಿಸಲಿದೆ.
ಅರುಣಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಖಗ್ರಾಸ ಚಂದ್ರ ಗ್ರಹಣ&id=17835'>ಚಂದ್ರ ಗ್ರಹಣ ಕಾಣಿಸಲಿದ್ದರೆ, ದೇಶದ ಉಳಿದ ಭಾಗಗಳಲ್ಲಿ ಭಾಗಶಃ ಗ್ರಹಣ ಕಂಡುಬರಲಿದೆ.
ಆಕಾಶಕಾಯಗಳಾದ ಸೂರ್ಯ ಹಾಗೂ ಚಂದ್ರನ ಪಥದ ಮಧ್ಯೆ ಭೂಮಿ ಬಂದಾಗ ಅದರ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಗ್ರಹಣ&id=17835'>ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಪ್ರಾಕೃತಿಕ ನಿಯಮ ಶನಿವಾರ ಭಾರತೀಯ ಕಾಲಮಾನ ಮಧ್ಯಾಹ್ನ 3.47ಕ್ಕೆ ಆರಂಭವಾಗಲಿದೆ. ಸಂಜೆ 5.27ರ ಹೊತ್ತಿಗೆ ಚಂದ್ರನ ಮೇಲ್ಪೈ ಖಗ್ರಾಸ ಗ್ರಹಣದಿಂದ ಗೋಚರಿಸಲಿದ್ದು, ಅದು 5.32ರವರೆಗೂ ಕಾಣಲಿದೆ. ಬಳಿಕ ಗ್ರಹಣ ಬಿಡುಗಡೆ ಪ್ರಕ್ರಿಯೆ ಶುರುವಾಗಿ 7.14ಕ್ಕೆ ಮುಕ್ತಾಯಗೊಳ್ಳಲಿದೆ.
ಅರುಣಾಚಲ ಪ್ರದೇಶದ 'ತೇಜು ಮತ್ತು ರೋಯಿಂಗ್' ಎಂಬಲ್ಲಿ 4 ನಿಮಿಷ 43 ಸೆಕಂಡು ಅವಧಿಯಲ್ಲಿ ಗ್ರಹಣ ಕಾಣಿಸಲಿದೆ. ದಿಬ್ರುಗಢ, ಇಂಫಾಲ, ಕೊಹಿಮಾ, ಪೋರ್ಟ್ಬ್ಲೇರ್, ಕೋಲ್ಕೊತಾ, ಹೈದರಾಬಾದ್ನಲ್ಲೂ ಗ್ರಹಣ ಗೋಚರಿಸಲಿದೆ ಎಂದು ಇಲ್ಲಿನ ಎಂ.ಪಿ. ಬಿರ್ಲಾ ಇನ್ಸಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆ ಹೇಳಿದೆ. ಇನ್ನುಳಿದಂತೆ ಅಮೆರಿಕ, ಉತ್ತರ ಅಮೆರಿಕ, ಜಪಾನ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಡೋನೇಷ್ಯಾದಲ್ಲೂ ಗ್ರಹಣ ಗೋಚರಿಸಲಿದೆ.